ETV Bharat / state

ಧಾರವಾಡ: ಟೆಂಟ್ ಮೇಲೆ ಪಕ್ಕದ ಮನೆ ಗೋಡೆ ಕುಸಿತ: ಓರ್ವ ಸಾವು, ಇಬ್ಬರಿಗೆ ಗಾಯ - House Wall Collapse - HOUSE WALL COLLAPSE

ಪಕ್ಕದ ಮನೆಯ ಗೋಡೆ ಕುಸಿದು ಬಿದ್ದು, ವ್ಯಕ್ತಿಯೊಬ್ಬ ಮೃತಪಟ್ಟ ಘಟನೆ ಧಾರವಾಡ ಜಿಲ್ಲೆಯಲ್ಲಿ ನಡೆದಿದೆ.

wall collapse
ಗೋಡೆ ಕುಸಿತ (ETV Bharat)
author img

By ETV Bharat Karnataka Team

Published : Jul 26, 2024, 10:44 PM IST

ಟೆಂಟ್ ಮೇಲೆ ಪಕ್ಕದ ಮನೆ ಗೋಡೆ ಕುಸಿತ (ETV Bharat)

ಧಾರವಾಡ: ನಿರಂತರ ಮಳೆಯಿಂದ ಟೆಂಟ್ ಮೇಲೆ ಪಕ್ಕದ ಮನೆಯ ಗೋಡೆ ಕುಸಿದು ಬಿದ್ದು, ಓರ್ವ ಮೃತಪಟ್ಟ ಘಟನೆ ಧಾರವಾಡ ತಾಲೂಕಿನ ವೆಂಕಟಾಪುರ ಗ್ರಾಮದಲ್ಲಿ ಸಂಭವಿಸಿದೆ. ಯಲ್ಲಪ್ಪ ರಾಮಣ್ಣ ಹಿಪ್ಪಿಯವರ (48) ಮೃತ ವ್ಯಕ್ತಿಯಾಗಿದ್ದಾರೆ.

ಪಕ್ಕದ ಮನೆ ಗೋಡೆ ಕುಸಿದು ಬಿದ್ದ ಪರಿಣಾಮವಾಗಿ ಟೆಂಟ್​ನಲ್ಲಿದ್ದ ಯಲ್ಲಪ್ಪ ಮೃತಪಟ್ಟಿದ್ದಾರೆ. ಅಲ್ಲದೇ, ಯಲ್ಲಪ್ಪನ ಪತ್ನಿ ಹನುಮವ್ವ (38) ಹಾಗೂ ಮಗಳು ಯಲ್ಲವ್ವ(17) ಎಂಬವರಿಗೆ ಗಂಭೀರ ಗಾಯಗಳಾಗಿವೆ.

ಗಾಯಾಳುಗಳನ್ನು ಧಾರವಾಡ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಕುಸಿದು ಬಿದ್ದ ಗೋಡೆ ಅಡಿ ಮೂವರೂ ಸಿಲುಕಿದ್ದರು. ಗ್ರಾಮಸ್ಥರು ಮೂವರನ್ನೂ ಹೊರತೆಗೆದಿದ್ದಾರೆ. ಆದರೆ, ಬಲವಾಗಿ ಪೆಟ್ಟು ಬಿದ್ದ ಕಾರಣ ಯಲ್ಲಪ್ಪ ಮೃತಪಟ್ಟಿದ್ದಾರೆ. ಗರಗ ಪೊಲೀಸ್​​ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಈ ಕುರಿತು ಧಾರವಾಡ ಉಪವಿಭಾಗಾಧಿಕಾರಿ ಶಾಲಮ್ ಹುಸೇನ್ ಮಾತನಾಡಿ, ''ಟೆಂಟ್ ಹಾಕಿಕೊಂಡು ಕುಟುಂಬ ಇತ್ತು. ಅದರ ಪಕ್ಕ ಒಂದು ಹಂಚಿನ ಮನೆ ಇದ್ದು, ಅದರ ಗೋಡೆಯು ಟೆಂಟ್ ಮೇಲೆ‌ ಕುಸಿದು ಬಿದ್ದಿದೆ. ಘಟನೆಯಲ್ಲಿ ಯಲ್ಲಪ್ಪ ಎಂಬುವರು ಅವಶೇಷಗಳಡಿ ಸಿಲುಕಿದ್ದರು. ಅವರನ್ನು ಹೊರತೆಗೆದು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆ ಅಸುನೀಗಿದ್ದಾರೆ. ಅವಶೇಷಗಳಡಿ ಸಿಲುಕಿದ ಪತ್ನಿ ಮತ್ತು ಮಗಳನ್ನು ರಕ್ಷಣೆ ಮಾಡಲಾಗಿದೆ. ಪತ್ನಿ ಹನುಮವ್ವ, ಮಗಳು ಯಲ್ಲವ್ವಳಿಗೆ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ. ಮೃತ ವ್ಯಕ್ತಿಯ ಕುಟುಂಬಕ್ಕೆ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಒದಗಿಸಲಾಗುವುದು'' ಎಂದು ತಿಳಿಸಿದರು.

ಇದನ್ನೂ ಓದಿ: ನಾಗಮಂಗಲದಲ್ಲಿ ಕಾರು ಹಾಗೂ ಲಾರಿ ನಡುವೆ ಮುಖಾಮುಖಿ ಡಿಕ್ಕಿ: ಪತ್ರಕರ್ತ ಸಾವು - Journalist died in accident

ETV Bharat Logo

Copyright © 2024 Ushodaya Enterprises Pvt. Ltd., All Rights Reserved.