ETV Bharat / state

ಡಿಕೆಶಿ-ಹೆಚ್​ಡಿಕೆ ನಡುವಿನ ವೈಯಕ್ತಿಕ ಟೀಕೆಗಳಿಂದ ಪಾದಯಾತ್ರೆ ಡೈವರ್ಟ್: ಎಸ್.ಆರ್.ವಿಶ್ವನಾಥ್ - S R Vishwanath - S R VISHWANATH

ಬಿಜೆಪಿ ಹಾಗೂ ಜೆಡಿಎಸ್​ ಮೈತ್ರಿ ಪಾದಯಾತ್ರೆ ತನ್ನ ಮೂಲ ಉದ್ದೇಶ ಮರೆತು ಹೆಚ್​.ಡಿ.ಕುಮಾರಸ್ವಾಮಿ ಹಾಗೂ ಡಿ.ಕೆ.ಶಿವಕುಮಾರ್​ ಅವರ ವೈಯಕ್ತಿಕ ಟೀಕೆಗಳಿಗೆ ಹೆಚ್ಚು ಒತ್ತು ನೀಡುತ್ತಿರುವಂತಿದೆ ಎಂದು ಬಿಜೆಪಿ ಶಾಸಕ ಎಸ್.ಆರ್.ವಿಶ್ವನಾಥ್ ಹೇಳಿದ್ದಾರೆ.

MLA S R Vishwanath
ಶಾಸಕ ಎಸ್.ಆರ್.ವಿಶ್ವನಾಥ್ (ETV Bharat)
author img

By ETV Bharat Karnataka Team

Published : Aug 6, 2024, 5:29 PM IST

ಬೆಂಗಳೂರು: "ಮುಡಾ ಹಗರಣ ವಿರುದ್ಧದ ಹೋರಾಟ ರಾಷ್ಟ್ರವ್ಯಾಪಿ ತಲುಪಿದೆ. ಇದರ ನಡುವೆ ಪಾದಯಾತ್ರೆಯೂ ಪ್ರಾರಂಭವಾಗಿದೆ. ಆದರೆ, ಈ ಪಾದಯಾತ್ರೆ ಡೈವರ್ಟ್ ಆಗಿದೆ ಅನಿಸುತ್ತಿದೆ" ಎಂದು ಬಿಜೆಪಿ ಶಾಸಕ ಎಸ್.ಆರ್.ವಿಶ್ವನಾಥ್ ಅಭಿಪ್ರಾಯಪಟ್ಟರು.

ವಿಕಾಸಸೌಧದಲ್ಲಿ ಇಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, "ಇದಕ್ಕೆ ಕಾರಣ ಡಿ.ಕೆ. ಶಿವಕುಮಾರ್ ಮತ್ತು ಹೆಚ್.ಡಿ.ಕುಮಾರಸ್ವಾಮಿ ನಡುವಿನ ವೈಯಕ್ತಿಕ ಟೀಕೆಗಳಿಗೆ ಹೆಚ್ಚು ಒತ್ತು ನೀಡುತ್ತಿರುವುದು" ಎಂದು ಹೇಳಿದರು.

"ನಮ್ಮ ಪಾದಯಾತ್ರೆಯ ಉದ್ದೇಶ ವಾಲ್ಮೀಕಿ ಮತ್ತು ಮುಡಾ ಹಗರಣದ ಕುರಿತು ಜನರಿಗೆ ತಿಳಿಸುವುದು. ಆದರೆ, ಎರಡು ದಿನಗಳಿಂದ ವೈಯಕ್ತಿಕ ಟೀಕೆ‌ಗಳು ಹೆಚ್ಚಾಗಿವೆ. ಇದರಿಂದ ಕಾರ್ಯಕರ್ತರ ಹುಮ್ಮಸ್ಸು ಕಡಿಮೆಯಾಗುತ್ತಿದೆ ಅನಿಸುತ್ತಿದೆ. ಇವರ ವಾಗ್ಯುದ್ಧಕ್ಕೆ ಬೇರೆ ಕಡೆ ವೇದಿಕೆ‌ ಕಲ್ಪಿಸಿಕೊಡಬೇಕು. ಮುಖ್ಯಮಂತ್ರಿ ವಿರುದ್ಧದ ಹೋರಾಟ ಮರೆತೇ ಬಿಟ್ರು‌ ಅನಿಸ್ತಿದೆ. ನಮ್ಮ ಗುರಿ ಇರುವುದು ಸಿಎಂ ರಾಜೀನಾಮೆ. ನಿರಂತರವಾಗಿ ಅದಕ್ಕೆ‌ ಒತ್ತು ಕೊಡಬೇಕು" ಎಂದರು.

ಬಿ.ವೈ.ವಿಜಯೇಂದ್ರ, ಬಿ.ಎಸ್.ಯಡಿಯೂರಪ್ಪ ಅವರ ಹಗರಣಗಳನ್ನೂ ಬಿಚ್ಚಿಡುತ್ತೇನೆ ಎಂಬ ಡಿಕೆಶಿ ಹೇಳಿಕೆ ಕುರಿತು ಪ್ರತಿಕ್ರಿಯಿಸಿ, "ಈಗ ಆಡಳಿತದಲ್ಲಿ ಇರುವುದು ಅವರು. ಈಗಾಗಲೇ ಹಗರಣಗಳನ್ನು ಬಿಚ್ಚಿಡಬೇಕಿತ್ತು. ಈ ರೀತಿ ಹೇಳಿ ಜನರ ಗಮನ ಬೇರೆ ಕಡೆ ಸೆಳೆಯುತ್ತಿದ್ದಾರೆ ಅಷ್ಟೇ. ಈಗಾಗಲೇ ನಮ್ಮ ಕಾಲದ ಹಗರಣಗಳನ್ನು ದಾಖಲೆ‌ಸಮೇತ ಬಿಚ್ಚಿಡಬೇಕಿತ್ತು. ಯಾಕೆ‌ ಬಿಚ್ಚಿಟ್ಟಿಲ್ಲ" ಎಂದು ಪ್ರಶ್ನೆ ಮಾಡಿದರು.

ವಿಜಯೇಂದ್ರ ಮತ್ತು ಬಿಎಸ್​ವೈ ವಿರುದ್ಧ ಕ್ರಮ ಕೈಗೊಳ್ಳದಿದ್ರೆ, ನನ್ನ ವಿರುದ್ಧ ಯಾಕೆ ಕ್ರಮ ಕೈಗೊಳ್ಳಬೇಕು ಎಂಬ ಯತ್ನಾಳ್ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿ, "ಅವರು ಯಾಕೆ ಹೀಗೆ ಮಾತನಾಡುತ್ತಾರೆ ಅಂತ ಗೊತ್ತಿಲ್ಲ. ವರಿಷ್ಠರು ಕೂಡ ಅವರ ಮಾತುಗಳನ್ನು ಗಂಭೀರವಾಗಿ ತೆಗೆದುಕೊಂಡಿದ್ದಾರೆ. ಪಕ್ಷಕ್ಕಿಂತ ಯಾರೂ ಕೂಡ ದೊಡ್ಡವರಿಲ್ಲ. ಈ ಹಿಂದೆಯೂ ರಾಜ್ಯದ ಮುಖ್ಯಮಂತ್ರಿ ಆಗಿದ್ದವರನ್ನೇ ಉಚ್ಛಾಟನೆ ಮಾಡಿರುವ ಉದಾಹರಣೆ ಇವೆ. ಏನಾದರು ಇದ್ದರೆ ನಾಲ್ಕು ಗೋಡೆ ಮಧ್ಯ ಇರಬೇಕು. ಈ ರೀತಿಯ ಹೇಳಿಕೆ ಕೊಟ್ಟು ಕಾರ್ಯಕರ್ತರ ವಿಶ್ವಾಸ ಕಡಿಮೆ ಮಾಡಿದಂತಾಗುತ್ತದೆ. ಅದನ್ನು ಯತ್ನಾಳ್ ಅವರೂ ಕೂಡ ಅರ್ಥ ಮಾಡಿಕೊಳ್ಳಬೇಕು‌. ಅವರಿಗೆ ನೋವು ಆಗಿದ್ದರೆ ಅದನ್ನು ವರಿಷ್ಠರ‌ ಮುಂದೆ ಹೇಳಬೇಕು" ಎಂದು ಸಲಹೆ ನೀಡಿದರು.

ಇದನ್ನೂ ಓದಿ: ಸಿದ್ದರಾಮಯ್ಯಗೆ ತೊಂದರೆ ಕೊಟ್ರೆ ಬೀದಿಗಿಳಿದು ಹೋರಾಟ: ಅಹಿಂದ ನಾಯಕರ ಎಚ್ಚರಿಕೆ - AHINDA Leaders

ETV Bharat Logo

Copyright © 2024 Ushodaya Enterprises Pvt. Ltd., All Rights Reserved.