ETV Bharat / state

ಮುಜರಾಯಿ ದೇವಾಲಯಗಳ ಖಾಸಗೀಕರಣ ಬೇಡ: ಅರ್ಚಕ ಸಮೂಹದಿಂದ ಮನವಿ - TEMPLES OF KARNATAKA

ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಅವರ ಕಾರ್ಯವೈಖರಿಯನ್ನು ಹಾಡಿ‌ ಹೊಗಳಿದ ಸಹಸ್ರಾರು ಸಂಖ್ಯೆಯಲ್ಲಿ ಸೇರಿದ್ದ ಅರ್ಚಕ ಸಮೂಹ, ಮುಜರಾಯಿ ದೇಗುಲಗಳ ಖಾಸಗೀಕರಣ ಬೇಡವೆಂದು ಮನವಿ ಮಾಡಿದರು.

No privatization of Muzrai temples: Appeal from priest group
ಅಖಿಲ ಕರ್ನಾಟಕ ಹಿಂದೂ ದೇವಾಲಯಗಳ ಅರ್ಚಕರ, ಆಗಮಿಕರ ಮತ್ತು ಉಪಾಧಿವಂತರ ಒಕ್ಕೂಟದ ಬೃಹತ್ ಸಮಾವೇಶ. (ETV Bharat)
author img

By ETV Bharat Karnataka Team

Published : Oct 23, 2024, 1:09 PM IST

ಬೆಂಗಳೂರು: ಯಾವುದೇ ಕಾರಣಕ್ಕೂ ಮುಜರಾಯಿ ದೇವಸ್ಥಾನಗಳನ್ನು ಖಾಸಗೀಕರಣಗೊಳಿಸಬಾರದು ಅಥವಾ ಖಾಸಗಿಯವರಿಗೆ ನೀಡಬಾರದು ಎಂದು ಅಖಿಲ ಕರ್ನಾಟಕ ಹಿಂದೂ ದೇವಾಲಯಗಳ ಅರ್ಚಕರ, ಆಗಮಿಕರ ಮತ್ತು ಉಪಾಧಿವಂತರ ಒಕ್ಕೂಟ ಸರ್ಕಾರವನ್ನು ಒತ್ತಾಯಿಸಿದೆ.

ನಗರದಲ್ಲಿ ಅಖಿಲ ಕರ್ನಾಟಕ ಹಿಂದೂ ದೇವಾಲಯಗಳ ಅರ್ಚಕರ, ಆಗಮಿಕರ ಮತ್ತು ಉಪಾಧಿವಂತರ ಒಕ್ಕೂಟದ ಬೃಹತ್ ಸಮಾವೇಶ ನಡೆಯಿತು. ಮುಜರಾಯಿ ದೇವಸ್ಥಾನಗಳ‌ ಹಣವು 2003ರ ಕಾಯಿದೆಯನ್ವಯ ಹಾಗೂ ನಿಯಮಾನುಸಾರ ಹಿಂದೂ ದೇವಸ್ಥಾನಗಳ ಅಭಿವೃದ್ಧಿಗಾಗಿ ಮಾತ್ರವೇ ಬಳಸಬಹುದಾಗಿರುತ್ತದೆ. ಸರ್ಕಾರಕ್ಕೂ ಈ‌ ಹಣವನ್ನು ವರ್ಗಾಯಿಸಲು ಅಥವಾ ಪಡೆಯಲು ಈ‌ ಕಾಯಿದೆಯಡಿ ಅವಕಾಶವಿಲ್ಲ. ಆದರೂ ವಿನಾಕಾರಣ ಅನ್ಯ ಧರ್ಮದ ಕೆಲಸ‌ಕಾರ್ಯಗಳಿಗೆ ಖರ್ಚಾಗುತ್ತದೆ‌ ಎಂದು‌ ಅಪಪ್ರಚಾರ ಮಾಡುವುದು ಒಪ್ಪತಕ್ಕದ್ದಲ್ಲ. ಅದು ಅಕ್ಷರಶಃ ಸುಳ್ಳು ಎಂದು ಅರ್ಚಕ‌ ಸಮೂಹ ಪ್ರಸ್ತುತ ಕೇಳಿಬರುತ್ತಿರುವ ಆರೋಪಗಳಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿ ರಾಜ್ಯ ಸರ್ಕಾರದ ಪರ ನಿಲುವು ವ್ಯಕ್ತಪಡಿಸಿತು.

No privatization of Muzrai temples: Appeal from priest group
ಅಖಿಲ ಕರ್ನಾಟಕ ಹಿಂದೂ ದೇವಾಲಯಗಳ ಅರ್ಚಕರ, ಆಗಮಿಕರ ಮತ್ತು ಉಪಾಧಿವಂತರ ಒಕ್ಕೂಟದ ಬೃಹತ್ ಸಮಾವೇಶ. (ETV Bharat)

ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಅವರ ಕಾರ್ಯವೈಖರಿಯನ್ನು ಹಾಡಿ‌ ಹೊಗಳಿದ ಸಹಸ್ರಾರು ಸಂಖ್ಯೆಯಲ್ಲಿ ಸೇರಿದ್ದ ಅರ್ಚಕ ಸಮೂಹ, ರಾಮಲಿಂಗಾರೆಡ್ಡಿಯವರಿಗೆ ಯಾವುದೇ ಖಾತೆ ನೀಡಲಿ, ಆದರೆ ಮುಜರಾಯಿ ಖಾತೆಯೂ ಆ ಖಾತೆಯೊಂದಿಗೆ ಇರಬೇಕು. ಇನ್ನು ಕನಿಷ್ಠ 10 ವರ್ಷಗಳ ಅವಧಿಗೆ ರಾಮಲಿಂಗಾರೆಡ್ಡಿ ಅವರು ಮುಜರಾಯಿ ಸಚಿವರಾಗಿರಬೇಕು. ಇದು ನಮ್ಮ ಅಭಿಲಾಷೆ ಎಂದು ಒಕ್ಕೊರಲಿನಿಂದ ಅರ್ಚಕರ ಸಮಾವೇಶದಲ್ಲಿ ಕೂಗು ಮೊಳಗಿತು.

ಹಿಂದೂ ದೇವಸ್ಥಾನಗಳ ಅಭಿವೃದ್ಧಿಗಾಗಿ‌ ಮಾತ್ರವೇ ಹಣ ಖರ್ಚು: ಮುಜರಾಯಿ ದೇವಸ್ಥಾನಗಳ‌ ಹಣವು 2003ರ ಕಾಯಿದೆಯನ್ವಯ ಹಾಗೂ ನಿಯಮಾನುಸಾರ ಹಿಂದೂ ದೇವಸ್ಥಾನಗಳ ಅಭಿವೃದ್ಧಿಗಾಗಿ‌ ಮಾತ್ರವೇ ಹಣ ಖರ್ಚಾಗುತ್ತದೆ. ಸರ್ಕಾರಕ್ಕೂ ಈ‌ ಹಣವನ್ನು ವರ್ಗಾಯಿಸುವ, ಪಡೆಯುವ ಅಥವಾ ಬೇರೆ ಯಾವುದೇ ಉದ್ದೇಶಗಳಿಗೆ ಬಳಸುವ ಅವಕಾಶವಿಲ್ಲ. ಆದರೆ, ವಿನಾಕಾರಣ ಅನ್ಯ ಧರ್ಮದ ಕೆಲಸ‌ಕಾರ್ಯಗಳಿಗೆ ಖರ್ಚಾಗುತ್ತದೆ‌ ಎಂದು‌ ಅಪಪ್ರಚಾರ ಮಾಡುವುದು ಒಪ್ಪತಕ್ಕದ್ದಲ್ಲ. ಅದು ಅಕ್ಷರಶಃ ಸುಳ್ಳು ಎಂದು ಸಮಾವೇಶದಲ್ಲಿ ಅರ್ಚಕ ಸಮೂಹ ಸ್ಪಷ್ಟನೆ ನೀಡಿತು.

ಯಾವುದೇ ಕಾರಣಕ್ಕೂ ಮುಜರಾಯಿ ದೇವಸ್ಥಾನಗಳನ್ನು ಖಾಸಗೀಕರಣಗೊಳಿಸಬಾರದು ಅಥವಾ ಖಾಸಗಿಯವರಿಗೆ ನೀಡಬಾರದು. ಅದಕ್ಕೆ‌ ನಮ್ಮ ವಿರೋಧವಿದೆ. ಖಾಸಗಿಯವರು ವ್ಯಾಪಾರದ ದೃಷ್ಟಿಯಿಂದ ಅಷ್ಟೇ ದೇವಸ್ಥಾನವನ್ನು ನೋಡುತ್ತಾರೆ. ಧರ್ಮವನ್ನು ಉಳಿಸುವ ಅಥವಾ ದೇವರ ಸೇವೆಯನ್ನು ಮಾಡುವ ನಮ್ಮಂತಹ ಅರ್ಚಕರ ಬಗ್ಗೆ ಅವರಿಗೆ ಯಾವುದೇ ಕನಿಕರವಿರುವುದಿಲ್ಲ. ನಮಗಾಗಿ ಯಾವುದೇ ಯೋಜನೆಗಳನ್ನು ತರುವ ಪ್ರಯತ್ನ ಕೂಡ ನಡೆಯುವುದಿಲ್ಲ ಎಂದು ಬೇಸರ ಹೊರಹಾಕಲಾಯಿತು.

ರಾಜ್ಯದಲ್ಲಿರುವ 34,564 ಧಾರ್ಮಿಕ ದತ್ತಿ ಇಲಾಖೆಗೆ ಸೇರಿದ ದೇವಾಲಯಗಳಲ್ಲಿ, 34,166 ಸಿ ವರ್ಗದ ದೇವಾಲಯಗಳಿದ್ದು, ರಾಜ್ಯಪಾಲರು ಕಾಯ್ದೆಗೆ ಅನುಮೋದನೆ ನೀಡಿದ ಕೂಡಲೇ ಸಾಮಾನ್ಯ ಸಂಗ್ರಹಣಾ ನಿಧಿಯನ್ನು ಈ ದೇವಾಲಯಗಳ ಅಭಿವೃದ್ಧಿ ಹಾಗೂ ಅರ್ಚಕರುಗಳ ಕ್ಷೇಮಾಭಿವೃದ್ಧಿಗೆ ಹಣ ವಿನಿಯೋಗಿಸಲು ತುಂಬಾ ಅನುಕೂಲವಾಗುತ್ತದೆ. ಇಲ್ಲಿಯವರೆಗೆ ಬಡ ಅರ್ಚಕರುಗಳ ಬಗ್ಗೆ ಯಾರೋಬ್ಬರೂ ಕಾಳಜಿವಹಿಸಿರಲಿಲ್ಲ. ರಾಮಲಿಂಗಾರೆಡ್ಡಿ ಅವರ ದೂರದೃಷ್ಟಿ ಹಾಗೂ ಕಾಳಜಿ ಪರ ನಡೆಯು ಫಲವಾಗಿ ಮಸೂದೆಯು ನಮಗೊಂದು ಭರವಸೆ ಮೂಡಿಸಿದೆ, ರಾಜ್ಯಪಾಲರು ಮಸೂದೆಗೆ ಅಂಕಿತ ಹಾಕದಿರುವುದು ನಮ್ಮಂತಹ ಸಹಸ್ರಾರು ಅರ್ಚಕರು/ನೌಕರರ ಪಾಲಿಗೆ ನೋವುಂಟು ಮಾಡಿದೆ. ವಿರೋಧ ಪಕ್ಷದವರಾದ ಬಿಜೆಪಿ ಅವರು ಹಿಂದೂ ಧರ್ಮವನ್ನು ಉಳಿಸುವವರು ನಾವು ಎಂದು ಬಡಾಯಿ ಕೊಚ್ಚಿಕೊಳ್ಳುವುದನ್ನು ಬಿಟ್ಟು ದೇವಸ್ಥಾನ ಅಲ್ಲಿನ ಅರ್ಚಕರ ಒಳಿತಿಗಾಗಿ ತಂದಿರುವ ಈ ಕಾಯಿದೆಯನ್ನು ಬೆಂಬಲಿಸುವಂತಹ ಕಾರ್ಯ‌ಮಾಡಬೇಕು. ಪಕ್ಷ ಯಾವುದೇ ಇರಲಿ ಧರ್ಮ, ದೇವಸ್ಥಾನ, ಭಕ್ತಾದಿಗಳ ಭಾವನೆಯೊಂದಿಗೆ ರಾಜಕೀಯ ಬೆರಸಬಾರದು ಎಂದು ಬಿಜೆಪಿ ಅವರಲ್ಲಿ ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ರಾಮಲಿಂಗಾರೆಡ್ಡಿ, ರಾಜ್ಯಪಾಲರು ಶೀಘ್ರದಲ್ಲಿಯೇ ಸದರಿ‌ ಮಸೂದೆಗೆ ಅಂಕಿತ ಹಾಕುವ ಭರವಸೆ ಇದೆ ಎಂದು ತಿಳಿಸಿದರು.

ಇದನ್ನೂ ಓದಿ: ಮುಜರಾಯಿ ಇಲಾಖೆ ಅಧೀನದ ದೇಗುಲಗಳಿಗೆ ವ್ಯವಸ್ಥಾಪನಾ ಸಮಿತಿ ರಚನೆ ಪ್ರಶ್ನಿಸಿದ್ದ ಅರ್ಜಿ ವಜಾ - High Court

ETV Bharat Logo

Copyright © 2024 Ushodaya Enterprises Pvt. Ltd., All Rights Reserved.