ETV Bharat / state

ರಾಯಚೂರು: ಟಿಪ್ಪು ನಾಮಫಲಕಕ್ಕೆ ಅವಮಾನ; ರಸ್ತೆ ತಡೆದು ಪ್ರತಿಭಟನೆ - ರಾಯಚೂರು

ಟಿಪ್ಪು ಸುಲ್ತಾನ್ ನಾಮಫಲಕಕ್ಕೆ ಅವಮಾನ ಮಾಡಲಾಗಿದೆ ಎಂದು ರಾಯಚೂರಿನ ಸಿರವಾರದಲ್ಲಿ ಇಂದು ಯುವಕರು ರಸ್ತೆ ತಡೆದು ಪ್ರತಿಭಟಿಸಿದರು.

Etv Bharat
Etv Bharat
author img

By ETV Bharat Karnataka Team

Published : Jan 31, 2024, 12:59 PM IST

Updated : Jan 31, 2024, 1:10 PM IST

ರಾಯಚೂರು: ಟಿಪ್ಪು ಸುಲ್ತಾನ್ ನಾಮಫಲಕಕ್ಕೆ ಅವಮಾನ ಮಾಡಿರುವುದನ್ನು ಖಂಡಿಸಿ ಸಿರವಾರದಲ್ಲಿ ಇಂದು ಯುವಕರು ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು. ಟಿಪ್ಪು ಸುಲ್ತಾನ್ ಸರ್ಕಲ್​ನಲ್ಲಿ ಟಿಪ್ಪು ಭಾವಚಿತ್ರ ಹಾಗೂ ನಾಮಫಲಕ ಅಳವಡಿಸಲಾಗಿದೆ. ಈ ನಾಮಫಲಕಕ್ಕೆ ಕಿಡಿಗೇಡಿಗಳು ಅವಮಾನಿಸಿದ್ದಾರೆ. ತಡರಾತ್ರಿ ಈ ಕೃತ್ಯ ಎಸಗಿರುವ ಶಂಕೆ ಇದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಟಿಪ್ಪು ಸುಲ್ತಾನ್ ನಾಮಫಲಕಕ್ಕೆ ಅವಮಾನ  ರಸ್ತೆ ತಡೆದು ಪ್ರತಿಭಟನೆ  ಟಿಪ್ಪು ಸುಲ್ತಾನ್  Tippu Sultan  youth protested
ರಸ್ತೆ ತಡೆದು ಪ್ರತಿಭಟಿಸಿದ ಯುವಕರು

ಪ್ರತಿಭಟನಾ ಸ್ಥಳಕ್ಕೆ ಪೊಲೀಸರು ಭೇಟಿ

ಸುಮಾರು ಎರಡರಿಂದ ಮೂರು ಗಂಟೆಗಳ ಕಾಲ ಸಿರವಾರ ಮೂಲಕ ಹಾದು ಹೋಗುವ ರಾಯಚೂರು-ಲಿಂಗಸೂಗೂರು ಮುಖ್ಯ ರಾಜ್ಯ ಹೆದ್ದಾರಿ ಬಂದ್ ಮಾಡಿದರು. ಟೈರ್‌ಗೆ‌ ಬೆಂಕಿ ಹಚ್ಚಲಾಯಿತು. ಕೃತ್ಯವೆಸಗಿದ ಆರೋಪಿಗಳನ್ನು ಕೂಡಲೇ ಬಂಧಿಸುವುದಾಗಿ ಪೊಲೀಸರು ಭರವಸೆ ನೀಡಿದ ನಂತರ, ಯುವಕರು ಪ್ರತಿಭಟನೆ ಹಿಂಪಡೆದರು. ರಾಜ್ಯ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ಕೆಲಕಾಲ ಅಡಚಣೆ ಉಂಟಾಯಿತು.

ಇದನ್ನೂ ಓದಿ: ಮೈಸೂರು: ಇಬ್ಬರ ಮೇಲೆ ದಾಳಿ ನಡೆಸಿದ ಹುಲಿ ಕೆಲವೇ ಗಂಟೆಗಳಲ್ಲಿ ಸೆರೆ

Last Updated : Jan 31, 2024, 1:10 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.