ETV Bharat / state

ಟ್ಯಾಕ್ಸಿಗಳಿಗೆ ಮೀಟರ್ ಅಳವಡಿಕೆ ಕಡ್ಡಾಯ ಕೋರಿ ಅರ್ಜಿ: ಸರ್ಕಾರಕ್ಕೆ ನೋಟಿಸ್ ಜಾರಿ - High Court Notice - HIGH COURT NOTICE

ಟ್ಯಾಕ್ಸಿಗಳಿಗೆ ಮೀಟರ್ ಅಳವಡಿಕೆ ಕಡ್ಡಾಯ ಕೋರಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್​ ಇಂದು ರಾಜ್ಯ ಸರ್ಕಾರಕ್ಕೆ ನೋಟಿಸ್ ನೀಡಿದೆ.

PETITION  METERS FOR TAXIS  COURT NOTICE ISSUED TO GOVT  BENGALURU
ಟ್ಯಾಕ್ಸಿಗಳಿಗೆ ಮೀಟರ್ ಅಳವಡಿಕೆ ಕಡ್ಡಾಯ ಕೋರಿ ಅರ್ಜಿ : ಸರ್ಕಾರಕ್ಕೆ ನೋಟಿಸ್ ಜಾರಿ
author img

By ETV Bharat Karnataka Team

Published : Apr 23, 2024, 10:02 PM IST

ಬೆಂಗಳೂರು: ರಾಜ್ಯದಲ್ಲಿ ಪ್ರಸ್ತುತ ಸಂಚರಿಸುತ್ತಿರುವ ಎಲ್ಲ ಮಾದರಿಯ ಟ್ಯಾಕ್ಸಿಗಳಿಗೆ ಮೀಟರ್ ಅಳವಡಿಕೆ ಕಡ್ಡಾಯಗೊಳಿಸುವಂತೆ ಕೋರಿರುವ ಅರ್ಜಿ ಸಂಬಂಧ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ. ಸಾರಿಗೆ ಇಲಾಖೆಯ ನಿವೃತ್ತ ಸಿಬ್ಬಂದಿ ಮೊಹಮ್ಮದ್ ದಸ್ತಗೀರ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ವಿಭಾಗೀಯ ಪೀಠ, ಪ್ರತಿವಾದಿಗಳಿಗೆ ನೋಟಿಸ್ ಜಾರಿ ಮಾಡಿ ಆಕ್ಷೇಪಣೆ ಸಲ್ಲಿಸಲು ಸೂಚನೆ ನೀಡಿ ಜೂ.19ಕ್ಕೆ ವಿಚಾರಣೆ ಮುಂದೂಡಿದೆ.

ಅರ್ಜಿದಾರ ದಸ್ತಗೀರ್ ಸ್ವತಃ ವಾದ ಮಂಡಿಸಿ, ಕರ್ನಾಟಕ ಮೋಟಾರು ವಾಹನ ಕಾಯಿದೆ 1989ರ ಸೆಕ್ಷನ್ 129 ಅನ್ವಯ ಎಲ್ಲಾ ಟ್ಯಾಕ್ಸಿಗಳಿಗೆ ಕಡ್ಡಾಯ ಮೀಟರ್ ಅಳವಡಿಕೆ ಜಾರಿಗೂಳಿಸಲು ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿದರು. ಪ್ರಸ್ತುತ ನಿಯಮವನ್ನು ಜಾರಿಗೊಳಿಸದ ಕಾರಣ ಟ್ಯಾಕ್ಸಿಗಳು ಪ್ರಯಾಣಿಕರಿಂದ ಮನಬಂದಷ್ಟು ಶುಲ್ಕ ಜಾರಿಗೊಳಿಸುತ್ತಿವೆ. ಆ ದರಗಳಿಗೆ ಯಾವುದೇ ಮಿತಿ ಇಲ್ಲದಾಗಿದೆ. ಹಾಗಾಗಿ ಆಟೋರಿಕ್ಷಾಗಳಿಗೆ ಜಾರಿಗೊಳಿಸಿರುವಂತೆ, ಕಾನೂನು ಮತ್ತು ಮಾಪನ ಶಾಸ್ತ್ರ ಇಲಾಖೆಯಿಂದ ಪರೀಕ್ಷಿಸಿ ಪ್ರಮಾಣೀಕರಿಸಲ್ಪಟ್ಟಿರುವ ಮೀಟರ್‌ಗಳನ್ನು ಎಲ್ಲ ಬಗೆಯ ಟ್ಯಾಕ್ಸಿಗಳಿಗೆ ಅಳವಡಿಸಬೇಕು. ಇದರಿಂದ ಸಾರ್ವಜನಿಕರಿಗೆ ಇದೀಗ ಬೀಳುತ್ತಿರುವ ಅಧಿಕ ಹೊರೆ ತಗ್ಗಲಿದೆ ಎಂದು ಅರ್ಜಿಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ಕನ್ನಡಿಗರ ನೆಲ-ಜಲ ಪಡೆದು ಉದ್ಯೋಗ ನೀಡದಿದ್ದರೆ ಹೇಗೆ? ಖಾಸಗಿ ಕಂಪನಿಗಳ ನಡೆಗೆ ಹೈಕೋರ್ಟ್ ಗರಂ - High Court

ETV Bharat Logo

Copyright © 2025 Ushodaya Enterprises Pvt. Ltd., All Rights Reserved.