ETV Bharat / state

Watch... ಕಾವೇರಿ ನದಿ ಹೊರಹರಿವು ಹೆಚ್ಚಳ: ಹೊಗೇನಕಲ್ ಜಲಪಾತದ ರಮಣೀಯ ದೃಶ್ಯವನ್ನೊಮ್ಮೆ ನೋಡಿ - Hogenakkal Falls

ಕಾವೇರಿ ನದಿಯ ಹೊರಹರಿವು ಹೆಚ್ಚಳವಾಗಿರುವುದರ ಹಿನ್ನೆಲೆ ಹೊಗೇನಕಲ್ ಜಲಪಾತವು ಮೈದುಂಬಿ ಹರಿಯುತ್ತಿದೆ.

Overflowing Cauvery River  Hogenakkal Falls  Chamarajanagar  heavy rain
ಮೈದುಂಬಿ ಹರಿಯುತ್ತಿರುವ ಹೊಗೆನಕಲ್ ಜಲಪಾತ (ETV Bharat)
author img

By ETV Bharat Karnataka Team

Published : Jul 17, 2024, 2:53 PM IST

overflowing-cauvery-river-scenic-view-of-hogenakkal-falls (ETV Bharat)

ಚಾಮರಾಜನಗರ: ಕಾವೇರಿ ಹೊರಹರಿವು ಹೆಚ್ಚುತ್ತಿದ್ದಂತೆ ಕರ್ನಾಟಕ - ತಮಿಳುನಾಡು ಜಲಗಡಿಯಾಗಿರುವ ಹೊಗೇನಕಲ್ ಜಲಪಾತ ಮೈದುಂಬಿ ಹರಿಯುತ್ತಿದೆ. ಹೊಗೇನಕಲ್ ಜಲಪಾತದ ರಮಣೀಯ ದೃಶ್ಯಗಳು ಎಲ್ಲರನ್ನೂ ಸೆಳೆಯುತ್ತಿವೆ.

ಕಾವೇರಿ ಕೊಳ್ಳದಲ್ಲಿ ಹೆಚ್ಚು ಮಳೆ ಆಗುತ್ತಿರುವ ಹಿನ್ನೆಲೆ ನದಿಯ ಹೊರಹರಿವು ಹೆಚ್ಚಾಗಿದೆ. ಹೊಗೇನಕಲ್ ಜಲಪಾತಕ್ಕೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ. ಕಲ್ಲು ಬಂಡೆಗಳ ನಡುವೆ ಜಲ ವೈಯ್ಯಾರ ಸೃಷ್ಟಿಯಾಗಿದೆ.

ಕಳೆದ ವರ್ಷ ಬರ ಆವರಿಸಿದ್ದ ಹಿನ್ನೆಲೆ ಪ್ರವಾಸೋದ್ಯಮಕ್ಕೂ ಹೊಡೆತ ಬಿದ್ದಿತ್ತು.‌ ಆದರೆ, ಈ ಬಾರಿ ಉತ್ತಮ ಮಳೆ ಆಗುತ್ತಿದ್ದು ಹೊಗೇನಕಲ್ ಜಲಪಾತದಲ್ಲಿ ಮತ್ತೆ ಜಲ ವೈಭವ ಮರುಕಳಿಸಿದೆ. ನೀರಿನ ಪ್ರಮಾಣ ಏರುಗತಿ ಇರುವುದರಿಂದ ತಮಿಳುನಾಡು ಮತ್ತು ಕರ್ನಾಟಕ ಎರಡೂ ಭಾಗದಲ್ಲೂ ಜಲಪಾತದ ಅದ್ಭುತ ದೃಶ್ಯಗಳು ನೋಡಲು ಸಿಗುತ್ತಿದೆ.

Overflowing Cauvery River  Hogenakkal Falls  Chamarajanagar  heavy rain
ಹೊಗೆನಕಲ್ ಜಲಪಾತದ ರಮಣೀಯ ದೃಶ್ಯ (ETV Bharat)

ಭರಚುಕ್ಕಿ ಜಲಪಾತಕ್ಕೆ ಜೀವಕಳೆ: ಕಾವೇರಿ ಕೊಳ್ಳದ ಪ್ರದೇಶದಲ್ಲಿ ಭಾರೀ ಮಳೆ ಆಗುತ್ತಿರುವುದರಿಂದ ಕಬಿನಿ ಜಲಾಶಯ ಭರ್ತಿಯಾಗಿ ನದಿಗೆ ಅಧಿಕ ಪ್ರಮಾಣದಲ್ಲಿ ನೀರು ಬಿಡಲಾಗುತ್ತಿದ್ದು, ಇದರ ಪರಿಣಾಮ ಭರಚುಕ್ಕಿ ಜಲಪಾತ ಮೈದುಂಬಿ ಹರಿಯುತ್ತಿದೆ.

ಕೆಳದ ಕೆಲವು ದಿನಗಳಿಂದ ಕೊಳ್ಳೇಗಾಲ ತಾಲೂಕಿನ ಭರಚುಕ್ಕಿ ಜಲಪಾತ ದುಮ್ಮಿಕ್ಕುವ ದೃಶ್ಯಗಳು ನೋಡುಗರನ್ನು ಮನಸೆಳೆಯುತ್ತಿವೆ. ಕಳೆದ ವರ್ಷ ಮಳೆಯಾಗದೇ ಬರದಿಂದ ಜಲಪಾತ ತನ್ನ ಜಲಸಿರಿ ಕಡಿಮೆಯಾಗಿತ್ತು. ಇದೀಗ ಭಾರೀ ಮಳೆ ಮತ್ತು ಕಾವೇರಿ ಹೊರಹರಿವು ಹೆಚ್ಚಳವಾಗಿರುವುದರಿಂದ ಮತ್ತೆ ಜಲ ವೈಭವ ಮರುಕಳಿಸಿದೆ.

ಕಬಿನಿಯಿಂದ ಹೊರ ಹರಿವು ಹೆಚ್ಚಾಗಿದೆ. ಕಾವೇರಿ ನದಿ ಪಾತ್ರದ ಜನರಲ್ಲಿ ಪ್ರವಾಹದ ಆತಂಕ ಕೂಡ ಎದುರಾಗಿದೆ. ಕಾವೇರಿ ನದಿ ಪಾತ್ರದ ಕೊಳ್ಳೇಗಾಲ ತಾಲೂಕಿನ ಹಳೇ ಹಂಪಾಪುರ, ಹಳೇ ಅಣಗಳ್ಳಿ, ದಾಸನಪುರ, ಮುಳ್ಳೂರು, ಸರಗೂರು ಗ್ರಾಮಗಳ ಕೃಷಿ ಭೂಮಿ, ಭಾಗಶಃ ಮನೆಗಳು ಮುಳುಗಡೆ ಆತಂಕ ಸೃಷ್ಟಿಯಾಗಿದೆ. ಕಬಿನಿ ಹಾಗೂ ಕೆಆರ್​ಎಸ್​​​ ಅಣೆಕಟ್ಟಿನ ಇಂದಿನ ನೀರಿನ ಮಟ್ಟದ ಮಾಹಿತಿ ಈ ಕೆಳಗಿನಂತಿದೆ.

ಕಬಿನಿ ಅಣೆಕಟ್ಟು:

ಗರಿಷ್ಠ ಮಟ್ಟ - 2,284 ಅಡಿ

ಇಂದಿನ ಮಟ್ಟ - 2,282.23 ಅಡಿ

ಒಳಹರಿವು - 33,640 ಕ್ಯೂಸೆಕ್​

ಹೊರಹರಿವು - 33,625 ಕ್ಯೂಸೆಕ್

ಕೆಆರ್​ಎಸ್ ಅಣೆಕಟ್ಟು:

ಗರಿಷ್ಠ ಮಟ್ಟ - 124 ಅಡಿ

ಇಂದಿನ ಮಟ್ಟ - 110.60 ಅಡಿ

ಒಳಹರಿವು - 36,674 ಕ್ಯೂಸೆಕ್

ಹೊರ ಹರಿವು - 2,236‌ ಕ್ಯೂಸೆಕ್

ಇದನ್ನೂ ಓದಿ: ಕಬಿನಿ, ಕೆಆರ್​ಎಸ್​ ಸೇರಿ ರಾಜ್ಯದ ವಿವಿಧ ಅಣೆಕಟ್ಟೆಗಳಲ್ಲಿ ಇಂದಿನ ನೀರಿನ ಮಟ್ಟ ಹೀಗಿದೆ - Karnataka Dams Water Level

ETV Bharat Logo

Copyright © 2024 Ushodaya Enterprises Pvt. Ltd., All Rights Reserved.