ಬೆಂಗಳೂರು: ಭಾನುವಾರ ಫೀಲ್ಡ್ ಮಾರ್ಷಲ್ ಮಾಣಿಕ್ ಷಾ ಪರೇಡ್ ಮೈದಾನದಿಂದ ಪ್ರಾರಂಭವಾಗಲಿರುವ ಟಿ.ಸಿ.ಎಸ್ ವರ್ಲ್ಡ್ 10 ಕೆ ನೆಡೆಯಲಿದೆ. ಈ ಹಿನ್ನೆಲೆಯಲ್ಲಿ ನಮ್ಮ ಮೆಟ್ರೋ ಎಲ್ಲ ನಾಲ್ಕು ಟರ್ಮಿನಲ್‌ಗಳಿಂದ ಬೆಳಗ್ಗೆ 7ರ ಬದಲಿಗೆ 3.35ಕ್ಕೆ ತನ್ನ ರೈಲು ಸೇವೆಗಳನ್ನು ಪ್ರಾರಂಭಿಸಲಿದೆ.
ನಾಗಸಂದ್ರ, ಸಿಲ್ಕ್ ಇನ್‌ಸ್ಟಿಟ್ಯೂಟ್, ಚಲ್ಲಘಟ್ಟ, ಮತ್ತು ವೈಟ್‌ಫೀಲ್ಡ್ (ಕಾಡುಗೋಡಿ) ಮೆಟ್ರೋ ನಿಲ್ದಾಣಗಳಿಂದ ಬೆಳಗಿನಜಾವ 3.35 ಕ್ಕೆ ಪ್ರಾರಂಭವಾಗಲಿದೆ. ರೈಲುಗಳು 3.35 ರಿಂದ 4:25ರ ವರೆಗೆ 10 ನಿಮಿಷಗಳ ಅಂತರದಲ್ಲಿ ಚಲಿಸಲಿವೆ ಎಂದು ಬಿ.ಎಂ.ಆರ್.ಸಿ.ಎಲ್ ತಿಳಿಸಿದೆ. ನಾಡಪ್ರಭು ಕೆಂಪೇಗೌಡ ಸ್ಟೇಷನ್ ಮೆಜೆಸ್ಟಿಕ್‌ನಿಂದ ಎಂಜಿ ರಸ್ತೆ ಕಡೆಗೆ ಮೊದಲ ರೈಲು ಸೇವೆಯು ಬೆಳಗ್ಗೆ 4.10 ಕ್ಕೆ ಇರುತ್ತದೆ ಮತ್ತು ನಂತರ 10 ನಿಮಿಷಗಳ ಅಂತರದಲ್ಲಿ ಬೆಳಗ್ಗೆ 5 ರವರೆಗೆ ಚಲಿಸಲಿವೆ ಮತ್ತು ನಂತರ ರೈಲುಗಳು ಎಂದಿನಂತೆ ಓಡಾಡದಲಿವೆ ಎಂದಿದೆ.
ಸಾರ್ವಜನಿಕರು ವಿಶ್ವ 10ಕೆ ಓಟದಲ್ಲಿ ಭಾಗವಹಿಸಲು ನಮ್ಮ ರೈಲಿನ ಸೌಲಭ್ಯವನ್ನು ಬಳಸಿಕೊಳ್ಳಬೇಕು. ಸಾರ್ವಜನಿಕರಿಗೆ ಕ್ಯೂ.ಆರ್ ಕೋಡ್ ಮತ್ತು ನಗದು ರಹಿತ ಪಾವತಿಗಳ ಮೂಲಕ ಟಿಕೆಟ್ ಖರೀದಿಸಬೇಕು ಎಂದು ಬಿ.ಎಂ.ಆರ್.ಸಿ.ಎಲ್ ಮನವಿ ಮಾಡಿದೆ.
ಇದನ್ನೂ ಓದಿ: ಗುಲಾಬಿ ಮಾರ್ಗದ 13 ಕಿ.ಮೀ ಸುರಂಗ ಕಾಮಗಾರಿ ಈ ವರ್ಷದ ಅಂತ್ಯಕ್ಕೆ ಪೂರ್ಣ - Metro Pink route