ETV Bharat / state

ಪ್ರಸಿದ್ಧ ನವಕರ್ನಾಟಕ ಪ್ರಕಾಶನದ ಆರ್.ಎಸ್. ರಾಜಾರಾಮ್ ನಿಧನ - MD RS Rajaram - MD RS RAJARAM

ಪ್ರಗತಿಪರ ಚಿಂತಕರೂ, ನವಕರ್ನಾಟಕ ಪ್ರಕಾಶನದ ರೂವಾರಿಗಳೂ ಆದ ಆರ್.ಎಸ್. ರಾಜಾರಾಮ್ (84) ಶನಿವಾರ ಬೆಳಗ್ಗೆ ನಿಧನರಾಗಿದ್ದಾರೆ.

ಆರ್.ಎಸ್.ರಾಜಾರಾಮ್
ಆರ್.ಎಸ್.ರಾಜಾರಾಮ್ (ETV Bharat)
author img

By ETV Bharat Karnataka Team

Published : Aug 17, 2024, 8:26 PM IST

Updated : Aug 17, 2024, 10:40 PM IST

ಬೆಂಗಳೂರು: ಕರ್ನಾಟಕದ ಪ್ರಸಿದ್ಧ ಪ್ರಕಾಶನ ಸಂಸ್ಥೆಯಾಗಿರುವ ನವಕರ್ನಾಟಕ ಪ್ರಕಾಶನದ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಆರ್.ಎಸ್. ರಾಜಾರಾಮ್ ಶನಿವಾರ ಬೆಳಗ್ಗೆ ಬೆಂಗಳೂರಿನ ಅಬ್ಬಿಗೆರೆಯಲ್ಲಿರುವ ತಮ್ಮ ಸ್ವಗೃಹದಲ್ಲಿ ನಿಧನರಾಗಿದ್ದಾರೆ.

1960ರಿಂದ ನವಕರ್ನಾಟಕ ಪ್ರಕಾಶನದಲ್ಲಿ ಕೆಲಸಕ್ಕೆ ಸೇರಿ, ತಮ್ಮ ಕ್ರಿಯಾಶೀಲತೆ, ಬದ್ಧತೆಯಿಂದಾಗಿ ಸಂಸ್ಥೆಯ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿ ನವಕರ್ನಾಟಕ ಪ್ರಕಾಶನವನ್ನು ರಾಜ್ಯದಲ್ಲಿ, ಕನ್ನಡ ಓದುಗರ ಮಧ್ಯೆ ವ್ಯಾಪಕವಾಗಿ ಬೆಳೆಸಿದ ಕೀರ್ತಿ ರಾಜಾರಾಮ್ ಅವರಿಗೆ ಸಲ್ಲುತ್ತದೆ. ಕನ್ನಡ ಸಾಹಿತ್ಯ, ವೈಚಾರಿಕ ಲೋಕಕ್ಕೆ ವಿಭಿನ್ನವಾದ ಕೃತಿಗಳನ್ನು ರಾಜಾರಾಮ್ ಪರಿಚಯಿಸಿದ್ದಾರೆ. ವಿಶ್ವಕಥಾಕೋಶ, ಕರ್ನಾಟಕ ಏಕೀಕರಣ ಇತಿಹಾಸ, ಸ್ವತಂತ್ರ್ಯ ಗಂಗೆಯ ಸಾವಿರ ತೊರೆಗಳು, ಲೋಕಾಯತ, ಜ್ಞಾನ-ವಿಜ್ಞಾನ-ಕೋಶ, ಕರ್ನಾಟಕ ಕಲಾದರ್ಶನ, ಲೋಕ-ಜ್ಞಾನ-ಮಾಲೆ, ಇಗೋ ಕನ್ನಡ, ವಿಶ್ವಮಾನ್ಯರು, ಲೋಕತತ್ವಶಾಸ್ತ್ರ ಪ್ರವೇಶಿಕೆ ಇಂತಹ ಹಲವಾರು ಯೋಜನೆಗಳನ್ನು ರಾಜ್ಯದ, ದೇಶದ ಪ್ರತಿಭಾನ್ವಿತ ಚಿಂತಕರ, ಲೇಖಕರ ಮೂಲಕ ಬರೆಯಿಸಿ, ಪ್ರಕಟಿಸಿ ಕನ್ನಡ ಸಾಹಿತ್ಯ ಲೋಕಕ್ಕೆ ಅರ್ಥಪೂರ್ಣವಾದ ಕೃತಿಗಳನ್ನು ಕೊಡುವಲ್ಲಿ ರಾಜಾರಾಮ್ ಅವರ ಪಾತ್ರ ದೊಡ್ಡದಾಗಿದೆ.

ಪುಸ್ತಕಗಳ ಮೂಲಕ ಮಾನವಕುಲದ ಸೇವೆ ಎಂಬ ಘೋಷಣೆಯೊಂದಿಗೆ ಕರ್ನಾಟಕದಲ್ಲಿ ವೈಚಾರಿಕ, ಜನಪರ, ಪ್ರಗತಿಪರ ಎಡಪಂಥೀಯ ಸಾಹಿತ್ಯವನ್ನು ನವಕರ್ನಾಟಕ ಪ್ರಕಾಶನ ಹೊರತರುವಲ್ಲಿ ರಾಜಾರಾಮ್ ಅವರ ಪಾತ್ರ ಸ್ಮರಣೀಯವಾದದ್ದು. ಕರ್ನಾಟಕದಲ್ಲಿ ಪುಸ್ತಕ ಓದುವ ಸಂಸ್ಕೃತಿಯನ್ನು ಬೆಳೆಸುವಲ್ಲಿ ಅವರ ಪಾತ್ರ ಪ್ರಮುಖವಾಗಿದೆ. ಪುಸ್ತಕ ಪ್ರದರ್ಶನ ತಂಡಗಳನ್ನು ಕಟ್ಟಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ, ತಾಲೂಕು ಕೇಂದ್ರಗಳಲ್ಲಿ ಪುಸ್ತಕ ಪ್ರದರ್ಶನಗಳನ್ನು ಏರ್ಪಡಿಸಿ ರಾಜ್ಯದ ಮೂಲೆ ಮೂಲೆಗೆ ಪ್ರಮುಖ ಲೇಖಕರ ವಿಭಿನ್ನ ವಸ್ತು ವಷಯದ ಕೃತಿಗಳು ತಲುಪುವಂತೆ ಮಾಡುವಲ್ಲಿ ಅವರ ಕ್ರಿಯಾಶೀಲತೆ ಕೆಲಸ ಮಾಡಿದೆ.

1941 ಜನವರಿ 30ರಂದು ಮಂಗಳೂರಿನಲ್ಲಿ ಜನಿಸಿದ ರಾಜಾರಾಮ್, ಮಂಗಳೂರು ಮತ್ತು ಪುತ್ತೂರುಗಳಲ್ಲಿ ವಿದ್ಯಾಭ್ಯಾಸ ಮಾಡಿದರು. ಹೈಸ್ಕೂಲು ಓದುವಾಗಲೇ ಮಾರ್ಕ್ಸ್ ವಾದಿ ಸಾಹಿತ್ಯದ ಬಗ್ಗೆ ಆಕರ್ಷಣೆ ಹೊಂದಿದ್ದರು. ಮಂಗಳೂರಿನಲ್ಲಿ ನಡೆಯುವ ರೈತ ಕಾರ್ಮಿಕ ಚಳವಳಿಗಳಲ್ಲಿ ಸ್ವಯಂ ಸೇವಕನಾಗಿ ಭಾಗವಹಿಸಿದರು. ಸ್ವಾತಂತ್ರ್ಯ ಹೋರಾಟಗಾರ ಬಿ.ವಿ. ಕಕ್ಕಿಲ್ಲಾಯ ಇವರ ಕ್ರಿಯಾಶೀಲತೆಯನ್ನು ನೋಡಿ ಬೆಂಗಳೂರಿನ ನವಕರ್ನಾಟಕ ಪ್ರಕಾಶನಕ್ಕೆ ಸೇರಿಸಿದರು. 1960ರಿಂದ ಬೆಂಗಳೂರಿನಲ್ಲಿ ಆರಂಭವಾಗಿದ್ದ ನವಕರ್ನಾಟಕ ಪ್ರಕಾಶನ ಸಂಸ್ಥೆಗೆ ಸೇರಿದ ರಾಜಾರಾಮ್ ಅವರು 5 ದಶಕಕ್ಕೂ ಹೆಚ್ಚು ಕಾಲ ಪ್ರಕಾಶನ ಸಂಸ್ಥೆಯಲ್ಲಿ ಕೆಲಸ ಮಾಡಿ ತಮ್ಮ ಕನಸಿನ ಯೋಜನೆಗಳನ್ನು ಜಾರಿಗೆ ತಂದರು. ತಮ್ಮ 75ನೇ ವಯಸ್ಸಿನವರೆಗೂ ಕ್ರಿಯಾಶೀಲರಾಗಿ ಕೆಲಸ ಮಾಡಿ ನಂತರ ವಿಶ್ರಾಂತಿ ಪಡೆದರು.

84ನೇ ವಯಸ್ಸಿನವರಾಗಿದ್ದ ರಾಜಾರಾಮ್ ಕಳೆದ ವಾರ ಆರೋಗ್ಯದಲ್ಲಿ ಏರುಪೇರಾಗಿತ್ತು. ವಯೋಸಹಜ ಅಸ್ವಸ್ಥತೆಯ ಕಾರಣದಿಂದ ಇಂದು ರಾಜಾರಾಮ್ ಅವರು ನಿಧನ ಹೊಂದಿದ್ದಾರೆ. ಒಬ್ಬ ಪುತ್ರ. ಒಬ್ಬ ಪುತ್ರಿ ಅಪಾರ ಬಂಧುಬಳಗ ಹಾಗೂ ಅಪಾರ ಸಾಹಿತ್ಯ ಸಾಂಸ್ಕೃತಿಕ ಲೋಕದ ಒಡನಾಡಿಗಳನ್ನು ಆಗಲಿದ್ದಾರೆ. ನವಕರ್ನಾಟಕ ಪ್ರಕಾಶನದ ಸಿಬ್ಬಂದಿ, ಓದುಗರು, ಹಿತೈಷಿಗಳ ಪರವಾಗಿ ರಾಜಾರಾಮ್ ಅವರಿಗೆ ನೋವಿನ ನಮನಗಳನ್ನು ಸಲ್ಲಿಸುವುದಾಗಿ ನವಕರ್ನಾಟಕ ಪ್ರಕಾಶನದ ವ್ಯವಸ್ಥಾಪಕ ನಿರ್ದೇಶಕ ಡಾ. ಸಿದ್ದನಗೌಡ ಪಾಟೀಲ ತಿಳಿಸಿದ್ದಾರೆ.

ಇದನ್ನೂ ಓದಿ: ಪೋಷಕರೇ, ನಿಮ್ಮ ಮಕ್ಕಳಿಗೆ ಯಾವ ರೀತಿ ಬುಕ್​ ಇಷ್ಟ ಎಂಬ ಬಗ್ಗೆ ನಿಮಗಿದೆಯಾ ಐಡಿಯಾ? - Book Choice for children

Last Updated : Aug 17, 2024, 10:40 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.