ETV Bharat / state

ವಾಯುವ್ಯ ಸಾರಿಗೆ ಸಂಸ್ಥೆ ಸೇರ್ಪಡೆಯಾಗಲಿರುವ 350 ಹೊಸ ಎಲೆಕ್ಟ್ರಿಕ್ ಬಸ್​ಗಳು - NWRTC Electric Buses

ವಾಯುವ್ಯ ಸಾರಿಗೆ ಸಂಸ್ಥೆ ಹೊಸದಾಗಿ 350 ಎಲೆಕ್ಟ್ರಿಕ್​ ಬಸ್‌ಗಳನ್ನು ರಸ್ತೆಗಿಳಿಸಲು ನಿರ್ಧರಿಸಿದೆ.

ಎಲೆಕ್ಟ್ರಿಕ್ ಬಸ್
ಎಲೆಕ್ಟ್ರಿಕ್ ಬಸ್‌ಗಳು (ETV Bharat)
author img

By ETV Bharat Karnataka Team

Published : Jun 16, 2024, 7:54 AM IST

ಹುಬ್ಬಳ್ಳಿ: ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು (NWKRTC) ಜನದಟ್ಟಣೆ ಹಾಗೂ ಪ್ರಯಾಣಿಕರ ಬೇಡಿಕೆಗೆ ಅನುಗುಣವಾಗಿ 350 ಹೊಸ ಎಲೆಕ್ಟ್ರಿಕ್​ ಬಸ್‌ಗಳನ್ನು ರಸ್ತೆಗಿಳಿಸಲು ನಿರ್ಧರಿಸಿದೆ. ಎಲ್ಲಾ ಅಂದುಕೊಂಡಂತೆ ನಡೆದರೆ ಮುಂದಿನ ಎರಡು ತಿಂಗಳಲ್ಲಿ ಎಲೆಕ್ಟ್ರಿಕ್​ ಬಸ್​ಗಳು ಸಂಚಾರ ಆರಂಭಿಸಲಿವೆ.

ಸಂಸ್ಥೆಯು 350 ಎಲೆಕ್ಟ್ರಿಕ್ ಬಸ್‌ಗಳ ಪೈಕಿ 150 ನಗರ ಸಾರಿಗೆಗೆ ಮತ್ತು 200 ಗ್ರಾಮೀಣ ಸಾರಿಗೆಗೆ ವಿದ್ಯುತ್‌ಚಾಲಿತ ಬಸ್‌ಗಳ ಓಡಾಟಕ್ಕೆ ಚಿಂತನೆ ನಡೆಸಿದೆ. ಈಗಾಗಲೇ ಟೆಂಡರ್ ಅವಧಿ ಮೇ 31ಕ್ಕೆ ಮುಕ್ತಾಯಗೊಂಡಿದೆ. ಇದಕ್ಕೆ ಬಹುತೇಕ ಕಂಪನಿಗಳು ಸ್ಪಂದಿಸಿದ್ದು ಕೆಲವೇ ದಿನಗಳಲ್ಲಿ ಹುಬ್ಬಳ್ಳಿ-ಧಾರವಾಡ ಅವಳಿನಗರದಲ್ಲಿ ಮಾತ್ರವಲ್ಲದೇ, ವಾಯುವ್ಯ ಕರ್ನಾಟಕ ಭಾಗದಲ್ಲೂ ಎಲೆಕ್ಟ್ರಿಕ್ ಬಸ್‌ಗಳು ಓಡಾಟ ನಡೆಸಲಿವೆ. ಬಸ್​ಗಳ ಮೈಲೇಜ್​ ಆಧಾರದ ಮೇಲೆ ಟೆಂಡರ್ ಕರೆಯಲಾಗಿದೆ ಎಂದು ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಪ್ರಿಯಾಂಗಾ ಹೇಳಿದ್ದಾರೆ.

ಜಿಸಿಸಿ (GROSS COST CONTRACT) ಮೂಲಕ ಟೆಂಡರ್ ಪ್ರಕ್ರಿಯೆ ನಡೆದಿದೆ. ಟೆಂಡರ್ ಪಡೆದವರು ಬಸ್ ನಿರ್ವಹಣೆ ಹಾಗೂ ಎಸಿ ಆಪರೇಟಿಂಗ್ ಸೇರಿದಂತೆ ಹಲವು ಷರತ್ತುಗಳನ್ನು ವಿಧಿಸುವ ಮೂಲಕ ಬಸ್ ಕಾರ್ಯಾಚರಣೆಗೆ ಸಾರಿಗೆ ಸಂಸ್ಥೆ ಸಿದ್ಧತೆ ನಡೆಸಿದೆ. ಈಗಾಗಲೇ ಗ್ಯಾರಂಟಿ ಯೋಜನೆಯಿಂದ ಜನರ ಓಡಾಟ ಹೆಚ್ಚಾಗಿದ್ದು, ಇದೀಗ ಎಲೆಕ್ಟ್ರಿಕ್ ಬಸ್ ಓಡಾಟದಿಂದ ಆರ್ಥಿಕ ವ್ಯವಸ್ಥೆ ಸರಿದೂಗಿಸುವ ಕಾರ್ಯಕ್ಕೆ ಸಂಸ್ಥೆ ನಿರ್ಧರಿಸಿದೆ.

ಇದನ್ನೂ ಓದಿ: ರಾಜ್ಯದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ: ಎಲ್ಲಿ ಎಷ್ಟು ಹೆಚ್ಚಳ? ನೂತನ ದರ ತಿಳಿಯಲು ಕ್ಲಿಕ್ ಮಾಡಿ - Petrol Diesel Rate Hike

ETV Bharat Logo

Copyright © 2024 Ushodaya Enterprises Pvt. Ltd., All Rights Reserved.