ETV Bharat / state

ಮುಡಾ: 50:50 ಅನುಪಾತದ ನಿವೇಶನ ಹಂಚಿಕೆ‌ ರದ್ದು‌ ಮಾಡಬೇಕು- ಶಾಸಕ‌ ಶ್ರೀವತ್ಸ

ಬಿಜೆಪಿ ಶಾಸಕ ಶ್ರೀವತ್ಸ, ಮುಡಾದಲ್ಲಿ 50:50 ಅನುಪಾತದ ನಿವೇಶನ ಹಂಚಿಕೆ ರದ್ದು ಮಾಡಬೇಕೆಂದು ಒತ್ತಾಯಿಸಿದ್ದಾರೆ.

mla-srivatsa
ಶಾಸಕ‌ ಶ್ರೀವತ್ಸ (ETV Bharat)
author img

By ETV Bharat Karnataka Team

Published : Oct 17, 2024, 8:19 PM IST

ಮೈಸೂರು: ಮುಡಾದಲ್ಲಿ 50:50 ಅನುಪಾತದಲ್ಲಿ ನೀಡಲಾಗಿರುವ ಸೈಟ್​ಗಳನ್ನು ರದ್ದು ಮಾಡಬೇಕು ಎಂದು ಸಿಎಂಗೆ ಮನವಿ ಪತ್ರ ನೀಡಿದ್ದೇನೆ. 1,400ಕ್ಕೂ ಹೆಚ್ಚು 50:50 ಅನುಪಾತದ ಸೈಟ್​ಗಳಿವೆ ಎಂಬ ವದಂತಿಗಳು ಓಡಾಡುತ್ತಿವೆ. ಆ ಎಲ್ಲ ಸೈಟ್​ಗಳನ್ನು ‌ಮುಡಾ ಆಸ್ತಿ ಎಂದು‌ ಇ.ಸಿ.ಯಲ್ಲಿ ಬರುವ ಹಾಗೆ ನೋಡಿಕೊಳ್ಳಬೇಕು ಎಂದು ಮನವಿ‌ ಮಾಡಿರುವುದಾಗಿ ಮೈಸೂರಿನ ಕೆ.ಆರ್.ಕ್ಷೇತ್ರದ ಬಿಜೆಪಿ ಶಾಸಕ ಶ್ರೀವತ್ಸ ಹೇಳಿದ್ದಾರೆ.

ಸಬ್ ರಿಜಿಸ್ಟರ್ ಕಚೇರಿಯಲ್ಲಿ ‌ಈ ಅನುಪಾತದ ಯಾವುದೇ ಸೈಟ್ ಅನ್ನು ಎರಡನೇ ಸಲ ನೊಂದಣಿ ಮಾಡಿಕೊಳ್ಳಬಾರದು ಎಂದು‌ ಸುತ್ತೋಲೆ ಹೊರಡಿಸಿ ಎಂದು ಮನವಿ‌ ಮಾಡಿದ್ದೇನೆ. ಮುಡಾ ಪ್ರಕರಣಕ್ಕೆ ಸಂಬಂಧಿಸಿದ ಟೆಕ್ನಿಕಲ್ ಕಮಿಟಿ ವರದಿಯನ್ನು ಆದಷ್ಟು ಬೇಗ ಜಾರಿಗೆ ತಂದು ಸಂಬಂಧಪಟ್ಟವರನ್ನು ತನಿಖೆಗೆ ಒಳಪಡಿಸಬೇಕು. ಇಬ್ಬರು ಮುಡಾ ಕಮಿಷನರ್​​ಗಳನ್ನು ಇನ್ನೂ ಕೂಡ ಉಳಿಸಿಕೊಂಡಿದ್ದಾರೆ, ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು. ಈಗಾಗಲೇ ಮುಡಾ ಅಧ್ಯಕ್ಷರ ತಲೆ ದಂಡ ಆಗಿದೆ. ಸಿಎಂ ಸಿದ್ದರಾಮಯ್ಯ ಸೂಚನೆ ಮೇರೆಗೆ ರಾಜೀನಾಮೆ ನೀಡಿದ್ದೇನೆ ಎಂದು ಅವರೇ ಹೇಳಿದ್ದಾರೆ. ಅವರಿಗೆ ಬರುವ ಸೂಚನೆ ಮುಡಾದಲ್ಲಿನ ಇಬ್ಬರು ಕಮಿಷನರ್​ಗೆ ಏಕೆ ಬರುವುದಿಲ್ಲ ಎಂದು ಪ್ರಶ್ನಿಸಿದರು.

ಶಾಸಕ‌ ಶ್ರೀವತ್ಸ ಹೇಳಿಕೆ (ETV Bharat)

ಸಿಎಂ ಮತ್ತು ನಗರಾಭಿವೃದ್ಧಿ ಸಚಿವರನ್ನು ಆ ಇಬ್ಬರು ಕಮಿಷನರ್​ಗಳು ನೀವು ನಮ್ಮ ಹೆಸರು ಹೇಳಿದರೆ ನಾವು ನಿಮ್ಮ ಭಷ್ಟಾಚಾರಗಳನ್ನು ಹೊರತರುತ್ತೇವೆ ಎಂದು ಹೆದರಿಸುತ್ತಿದ್ದಾರೆ ಎನ್ನುವ ವದಂತಿಗಳು ಕೂಡ ಹೇಳಿ ಬರುತ್ತಿವೆ. ಅದಕ್ಕಾಗಿ ಕಮಿಷನರ್​ಗಳನ್ನು ಮುಟ್ಟಿಲ್ಲ ಎಂದು ಕಾಣಿಸುತ್ತಿದೆ. ಈ ಎಲ್ಲ ಕಾರಣಗಳಿಂದ ತಕ್ಷಣವೇ ತನಿಖೆ ನಡೆಸಬೇಕು ಎಂದು ಮನವಿ ನೀಡಿದ್ದೇನೆ ಎಂದರು.

ಇದೇ ವೇಳೆ ವಾಲ್ಮೀಕಿ ನಿಗಮ ಹಗರಣದ ಕುರಿತು ಮಾತನಾಡಿದ ಅವರು, ಮಾಜಿ ಮಂತ್ರಿ ನಾಗೇಂದ್ರ ಜೈಲಿನಿಂದ ಹೊರಬಂದಿದ್ದಾರೆ. ಮುಖ್ಯಮಂತ್ರಿಗಳೇ ಸದನದೊಳಗೆ 90 ಕೋಟಿ ಹಗರಣ ಆಗಿದೆ ಎಂದು ಒಪ್ಪಿಕೊಂಡಿದ್ದಾರೆ. ಹೀಗಿರುವಾಗ ನಾಗೇಂದ್ರ ಇ.ಡಿ. ತನ್ನ ಮೇಲೆ ಒತ್ತಡ ಹೇರಿತ್ತು ಎಂದು ಹೇಳಿಕೆ ನೀಡಿರುವುದು ಸರಿಯಲ್ಲ ಎಂದರು.

ಎಲ್ಲವನ್ನೂ ಇ.ಡಿ.ಯವರು ತನಿಖೆ ನಡೆಸುತ್ತಿದ್ದಾರೆ. ಭ್ರಷ್ಟಾಚಾರದ ಹಣ ಯಾರ ಖಾತೆಗೆ ಹೋಗಿದೆ ಎಂಬುದನ್ನು ಚಾರ್ಜ್​ಶೀಟ್​ನಲ್ಲಿ ಉಲ್ಲೇಖಿಸಿದ್ದಾರೆ. ಆದರೂ ಈ ಹೇಳಿಕೆ ಏಕೆ? ಭ್ರಷ್ಟಾಚಾರ ಮಾಡಿ ಒತ್ತಡ ಹೇರಿದರೆಂದರೆ ನಂಬಿಕೆ ಬರುತ್ತಾ?. ಈ ರೀತಿಯ ಹೇಳಿಕೆಯಿಂದ ರಾಜ್ಯದ ಜನತೆ ತಲೆ ತಗ್ಗಿಸುವಂತಾಗಿದೆ. ಸಿಬಿಐ ಕೂಡಾ ಪ್ರಕರಣವನ್ನು ತನಿಖೆ ನಡೆಸುತ್ತಿದೆ. ತಪ್ಪು ಮಾಡಿಲ್ಲ ಎಂದರೆ ಸಿಎಂ ರಾಜೀನಾಮೆ ಏಕೆ ತೆಗೆದುಕೊಂಡರು ಪ್ರಶ್ನಿಸಿದರು.

ಇದನ್ನೂ ಓದಿ: ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಕಣ್ಣೀರು ಹಾಕಿದ ಮಾಜಿ ಸಚಿವ ಬಿ.ನಾಗೇಂದ್ರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.