ETV Bharat / state

'ಮುಕ್ತ ದಿನ'ದಲ್ಲಿ ಖಗೋಳಶಾಸ್ತ್ರದ ವಿಸ್ಮಯಗಳನ್ನು ಕಣ್ತುಂಬಿಕೊಂಡ ವಿಜ್ಞಾನಾಸಕ್ತರು

ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಆಸ್ಟ್ರೋ ಫಿಸಿಕ್ಸ್ ಸಂಸ್ಥೆಯಲ್ಲಿ ಭಾನುವಾರ ಖಗೋಳಶಾಸ್ತ್ರಕ್ಕೆ ಸಂಬಂಧಪಟ್ಟ ಮುಕ್ತ ದಿನ ಎಂಬ ಕಾರ್ಯಕ್ರಮ ಆಯೋಜಿಸಿದ್ದು, ವಿಜ್ಞಾನಾಸಕ್ತರು ಭಾಗವಹಿಸಿ ಮಾಹಿತಿ ಪಡೆದಿದ್ದಾರೆ.

author img

By ETV Bharat Karnataka Team

Published : Feb 26, 2024, 6:48 AM IST

muktha dina program
ಹೀಲಿಯಂ ತುಂಬಿದ ಬಲೂನ್ ಪ್ರದರ್ಶನ

ಬೆಂಗಳೂರು: ಭಾನುವಾರ ಕೋರಮಂಗಲದ ಇಂಡಿಯನ್​​ ಇನ್‌ಸ್ಟಿಟ್ಯೂಟ್​ ಆಫ್​ ಆಸ್ಟ್ರೋ ಫಿಸಿಕ್ಸ್​ ಸಂಸ್ಥೆಯಲ್ಲಿ ಖಗೋಳಶಾಸ್ತ್ರದ ಆಸಕ್ತರಿಗಾಗಿ ಮುಕ್ತ ದಿನವನ್ನು ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಸಿಲಿಕಾನ್ ಸಿಟಿ ಸೇರಿದಂತೆ ದೇಶದ ಇತರ ನಗರಗಳ 4,000 ಕ್ಕೂ ಹೆಚ್ಚು ವಿಜ್ಞಾನಾಸಕ್ತರು ಪಾಲ್ಗೊಂಡಿದ್ದರು.

muktha dina program
'ಮುಕ್ತ ದಿನ'

ಹೆಚ್ಚಿನ ಸಂಖ್ಯೆಯ ಜನರು ಲೇಸರ್ ಆಪ್ಟಿಕ್ಸ್ ಡಿಸ್ಪ್ಲೇ, ಟೆಲಿಸ್ಕೋಪ್ ಮಾದರಿಗಳು ಮತ್ತು ಸನ್‌ಸ್ಪಾಟ್ ವೀಕ್ಷಣೆಯನ್ನು ಮಾಡಿ ಸಂತೋಷಪಟ್ಟರು. ಖಗೋಳಶಾಸ್ತ್ರ ಹಾಗೂ ಬಾಹ್ಯಾಕಾಶದ ಕುರಿತ ಪೋಸ್ಟರ್‌ಗಳು ಮತ್ತು ಪ್ರಯೋಗಗಳ ಮೂಲಕ ಐಐಎ ಅಧ್ಯಾಪಕರುಗಳು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರ ಪ್ರಶ್ನೆಗಳಿಗೆ ಉತ್ತರಿಸಿದರು. ರಸಪ್ರಶ್ನೆ ಕಿಯೋಸ್ಕ್‌ನಲ್ಲಿ ವೀಕ್ಷಿಸಲು ಬಂದ ಜನರು ಖಗೋಳಶಾಸ್ತ್ರದ ಕುರಿತು ತಮ್ಮ ಜ್ಞಾನವನ್ನು ಪರೀಕ್ಷಿಸಿಕೊಂಡರು. ಕಟ್ಟಿಹಾಕಿದ ಹೀಲಿಯಂ ತುಂಬಿದ ಬಿಳಿ ಬಣ್ಣದ ಬಲೂನ್ ಪ್ರದರ್ಶನ ಮುಕ್ತ ದಿನದ ದೊಡ್ಡ ಆಕರ್ಷಣೆಯಾಗಿತ್ತು.

muktha dina program
'ಮುಕ್ತ ದಿನ'

ಬೆಂಗಳೂರು ಆಸ್ಫೋನಾಮಿಕಲ್‌ ಸೊಸೈಟಿ ದೂರದರ್ಶಕಗಳ ಮೂಲಕ ಸಾರ್ವಜನಿಕರಿಗೆ ಸೂರ್ಯನನ್ನು ಹತ್ತಿರದಿಂದ ತೋರಿಸುವ ವ್ಯವಸ್ಥೆ ಮಾಡಿತ್ತು. ಇಲ್ಲಿ ಸೂರ್ಯನ ಕುರಿತ ಹಲವು ಮಾಹಿತಿಯನ್ನು ವಿವರಿಸಲಾಯಿತು. ಜನರು ಉದ್ದವಾದ ಸರತಿ ಸಾಲಿನಲ್ಲಿ ನಿಂತು ಈ ದೃಶ್ಯಗಳನ್ನು ಕಣ್ತುಂಬಿಕೊಂಡಿದ್ದು ವಿಶೇಷವಾಗಿತ್ತು.

muktha dina program
'ಮುಕ್ತ ದಿನ'

ಖಗೋಳಶಾಸ್ತ್ರವನ್ನು ಸಾರ್ವಜನಿಕರಿಗೆ ಕೊಂಡೊಯ್ಯಲು ಮತ್ತು ನಮ್ಮ ಸಂಸ್ಥೆಯಲ್ಲಿ ನಡೆಯುತ್ತಿರುವ ಸಂಶೋಧನೆಗಳ ಬಗ್ಗೆ ತಿಳಿಸಲು ಸಂತೋಷಪಟ್ಟೆವು. ಮುಕ್ತ ದಿನ ವಿಚಾರ ವಿನಿಮಯಕ್ಕೆ ಅತ್ಯುತ್ತಮ ವೇದಿಕೆಯಾಗಿ ಹೊರಹೊಮ್ಮಿತು ಎಂದು ಐಐಎ ಸಂಸ್ಥೆಯ ನಿರ್ದೇಶಕಿ ಪ್ರೊ. ಅನ್ನಪೂರ್ಣಿ ಸುಬ್ರಮಣ್ಯಂ ಹೇಳಿದ್ದಾರೆ.

ಹಾಗೇ, ಐಐಎ ಸಾರ್ವಜನಿಕ ಸಂಪರ್ಕಾಧಿಕಾರಿ ನಿರುಜ್ ಮೋಹನ್​​ ಈ ಕುರಿತು, ಇಂದು(ನಿನ್ನೆ) ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಬಂದಿದ್ದು ಸಂತಸ ತಂದಿದೆ. ಖಗೋಳಶಾಸ್ತ್ರ ಎಲ್ಲ ವಯಸ್ಸಿನವರನ್ನು ಆಕರ್ಷಿಸುವ ವಿಷಯವಾಗಿದೆ. ಮುಕ್ತ ದಿನ ವಿಶ್ವದ ಸಾರ್ವಜನಿಕರೊಂದಿಗೆ ವಿಜ್ಞಾನದ ವಿಷಯಗಳನ್ನು ಹಂಚಿಕೊಳ್ಳಲು ಉತ್ತಮ ಸಂದರ್ಭವಾಗಿತ್ತು. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚು ಸಾರ್ವಜನಿಕ ಕಾರ್ಯಕ್ರಮವನ್ನು ಆಯೋಜಿಸಲು ಇಂದಿನ ದಿನ ಸ್ಪೂರ್ತಿ ನೀಡಿದೆ ಎಂದು ಎಂದಿದ್ದಾರೆ.

ಇದನ್ನೂ ಓದಿ: ಚಂದ್ರನ ಅಂಗಳ ಸ್ಪರ್ಶಿಸಿದ ಖಾಸಗಿ ಲ್ಯಾಂಡರ್: ದುರ್ಬಲ ಸಂಕೇತಗಳಿಂದಾಗಿ ಸಂವಹನ ಕೊರತೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.