ಬೆಂಗಳೂರು: ನಮ್ಮ ಮೆಟ್ರೋ ಪ್ರಯಾಣಿಕರ ಅನುಕೂಲಕ್ಕಾಗಿ ಬಿಎಂಟಿಸಿ ಹೊಸ ಫೀಡರ್ ಮಾರ್ಗವನ್ನು ಪರಿಚಯಿಸುತ್ತಿದೆ. ಬಿಎಂಟಿಸಿಯು ಸಾರ್ವಜನಿಕ ಪ್ರಯಾಣಿಕರಿಗೆ ದಕ್ಷ, ವಿಶ್ವಾಸನೀಯ, ಆರಾಮದಾಯಕ ಹಾಗೂ ಮಿತವ್ಯಯಕರ ದರದಲ್ಲಿ ಉತ್ತಮ ಸಾರಿಗೆ ಸೌಲಭ್ಯವನ್ನು ಒದಗಿಸಲಾಗುತ್ತಿದೆ. ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ನೂತನ ಹವಾನಿಯಂತ್ರಣ ರಹಿತ ಮೆಟ್ರೋ ಫೀಡರ್ ಮಾರ್ಗವನ್ನು ಜುಲೈ 15ರಿಂದ ಪರಿಚಯಿಸುತ್ತಿದೆ.
ಎಂಎಫ್-43 ಮಾರ್ಗಸಂಖ್ಯೆಯಲ್ಲಿ ಕೆಂಗೇರಿ ಟಿಟಿಎಂಸಿಯಿಂದ ಶ್ರೀನಿವಾಸಪುರ ಕ್ರಾಸ್, ಕರಿಯನಪಾಳ್ಯ, ಕರಿಷ್ಮ ಹಿಲ್ಸ್, ರಘುವನಹಳ್ಳಿ ಕ್ರಾಸ್, ಅವಲಹಳ್ಳಿ ಬಿಡಿಎ ಲೇಔಟ್ ಹಾಗೂ ಅಂಜನಾಪುರ ಮಾರ್ಗವಾಗಿ ಗೊಟ್ಟಿಗೆರೆ ನೈಸ್ ರೋಡ್ ಜಂಕ್ಷನ್‌ಗೆ ನಾಲ್ಕು ಮೆಟ್ರೋ ಫೀಡರ್ ಬಸ್‌ಗಳು ಸಂಚಾರ ನಡೆಸಲಿದೆ.
ಕೆಂಗೇರಿ ಟಿಟಿಎಂಸಿಯಿಂದ ಗೊಟ್ಟಿಗೆರೆ ನೈಸ್ ರೋಡ್ ಜಂಕ್ಷನ್ ಕಡೆಗೆ ಹೊರಡುವ ಸಮಯ: ಬೆಳಗ್ಗೆ 7:05, 7:35, 8:15, 8:50, 9:35, 10:30, 11:00, 11:40, ಮಧ್ಯಾಹ್ನ 12:20, 12:50, 13:30, 14:00, 14:45, 15:15, ಸಂಜೆ 16:15, 16:45, 17:30, 18:00, 20:00, 20:30.
ಗೊಟ್ಟಿಗೆರೆ ನೈಸ್ ರೋಡ್ ಜಂಕ್ಷನ್ ನಿಂದ ಕೆಂಗೇರಿ ಟಿಟಿಎಂಸಿ ಕಡೆಗೆ ಹೊರಡುವ ಸಮಯ: ಬೆಳಗ್ಗೆ 6:05, 6:35, 8:15, 8:45, 9:30, 10:30, 11:10, 11:40, ಮಧ್ಯಾಹ್ನ 12:20, 12:50, 13:35, 14:05, 15:05, 15:35, 15:55, ಸಂಜೆ 16:50, 17:25, 17:55, 18:50, 19:20.
ಇದನ್ನೂ ಓದಿ: ರಾಜ್ಯಾದ್ಯಂತ ಮುಂಗಾರು ಮಳೆಯ ಆರ್ಭಟ: ಕರಾವಳಿ, ಮಲೆನಾಡಿನಲ್ಲಿ ಐದು ದಿನ ರೆಡ್ ಅಲರ್ಟ್ - KARNATAKA WEATHER REPORT