ETV Bharat / state

ಎನ್​ಡಿಎ 400 ಸೀಟು ಗೆಲ್ಲಲಿದೆ: ಬಿ.ವೈ.ರಾಘವೇಂದ್ರ - B Y Raghavendra

author img

By ETV Bharat Karnataka Team

Published : Apr 8, 2024, 3:56 PM IST

Updated : Apr 8, 2024, 5:41 PM IST

ಎನ್​ಡಿಎ ಈ ಬಾರಿ 400 ಸೀಟುಗಳನ್ನು ಗೆದ್ದೇ ಗೆಲ್ಲಲಿದೆ ಎಂದು ಬಿ.ವೈ.ರಾಘವೇಂದ್ರ ಹೇಳಿದರು.

NDA GOVERNMENT  BY RAGHAVENDRA  SHIVAMOGGA
ಬಿ.ವೈ.ರಾಘವೇಂದ್ರ

ಬಿ.ವೈ.ರಾಘವೇಂದ್ರ ಹೇಳಿಕೆ

ಶಿವಮೊಗ್ಗ: ಈ ಬಾರಿ 370 ಸ್ಥಾನಗಳನ್ನು ಬಿಜೆಪಿ ಗೆದ್ದರೆ ಹಾಗೂ ಎನ್​ಡಿಎ ಒಟ್ಟಾಗಿ 400 ಸೀಟುಗಳನ್ನು ಗೆಲ್ಲಲಿದೆ ಎಂಬ ವಿಶ್ವಾಸವನ್ನು‌ ಸಂಸದ ಬಿ.ವೈ.ರಾಘವೇಂದ್ರ ವ್ಯಕ್ತಪಡಿಸಿದ್ದಾರೆ‌. ಶಿವಮೊಗ್ಗ ಜಿಲ್ಲೆಯಲ್ಲಿ ಬಿಜೆಪಿಗೆ ಒಳ್ಳೆಯ ವಾತಾವರಣವಿದೆ ಎಂದರು.

ಇಂದು ತಮ್ಮ ನಿವಾಸದ ಬಳಿ ಮಾತನಾಡಿದ ಅವರು, ನಾನು ಜಿಲ್ಲೆಯ ಎರಡು ಮೂರು ತಾಲೂಕುಗಳಿಗೆ ಭೇಟಿ ನೀಡುತ್ತಿದ್ದೇನೆ. ಮೋದಿ ಅವರು ಯಾವುದೇ ಕ್ಷೇತ್ರದಲ್ಲಿ ಪ್ರಚಾರ ನಡೆಸುತ್ತಿದ್ದರೂ ಸಹ ಅದು ದೇಶದ ಇತರೆ ಕ್ಷೇತ್ರಗಳ‌ ಮೇಲೂ ಪ್ರಭಾವ ಬಿರುತ್ತದೆ ಎಂಬ ವಿಶ್ವಾ‌ಸವಿದೆ. ರಾಜ್ಯದಲ್ಲಿ‌ ಎಲ್ಲಾ 28 ಸೀಟುಗಳನ್ನು ಗೆಲ್ಲುತ್ತೇವೆ ಎಂದರು.

ಏಪ್ರಿಲ್ 14ಕ್ಕೆ ನರೇಂದ್ರ ಮೋದಿಯವರು ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಮ್ಮ ಬಿಡುವಿಲ್ಲದ ಸಮಯದಲ್ಲೂ ಶಿಕಾರಿಪುರ ಕ್ಷೇತ್ರದಲ್ಲಿ ನಿನ್ನೆ ಮತ್ತು ಇಂದು ಪ್ರಚಾರ ನಡೆಸುತ್ತಿದ್ದಾರೆ. ನಮ್ಮ ಪ್ರಚಾರ ಸಭೆಗಳಿಗೆ ಸಾವಿರಾರು ಸಂಖ್ಯೆಯಲ್ಲಿ ಜನ ಆಗಮಿಸುತ್ತಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ: ಕೆರೆ ಸಂರಕ್ಷಣೆಗಾಗಿ ಒತ್ತಾಯಿಸಿ ದೊಡ್ಡ ತುಮಕೂರು, ಮಜರಾಹೊಸಹಳ್ಳಿ ಜನರಿಂದ ಲೋಕಸಭಾ ಚುನಾವಣೆ ಬಹಿಷ್ಕಾರ - ELECTION BOYCOTT

Last Updated : Apr 8, 2024, 5:41 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.