ಶಿವಮೊಗ್ಗ: ''ರಿಚಾರ್ಜ್ ಪದದ ಅರ್ಥ ಕೇವಲ ಮಧು ಹಾಗೂ ಡಿಕೆ ಶಿವಕುಮಾರ್ ಅವರಿಗೆ ಗೂತ್ತಿದೆ'' ಎಂದು ಮಾಜಿ ಸಚಿವ ಕುಮಾರ್ ಬಂಗಾರಪ್ಪ ಸಹೋದರ ಮಧು ಬಂಗಾರಪ್ಪನವರಿಗೆ ತೀರುಗೇಟು ನೀಡಿದರು.
ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಮಾತನಾಡಿ, ''ರಿಚಾರ್ಜ್ ಎನ್ನುವ ಪದ ಬಳಕೆ ಮಾಡಿದ್ದಾರೆ. ಅದು ಡಿ. ಕೆ. ಶಿವಕುಮಾರ್ ಹಾಗೂ ಮಧುಗೆ ಮಾತ್ರ ಗೂತ್ತಿದೆ'' ಎಂದ ಅವರು, ''ನಾನು ಬಿಜೆಪಿ ಕಾರ್ಯಕರ್ತ. ಕ್ಷೇತ್ರದಲ್ಲಿನ ಸಣ್ಣಪುಟ್ಟ ಸಮಸ್ಯೆಯನ್ನು ಪರಿಹರಿಸಿಕೊಂಡು ಬಂದಿದ್ದೇನೆ. ಕೋವಿಡ್ ಸಂದರ್ಭದಲ್ಲಿ ಎಲ್ಲಿ ಇದ್ದಾರೆ. ಅವರು ಪ್ರಚಾರ ಬೇಡ ಅಂದ್ರೆ, ಮೈಸೂರಿನ ಶಕ್ತಿಧಾಮದ ಬಗ್ಗೆ ಯಾಕೆ ಮಾತನಾಡುತ್ತಾರೆ. ಮೈಸೂರಿನ ಶಕ್ತಿಧಾಮದ ಕುರಿತು ಡಾ.ರಾಜ್ ಹಾಗೂ ಅಪ್ಪು ಇದಿದ್ರ ಹೀಗೆ ಆಗುತ್ತಿರಲಿಲ್ಲ'' ಎಂದರು.
ಗೀತ ಶಿವಮೊಗ್ಗದಿಂದ ಯಾವಾಗ ಮನೆ ಖಾಲಿ ಮಾಡುತ್ತಾರೂ ಗೂತ್ತಿಲ್ಲ: ''ಗೀತಾ ಅವರು ಮೇ 5 ಅಥವಾ ಜೂನ್ 7 ರಂದು ಶಿವಮೊಗ್ಗದಲ್ಲಿರುವ ಮನೆಯನ್ನು ಖಾಲಿ ಮಾಡುತ್ತಾರೋ ಗೂತ್ತಿಲ್ಲ. ಒಟ್ಟಿನಲ್ಲಿ ಅವರು ಮನೆ ಖಾಲಿ ಮಾಡೇ ಮಾಡುತ್ತಾರೆ. ಶಿವರಾಜಕುಮಾರ್, ಗೀತಾ ಗೆದ್ದರೆ 24 ಗಂಟೆಗಳ ಡ್ಯಾನ್ಸ್ ಮಾಡಲಾಗುವುದು ಎಂದು ಹೇಳಿದ್ದಾರೆ. ಅವರಿಗೆ ನನ್ನ ಅಭಿನಂದನೆಗಳು'' ಎಂದ ಅವರು, ''ಬಂಗಾರಪ್ಪನವರು ದೊಡ್ಡ ವ್ಯಕ್ತಿ ಅದಕ್ಕಿಂತ ದೊಡ್ಡ ವ್ಯಕ್ತಿ ರಾಜಕುಮಾರ್. ನನ್ನ ತಮ್ಮ, ನನ್ನ ತಂಗಿ ಚುನಾವಣೆಗೆ ನಿಂತಿರುವುದು, ನನ್ನ ಭಾವ ನೇರ ಪ್ರಚಾರಕ್ಕೆ ಬಂದಿರುವುದು. ನಾನು ನಮ್ಮ ಕುಟುಂಬ ಅಂತ ಹೇಳಿದ್ರೆ ಅವರು ಅದನ್ನು ಹೇಳುವುದಕ್ಕೆ ತಯಾರಿಲ್ಲ. ಗೀತಾ ಅವರು ಇಲ್ಲಿ ಸ್ಪರ್ಧೆ ಮಾಡಿದ್ದಾರೆ. ಇಲ್ಲಿ ತಮ್ಮ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಬಹುದಾಗಿತ್ತು. ಅದನ್ನು ಅವರು ಮಾಡಲಿಲ್ಲ. ರಾಜ್ಕುಮಾರ್ಗೆ ರಾಜಕೀಯಕ್ಕೆ ಬರಲು ಆಸೆ ಇತ್ತು. ಅದಕ್ಕೆ ಗೀತಾ ಅವರನ್ನು ಮಗನಿಗೆ ಮದುವೆ ಮಾಡಿಕೊಟ್ಟರು ಎಂದು ಸುಳ್ಳು ಹೇಳುತ್ತಿದ್ದಾರೆ. ರಾಜ್ಕುಮಾರ್ಗೆ ಆಸೆ ಇದ್ದಿದ್ರೆ ಅವರು ಹಿಂದೆಯೇ ಸಿಎಂ ಆಗುತ್ತಿದ್ದರು. ಅವರು ಅಭಿಮಾನಿಗಳೇ ದೇವರು ಎಂದವರು. ಹೀಗೆ ಅವರ ಕುರಿತು ಸುಳ್ಳು ಹೇಳುವುದು ಸರಿಯೇ ಎಂದು ಪ್ರಶ್ನಿಸಿದರು.
ಶಿವಮೊಗ್ಗದ ರಾಜಕಾರಣ ರಾಜ್ಯಕ್ಕೆ ದಿಕ್ಸೂಚಿ: ''ಶಿವಮೊಗ್ಗದ ರಾಜಕಾರಣ ರಾಜ್ಯಕ್ಕೆ ದಿಕ್ಸೂಚಿಯಾಗಿದೆ. ಪ್ರತಿ ಚುನಾವಣೆಯಲ್ಲಿ ರಾಷ್ಟ್ರೀಯ ಪಕ್ಷಗಳು ಅಭಿವೃದ್ಧಿ ಪರ ಮಾತನಾಡುತ್ತಿದ್ದರು. ಅದು ಈ ಭಾರಿ ಕಾಣುತ್ತಿಲ್ಲ. ಅಭಿವೃದ್ಧಿಯೇ ಮೂಲ ಮಂತ್ರ ಎಂಬ ಪದವನ್ನೇ ಬಳಸುತ್ತಿಲ್ಲ. ಐದು ವರ್ಷದಲ್ಲಿ ನಾವು ರಾಜಕೀಯ ಮಾಡಲೇ ಇಲ್ಲ. ಶಾಸಕರು, ಸಂಸದರ ಜೊತೆ ಸೇರಿ ಅಭಿವೃದ್ಧಿ ಮಾಡಿದ್ದೇವೆ. ಆದ್ರೆ, ಸಿದ್ದರಾಮಯ್ಯನವರು ಅಂಕಿ ಅಂಶಗಳನ್ನು ಇಡಬೇಕಾದ್ರೆ ಸುಳ್ಳನ್ನು ಹೇಳುತ್ತಿದ್ದಾರೆ. ಸಿದ್ದರಾಮಯ್ಯನವರು ಕೇಂದ್ರದಿಂದ ಹಣ ಬಿಡುಗಡೆ ಮಾಡಿದಕ್ಕೆ ಒಂದು ಧನ್ಯವಾದಗಳನ್ನು ಸಲ್ಲಿಸಲಿಲ್ಲ. ಅಭಿವೃದ್ಧಿ ಕಾರ್ಯಕ್ರಮ ಮಾಡಿ, ಚುನಾವಣೆಯಲ್ಲಿ ಬಳಕೆ ಮಾಡಿಕೊಳ್ಳಬೇಕಿದೆ. ಬರ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಗ್ರಾಮ ಪಂಚಾಯತಿಗಳಿಗೆ ಯಾವುದೇ ಹಣ ಬಿಡುಗಡೆ ಆಗಿಲ್ಲ'' ಎಂದು ಕಿಡಿಕಾರಿದರು.
''ಬಂಗಾರಪ್ಪನವರು ಚುನಾವಣೆಯಲ್ಲಿ ಸೋತಾಗ, ರಾಘವೇಂದ್ರ ಅವರಿಗೆ ಅಭಿನಂದನೆಯನ್ನು ಸಲ್ಲಿಸಿದರು. ಕೊನೆಗೆ ಬಂಗಾರಪ್ಪರನ್ನು ಜೆಡಿಎಸ್ಗೆ ತಂದು ನಿಲ್ಲಿಸಿದರು. ಕಾಂಗ್ರೆಸ್ ಪಕ್ಷದಲ್ಲಿ ಬಂಗಾರಪ್ಪನವರ ಫೋಟೋ ಹಾಕಲ್ಲ, ಮಧು ಮಾತ್ರ ಹಾಕಿಕೊಳ್ಳುತ್ತಾರೆ. ನಾಡಿನ ಎಲ್ಲರೂ ಸೇರಿ ಬಂಗಾರಪ್ಪರನ್ನು ಸಿಎಂ ಮಾಡಿದರು. ಹಿಂದೆ ಇದೇ ಗೀತಾ ಅವರನ್ನು ಜೆಡಿಎಸ್ಗೆ ಸೇರಿಸಿದರು. ನಮ್ಮ ತಾಯಿಗೆ ಆರೋಗ್ಯ ಸರಿ ಇಲ್ಲದೆ ಇದ್ರು ಸಹ ಚುನಾವಣಾ ಪ್ರಚಾರಕ್ಕೆ ಆಂಬ್ಯುಲೆನ್ಸ್ನಲ್ಲಿ ಕರೆದುಕೊಂಡು ಬಂದಿದ್ದರು. ಮಧು ಇದುವರೆಗೂ ಅಭಿವೃದ್ಧಿ ಬಗ್ಗೆ ಮಾತನಾಡಿಲ್ಲ. ಆಯನೂರಿನಿಂದ ಪಾದಯಾತ್ರೆಯನ್ನು ನಡೆಸಿ, ಅಧಿಕಾರಕ್ಕೆ ಬಂದ 24 ಗಂಟೆಯಲ್ಲಿ ಬಗರ್ ಹುಕುಂ ಹಕ್ಕುಪತ್ರವನ್ನು ನೀಡುವುದಾಗಿ ಹೇಳಿದ್ದರು. ಎಲ್ಲಿ ಹಕ್ಕು ಪತ್ರ ನೀಡಿದ್ದಾರೆ ಎಂದು ಪ್ರಶ್ನಿಸಿದರು.
ಪ್ರಾಥಮಿಕ ಸಚಿವರಿಗೆ ಪ್ರಾಥಮಿಕ ಜ್ಞಾನವಿಲ್ಲ: ''ಪ್ರಾಥಮಿಕ ಸಚಿವರಿಗೆ ಪ್ರಾಥಮಿಕ ಜ್ಞಾನನೇ ಇಲ್ಲ. ಪಿಯುಸಿಯನ್ನು ನೀನು ಯಾವ ಕಾಲೇಜಿನಲ್ಲಿ ಓದಿದ್ದಿಯಾ. ಪಿಯುಸಿಯನ್ನು ಎಲ್ಲಿ ಮುಗಿಸಿದ್ದಿಯಾ. ಡಿಗ್ರಿಯು ಯಾವ ಕಾಲೇಜಿನಲ್ಲಿ ಸರ್ಟಿಫಿಕೆಟ್ ಪಡೆದಿದ್ದಿರಾ ಎಂದು ಕೇಳಿ'' ಎಂದರು. ''ಸೌಜನ್ಯದಿಂದ ಸಾರ್ವಜನಿಕರೊಂದಿಗೆ ಮಾತನಾಡಿದ್ರೆ ಒಳ್ಳೆಯದು. ಶರಾವತಿ ಡೆಂಟಲ್ ಕಾಲೇಜನ್ನು ಈಡಿಗ ಸಮಾಜಕ್ಕೆ ಮಾಡಿದ್ದು, ಈಗ ಕಾಲೇಜಿನ ಜಾಗವನ್ನು ಲೇಔಟ್ ಮಾಡಿ ಮಾರಾಟ ಮಾಡಿದ್ದಾರೆ. ಕಾಂಗ್ರೆಸ್ ಈ ಚುನಾವಣೆಯಲ್ಲಿ ಸೋಲುವುದು ಖಂಡಿತ. ನಾವು ನಮ್ಮ ಸೋಲನ್ನು ಸಂಸದರ ಮೂಲಕ ಅಭಿವೃದ್ಧಿ ಮಾಡಿ ತೋರಿಸುತ್ತೇವೆ. ಜಾತಿಗೆ ಮತ ಹಾಕದೇ ದೇಶಕ್ಕೆ ಮತದಾನ ಮಾಡಿ. ದ್ವೇಷದ ರಾಜಕಾರಣ ಮಾಡದೇ ಅಭಿವೃದ್ಧಿ ಮಾಡಿ ತೋರಿಸಿ, ನಾಳಿನ ಕಾರ್ಯಕ್ರಮದಲ್ಲಿ ಇವರ ಅಭಿವೃದ್ಧಿ ಏನ್ ಮಾಡಿದ್ದಾರೆ, ಸಮಾಜಕ್ಕೆ ಇವರ ಕೊಡುಗೆ ಏನ್ ಅಂತ ಹೇಳಲಿ'' ಎಂದು ಕಿಡಿಕಾರಿದರು.
ಇದನ್ನೂ ಓದಿ: 'ರಿಚಾರ್ಜ್ ಗಿರಾಕಿ' ಎಂದು ಸಹೋದರನ ವಿರುದ್ಧ ಮಧು ಬಂಗಾರಪ್ಪ ಪರೋಕ್ಷ ವಾಗ್ದಾಳಿ - Madhu Bangarappa