ಬೆಂಗಳೂರು: ಸಂಚಾರ ಠಾಣೆಯ ಪೊಲೀಸರು ವಿಶೇಷ ಕಾರ್ಯಾಚರಣೆ ಕೈಗೊಂಡು ನಿಯಮ ಉಲ್ಲಂಘನೆ ಮಾಡುತ್ತಿದ್ದ ನೀರಿನ ಟ್ಯಾಂಕರ್ಗಳ ಚಾಲಕರ ವಿರುದ್ಧ ಒಟ್ಟು 595 ಪ್ರಕರಣಗಳನ್ನು ದಾಖಲಿಸಿದ್ದಾರೆ.
ಮಂಗಳವಾರ ನಗರದಾದ್ಯಂತ ವಿಶೇಷ ಕಾರ್ಯಾಚರಣೆ ಕೈಗೊಂಡಿದ್ದ ಸಂಚಾರಿ ಪೊಲೀಸರು, 252 ಸಮವಸ್ತ್ರ ಧರಿಸದ ವಾಹನ ಚಾಲನೆ, 40 ಸೀಟ್ ಬೆಲ್ಟ್ ಧರಿಸದಿರುವುದು, 134 ನೋ ಎಂಟ್ರಿಯಲ್ಲಿ ವಾಹನ ಸಂಚಾರ, 48 ದೋಷಪೂರಿತ ನಂಬರ್ ಪ್ಲೇಟ್, 64 ನೋ ಪಾರ್ಕಿಂಗ್ ನಿಯಮ ಉಲ್ಲಂಘನೆ, 4 ಫುಟ್ ಪಾತ್ ಮೇಲೆ ಪಾರ್ಕಿಂಗ್, 13 ಕರ್ಕಶ ಹಾರ್ನ್ ಮಾಡಿರುವುದು, 1 ಮದ್ಯಪಾನ ಮಾಡಿ ವಾಹನ ಚಾಲನೆ ಸೇರಿದಂತೆ ಒಟ್ಟು 595 ಪ್ರಕರಣಗಳನ್ನು ದಾಖಲಿಸಿಕೊಂಡು ಒಟ್ಟು 3.33 ಲಕ್ಷ ರೂಪಾಯಿ ದಂಡ ಕಲೆ ಹಾಕಿದ್ದಾರೆ.
ಇತ್ತೀಚಿನ ಪ್ರಕರಣಗಳ ಮಾಹಿತಿ, ಸವಾರರ ವಿರುದ್ಧ 22 ಕ್ರಿಮಿನಲ್ ಪ್ರಕರಣಗಳು: ಬೆಂಗಳೂರು ನಗರ ಸಂಚಾರ ವಿಭಾಗದಿಂದ ಕಳೆದ ವರ್ಷ ದೋಷಪೂರಿತ ನೋಂದಣಿ ಫಲಕ ಹಾಗೂ ನಂಬರ್ ಫಲಕ ಇಲ್ಲದೆ ವಾಹನ ಚಾಲನೆ ಮಾಡುತ್ತಿದ್ದ ವಾಹನಗಳ ಸವಾರರ ಮೇಲೆ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು. ನೋಂದಣಿ ಫಲಕ ರಹಿತ 1,535 ಮತ್ತು ದೋಷಪೂರಿತ ನೋಂದಣಿವಿರುವ 1,13,517 ಪ್ರಕರಣಗಳನ್ನು ದಾಖಲು ಮಾಡಲಾಗಿತ್ತು. ನೋಂದಣಿ ಫಲಕಗಳನ್ನು ಉದ್ದೇಶಪೂರ್ವಕವಾಗಿ ಮರೆ ಮಾಚುವ ಜೊತೆಗೆ ಸಂಚಾರ ನಿಯಮ ಉಲ್ಲಂಘನೆಯ ಕಾನೂನು ಜಾರಿ ಕ್ರಮವನ್ನು ಗಾಳಿ ತೂರಿ ವಾಹನ ಚಲಾಯಿಸುತ್ತಿದ್ದವರ ವಿರುದ್ಧ 22 ಕ್ರಿಮಿನಲ್ ಕೇಸ್ಗಳನ್ನು ದಾಖಲಿಸಿಕೊಳ್ಳಲಾಗಿತ್ತು.
880 ಮಾರಣಾಂತಿಕ ಅಪಘಾತ ಪ್ರಕರಣಗಳಲ್ಲಿ 909 ಜನರು ಸಾವನ್ನಪ್ಪಿದ್ದರು. ಮಾರಣಾಂತಿಕವಲ್ಲದ 4,095 ಅಪಘಾತ ಪ್ರಕರಣಗಳಲ್ಲಿ 4,201 ಜನರು ಗಾಯಗೊಂಡಿದ್ದರು. ಸಂಪರ್ಕ ರಹಿತವಾಗಿ 87,25,321 ಪ್ರಕರಣಗಳನ್ನು ದಾಖಲು ಮಾಡಲಾಗಿತ್ತು. ಸಂಪರ್ಕ ಸಹಿತವಾಗಿ 2,49,624 ಸೇರಿದಂತೆ ಸುಮಾರು 90 ಲಕ್ಷ ಸಂಚಾರ ನಿಯಮ ಉಲ್ಲಂಘಟನೆಯ ಕೇಸ್ಗಳನ್ನು ಮಾಡಲಾಗಿತ್ತು. ಒಟ್ಟು 184.83 ಕೋಟಿ ರೂಪಾಯಿ ದಂಡವನ್ನು ಪೊಲೀಸರು ಸಂಗ್ರಹಿಸಿದ್ದರು. ಮದ್ಯಪಾನ ಮಾಡಿ ವಾಹನ ಚಲಾಯಿಸಿದ್ದ 7,055 ಡ್ರಂಕ್ ಅಂಡ್ ಡ್ರೈವ್ ಪ್ರಕರಣಗಳನ್ನು ದಾಖಲಿಸಲಾಗಿತ್ತು'' ಎಂದು ಸಂಚಾರ ಠಾಣೆಯ ಪೊಲೀಸರು ಇತ್ತೀಚೆಗೆ ಮಾಹಿತಿ ನೀಡಿದ್ದರು.
ಇದನ್ನೂ ಓದಿ: ಪ್ಲಾಸ್ಕ್ನಲ್ಲಿ ಚಿನ್ನ, ಬಾಟಲ್ನಲ್ಲಿ ನಾಗರಹಾವು: ಕಸ್ಟಮ್ಸ್ ಕೈಗೆ ಸಿಕ್ಕಿಬಿದ್ದ ಪ್ರಯಾಣಿಕರು