ETV Bharat / state

ಬೆಂಗಳೂರಲ್ಲಿ ರಾತ್ರಿ ವೇಳೆ ಮಹಿಳೆಯರ ನೆರವಿಗೆ ಮಹಿಳಾ ಪೊಲೀಸರಿಗೆ ನೈಟ್ ಶಿಫ್ಟ್ - Night Shift For Women Police

ಬೆಂಗಳೂರಲ್ಲಿ ಮಹಿಳೆಯರ ಸಹಾಯಕ್ಕಾಗಿ ರಾತ್ರಿ ವೇಳೆಯೂ ಮಹಿಳಾ ಪೊಲೀಸ್ ಸಿಬ್ಬಂದಿಯನ್ನು ಕರ್ತವ್ಯಕ್ಕೆ ನಿಯೋಜಿಸಲು ಇಲಾಖೆ ತೀರ್ಮಾನಿಸಿದೆ.

ಮಹಿಳಾ ಪೊಲೀಸರು
ಮಹಿಳಾ ಪೊಲೀಸರು (IANS)
author img

By ETV Bharat Karnataka Team

Published : Aug 22, 2024, 9:45 PM IST

ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಎಂ.ಎನ್.ಅನುಚೇತ್ ಮಾಹಿತಿ (ETV Bharat)

ಬೆಂಗಳೂರು: ನಗರದಲ್ಲಿ ರಾತ್ರಿ ವೇಳೆ ಮಹಿಳೆಯರ ನೆರವಿಗೆ ಮತ್ತು ಮಹಿಳಾ ಚಾಲಕರ ಅಪಘಾತ ಪ್ರಕರಣಗಳನ್ನು ನಿಯಂತ್ರಿಸಲು ಇನ್ನು ಮುಂದೆ‌ ಮಹಿಳಾ ಸಂಚಾರ ಪೊಲೀಸರು ರಾತ್ರಿ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸಲಿದ್ದಾರೆ. ಪ್ರತಿ ಠಾಣೆಯಲ್ಲಿ ಇಬ್ಬರು ಮಹಿಳಾ ಸಿಬ್ಬಂದಿ ಸೇರಿ ನಗರದಲ್ಲಿರುವ 50 ಸಂಚಾರ ಪೊಲೀಸ್ ಠಾಣೆಗಳಲ್ಲಿ 100 ಮಂದಿ ಮಹಿಳಾ ಪೊಲೀಸರು ರಾತ್ರಿ ವೇಳೆ ಪಾಳಿ ರೀತಿಯಲ್ಲಿ ಕೆಲಸ ಮಾಡಲಿದ್ದಾರೆ.‌

ರಾತ್ರಿ ಮಹಿಳೆಯರ ಮೇಲಾಗುವ ದೌರ್ಜನ್ಯ ಹಾಗೂ ಅಪಘಾತ ಹಿನ್ನೆಲೆಯಲ್ಲಿ ನ್ಯಾಯ ಅರಸಿ ಠಾಣೆಗಳಿಗೆ ಬರುವ ಮಹಿಳೆಯರಿಗೆ ಠಾಣೆಯಲ್ಲೇ ಕೂತು ಮಹಿಳಾ ಸಿಬ್ಬಂದಿ ಕಾರ್ಯನಿರ್ವಹಿಸಿದರೆ, ಮತ್ತೊಬ್ಬ ಮಹಿಳಾ ಸಿಬ್ಬಂದಿ ಅಪಘಾತ ಸ್ಥಳದ‌ ಪರಿಶೀಲನೆ, ಜನಸಂದಣಿ ಪ್ರದೇಶಗಳಲ್ಲಿ ಗಸ್ತು ಹಾಗೂ ಡ್ರಂಕ್ ಡ್ರೈವ್ ತಪಾಸಣೆ ಮಾಡುವ ಪುರುಷ ಟ್ರಾಫಿಕ್ ಸಿಬ್ಬಂದಿಗೆ ಸಹಾಯಕರಾಗಿ ಕೆಲಸ ಮಾಡಲಿದ್ದಾರೆ.

"ಡ್ರಂಕ್ ಅಂಡ್ ಡ್ರೈವ್​ನಿಂದ ಅಪಘಾತ ಪ್ರಕರಣಗಳ ಸಂಖ್ಯೆ ಕಳೆದ ಎರಡು ತಿಂಗಳಿಂದ ಹೆಚ್ಚಾಗಿರುವುದು ಕಂಡುಬಂದಿದೆ‌‌.‌ ಇದನ್ನು ತಹಬದಿಗೆ ತರಲು ರಾತ್ರಿ ಪಾಳಿಯಲ್ಲಿ‌ ಇಬ್ಬರು ಮಹಿಳಾ ಸಿಬ್ಬಂದಿ ಕಾರ್ಯನಿರ್ವಹಿಸಲು ನಿರ್ದೇಶನ ನೀಡಲಾಗಿದೆ" ಎಂದು ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಎಂ.ಎನ್.ಅನುಚೇತ್ ತಿಳಿಸಿದ್ದಾರೆ.

ಡ್ರಂಕ್ ಅಂಡ್ ಡ್ರೈವ್ ಪ್ರಕರಣಗಳು: "ರೋಡ್ ರೇಜ್ ಕೇಸ್​ಗಳನ್ನು ಕಡಿಮೆ ಮಾಡಲು ಡ್ರಂಕ್ ಅಂಡ್ ಡ್ರೈವ್ ತಪಾಸಣೆ ಮಾಡಲು ಮುಂದಾಗಿರುವ ಸಂಚಾರ ಪೊಲೀಸರು ಪ್ರತಿ ಗುರುವಾರದಿಂದ ಭಾನುವಾರದವರೆಗೂ ಕಾರ್ಯಾಚರಣೆ‌ ನಡೆಸಲಿದ್ದಾರೆ. ಡ್ರಂಕ್ ಅಂಡ್ ಡ್ರೈವ್ ಪ್ರಕರಣ ದಾಖಲಿಸಲು ಇದೇ ಮೊದಲ ಬಾರಿಗೆ ಸಬ್ ಇನ್ ಸ್ಪೆಕ್ಟರ್​ಗಳಿಗೆ ಅನುಮತಿ ನೀಡಲಾಗಿದೆ" ಎಂದು ಅವರು ಮಾಹಿತಿ ನೀಡಿದರು.

ಇದನ್ನೂ ಓದಿ: ಸಿಎಂ ಬೆಂಬಲಿಸಿ ಕಾಂಗ್ರೆಸ್ ಶಾಸಕಾಂಗ ಸಭೆ ಸರ್ವಾನುಮತದ ನಿರ್ಣಯ: ರಾಷ್ಟ್ರಭವನ ಪರೇಡ್‌ಗೆ ಕೆಲ ಶಾಸಕರ ಸಲಹೆ - CLP Meeting

ETV Bharat Logo

Copyright © 2024 Ushodaya Enterprises Pvt. Ltd., All Rights Reserved.