ETV Bharat / state

ಮುಡಾ: ಅಕ್ರಮವಾಗಿ ಹಂಚಿಕೆ ಮಾಡಿರುವ 48 ನಿವೇಶನಗಳ ಖಾತೆ, ಕಂದಾಯ ರದ್ದು

ಈ ಹಿಂದೆ ಮುಡಾ ಆಯುಕ್ತರಾಗಿದ್ದ ದಿನೇಶ್ ಕುಮಾರ್ ಅವರು ದಟ್ಟಗಳ್ಳಿ ಬಡಾವಣೆಯಲ್ಲಿ ಅಭಿವೃದ್ಧಿಪಡಿಸಿದ್ದ 48 ನಿವೇಶನಗಳನ್ನು ಒಂದೇ ದಿನ ಮಂಜೂರು ಮಾಡಿ, ಕೆಲವು ತಿಂಗಳಗಳ ಬಳಿಕ 48 ಮಂದಿಗೆ ನೋದಾಯಿಸಿದ್ದರು ಎಂದು ತಿಳಿದು ಬಂದಿದೆ.

MUDA Ofice
ಮುಡಾ ಕಚೇರಿ, ಮೈಸೂರು (ETV Bharat)
author img

By ETV Bharat Karnataka Team

Published : 9 hours ago

ಮೈಸೂರು: ನ್ಯಾಯಾಲಯದ ಆದೇಶವನ್ನು ಧಿಕ್ಕರಿಸಿ ಹಂಚಿಕೆ ಮಾಡಲಾಗಿದ್ದ ಮೈಸೂರು ನಗರದ ದಟ್ಟಗಳ್ಳಿ ಬಡಾವಣೆಯ 48 ನಿವೇಶನಗಳ ಖಾತೆ ಮತ್ತು ಕಂದಾಯವನ್ನು ನಗರಾಭಿವೃದ್ಧಿ ಇಲಾಖೆ ರದ್ದುಗೊಳಿಸಿದ್ದು, ನಿವೇಶನಗಳನ್ನು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ವಾಪಸ್‌ ಪಡೆದಿದೆ.

ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ನಾನಾ ತನಿಖಾ ವರದಿಗಳು ಹೊರಬೀಳುವ ಮುನ್ನವೇ, ತೀವ್ರ ವಿವಾದಕ್ಕೆ ಎಡೆಮಾಡಿಕೊಟ್ಟಿದ್ದ ದಟ್ಟಗಳ್ಳಿ ಬಡಾವಣೆಯಲ್ಲಿ 48 ಮಂದಿಗೆ ನಿವೇಶನ ನೀಡಲು 2023 ಮಾರ್ಚ್​ 21ರಂದು ನಡೆದ ಮುಡಾ ಸಾಮಾನ್ಯ ಸಭೆಯಲ್ಲಿ ಕೈಗೊಂಡಿದ್ದ ನಿರ್ಣಯವನ್ನು ರಾಜ್ಯ ಸರ್ಕಾರ ನ.30ರಂದು ರದ್ದುಗೊಳಿಸಿದೆ.

ಈ ಸಂಬಂಧ ಆದೇಶ ಹೊರಡಿಸಿರುವ ನಗರಾಭಿವೃದ್ಧಿ ಇಲಾಖೆಯ ಅಧೀನ ಕಾರ್ಯದರ್ಶಿ ಕೆ.ಲತಾ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ 2023ರ ಮಾರ್ಚ್​ 21ರಂದು ನಡೆದ ಸಾಮಾನ್ಯ ಸಭೆಯಲ್ಲಿ ಕೈಗೊಂಡಿರುವ ನಿರ್ಣಯವನ್ನು ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರಗಳ ಕಾಯ್ದೆ 1987ರ ಕಲಂ 67(3)ರಡಿ ರದ್ದುಪಡಿಸಲಾಗಿದೆ. ಇದರ ಪ್ರಕಾರ ಸರ್ವೇ ನಂಬರ್‌ಗಳಾದ 14, 27, 32, 38, 39, 40 ಹಾಗೂ 41ರಲ್ಲಿ ಅಭಿವೃದ್ಧಿಪಡಿಸಿರುವ ಬಡಾವಣೆಯಲ್ಲಿ ಈ ಹಿಂದಿನ ಮುಡಾ ಆಯುಕ್ತ ಜಿ.ಟಿ.ದಿನೇಶ್ ಕುಮಾರ್ ಮಂಜೂರು ಮಾಡಿ, ನಂತರ ಕೆಲವು ತಿಂಗಳುಗಳ ನೋಂದಾಯಿಸಿರುವ 48 ನಿವೇಶನಗಳ ಖಾತೆ, ಕಂದಾಯಗಳನ್ನು ರದ್ದುಪಡಿಸಲಾಗಿದೆ.

ಪ್ರಕರಣದ ವಿವರ: 2023ರ ಮಾರ್ಚ್ 21ರಂದು ಅಂದು ಮುಡಾ ಅಧ್ಯಕ್ಷರಾಗಿದ್ದ ಯಶಸ್ವಿ ಎಸ್.ಸೋಮಶೇಖರ್ ಅಧ್ಯಕ್ಷತೆಯಲ್ಲಿ ನಡೆದ ಪ್ರಾಧಿಕಾರದ ಸಾಮಾನ್ಯ ಸಭೆಯಲ್ಲಿ ನ್ಯಾಯಾಲಯದ ಅದೇಶವನ್ನು ಧಿಕ್ಕರಿಸಿ, ದಟ್ಟಗಳ್ಳಿ ಬಡಾವಣೆಯಲ್ಲಿ 48 ಮಂದಿಗೆ ನಿವೇಶನ ಮಂಜೂರು ಮಾಡುವಂತೆ ನಿರ್ಣಯ ಮಂಡಿಸಲಾಗಿತ್ತು. ನಂತರ ಅದನ್ನು‌ ಸರ್ಕಾರಕ್ಕೆ ರವಾನಿಸಲಾಗಿತ್ತು. ನಂತರ ಮುಡಾದ ಆಯುಕ್ತರಾಗಿದ್ದ ದಿನೇಶ್ ಕುಮಾರ್, 2023ರ ಏಪ್ರಿಲ್ 29ರಂದು 48 ಮಂದಿಗೆ ನಿವೇಶನ ಮಂಜೂರು ಮಾಡಲು ಜ್ಞಾಪನಾ ಪತ್ರ ಹೊರಡಿಸಿದ್ದರು. 2023ರ ಸೆಪ್ಟೆಂಬರ್ 27ರಂದು ಮಂಜೂರಾತಿ ಮಾಡಿ 2023ರ ಡಿ.8ರಂದು ಎಲ್ಲಾ ನಿವೇಶನಗಳನ್ನು ಮುಡಾ ಕಚೇರಿಯಲ್ಲಿರುವ ಉಪ ನೋಂದಣಾಧಿಕಾರಿಗಳ ಕಛೇರಿಯಲ್ಲಿ ನೋಂದಾಯಿಸಲಾಗಿತ್ತು.

ಆದರೆ, ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರಗಳ ಕಾಯ್ದೆ 1987ರಡಿ, ಅಭಿವೃದ್ಧಿ ಯೋಜನೆಗೆ ಸರ್ಕಾರದಿಂದ ನಿಯಮಾನುಸಾರ ಅನುಮತಿ ಪಡೆದ ನಂತರ ನಿವೇಶನಗಳನ್ನು ಭೂ ಸ್ವಾಧೀನಪಡಿಸಿಕೊಂಡಿರುವ ಭೂ ಮಾಲೀಕರಿಗೆ ಪರಿಹಾರದ ಬದಲಿಗೆ ಹಂಚಿಕೆ ಮಾಡಬೇಕು. ಹಾಗೂ ಭೂಮಿಯನ್ನು ಸ್ವಇಚ್ಛೆಯಿಂದ ಬಿಟುಕೊಡುವುದಕ್ಕಾಗಿ ಪ್ರೋತ್ಸಾಹದಾಯಕ ಯೋಜನೆಯ ಅಡಿಯಲ್ಲಿ ಮಾತ್ರ ನಿವೇಶನ ಹಂಚಿಕೆ‌ ಮಾಡಬೇಕು. ಹೊರತಾಗಿ, ಕೇವಲ ಸ್ವಧೀನದಲ್ಲಿದ್ದರು ಎಂಬ ಮಾತ್ರಕ್ಕೆ ಅಭಿವೃದ್ಧಿಪಡಿಸಿದ ನಿವೇಶನಗಳನ್ನು ಹಂಚಿಕೆ ಮಾಡುವುದು ನಿಯಮಬಾಹಿರವಾಗಿದೆ. ಈ ಬಗ್ಗೆ ಕೆ.ಲತಾ ಆದೇಶದಲ್ಲಿ ತಿಳಿಸಿದ್ದು, ಅದರನ್ವಯ ಹಂಚಿಕೆ ಮಾಡಿದ್ದ ನಿವೇಶನಗಳನ್ನು ವಾಪಸ್‌ ಪಡೆಯಲಾಗಿದೆ ಎಂದು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ರಘುನಂದನ್‌ ಈಟಿವಿ ಭಾರತ್​ಗೆ ತಿಳಿಸಿದರು.

ಇದನ್ನೂ ಓದಿ: ಮುಡಾ: ಇ.ಡಿ ವಿಚಾರಣೆ ಎದುರಿಸಿದ ನಗರಾಭಿವೃದ್ದಿ ಇಲಾಖೆ ಕಾರ್ಯದರ್ಶಿ ದೀಪಾ ಚೋಳನ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.