ತುಮಕೂರು: ತಿಪಟೂರು ನಗರದ ವಿವಿಧ ಬಡಾವಣೆಗಳಲ್ಲಿ ಪ್ರತಿಷ್ಠಾಪಿಸಿ ಪೂಜಿಸಲ್ಪಟ್ಟ ಗಣೇಶ ವಿಗ್ರಹಗಳ ಸಾಮೂಹಿಕ ಗಣೇಶ ನಿಮಜ್ಜನ ಮೆರವಣಿಗೆಯಲ್ಲಿ ಹಿಂದೂಗಳು ಸೇರಿದಂತೆ ಮುಸ್ಲಿಂ ಸಮುದಾಯದವರೂ ಭಾಗವಹಿಸಿ ಸಂಭ್ರಮಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಕುಮಾರ್ ಮತ್ತು ತಿಪಟೂರು ಉಪ ವಿಭಾಗದ ಪೊಲೀಸ್ ಉಪ ಅಧೀಕ್ಷಕ ವಿನಾಯಕ್ ಎನ್. ಶೆಟ್ಟಿಗೇರಿ ನೇತೃತ್ವದಲ್ಲಿ, ಜಿಲ್ಲಾ ಮತ್ತು ತಾಲೂಕು ಪೊಲೀಸ್ ಸಿಬ್ಬಂದಿ ನಗರದೆಲ್ಲೆಡೆ ಬಿಗಿ ಬಂದೋಬಸ್ತ್ ಒದಗಿಸಿದರು.
ವಿವಿಧ ಜಾನಪದ ಕಲಾತಂಡಗಳೊಂದಿಗೆ ಸಾಮೂಹಿಕ ಗಣೇಶೋತ್ಸವದ ನಿಮಜ್ಜನ ಮಹೋತ್ಸವ ಬಿಗಿ ಪೊಲೀಸ್ ಬಂದೋಬಸ್ತಿನಲ್ಲಿ ನಡೆಯಿತು. ಗಣೇಶೋತ್ಸವದಲ್ಲಿ ಸುಮಾರು ಹತ್ತಕ್ಕೂ ಹೆಚ್ಚು ಗಣೇಶ ಮೂರ್ತಿಗಳನ್ನು ನಗರದ ಅಮಾನಿಕೆರೆಯ ಕಲ್ಯಾಣಿಯಲ್ಲಿ ನಿಮಜ್ಜನ ಮಾಡಲಾಯಿತು.
ಉತ್ಸವದಲ್ಲಿ ಕಾಂಗ್ರೆಸ್ ಶಾಸಕ ಕೆ. ಷಡಕ್ಷರಿ, ಮಾಜಿ ಸಚಿವ ಬಿ.ಸಿ. ನಾಗೇಶ್, ನಗರಸಭಾ ಮಾಜಿ ಸದಸ್ಯರಾದ ಪ್ರಸನ್ನ ಕುಮಾರ್, ತರಕಾರಿ ಗಂಗಾಧರ್, ಸದಸ್ಯರಾದ ಶಶಿಕಿರಣ್, ರಾಮಿ, ಮುಖಂಡರಾದ ಶ್ರೀಕಂಠ, ಧರಣೇಶ್, ಸುಜಿತ್ ಭೂಷಣ್, ಸೈಫುಲ್ಲಾ ದಸ್ತಗಿರ್ ಮತ್ತು ಮುನ್ನ ಸೇರಿದಂತೆ ಸಮಾಜದ ಮುಖಂಡರು ಹಾಗೂ ಗಣೇಶ ಉತ್ಸವದ ಪದಾಧಿಕಾರಿಗಳು ಭಾಗವಹಿಸಿದರು.
ಇದನ್ನೂ ಓದಿ: ಕಟಪಾಡಿ ಗಣೇಶಮೂರ್ತಿ ವಿಸರ್ಜನಾ ಮೆರವಣಿಗೆ: ಗಮನ ಸೆಳೆದ ಪುಟಾಣಿಗಳ ಹುಲಿವೇಷ ಕುಣಿತ - ವಿಡಿಯೋ - Tiger dance