ಬೆಂಗಳೂರು: ಮುಡಾ ಪ್ರಕರಣ ನೋಡಿ ಇವತ್ತು ಹರಿಯಾಣ ಚುನಾವಣೆಯಲ್ಲಿ ಎಫೆಕ್ಟ್ ಮಾಡಿದೆ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಕೆ.ಬಿ.ಕೋಳಿವಾಡ ಕಿಡಿ ಕಾರಿದ್ದಾರೆ.
ಬೆಂಗಳೂರಿನ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ಸಿಎಂ ರಾಜೀನಾಮೆ ಕೊಟ್ಟು ತನಿಖೆ ಎದುರಿಸಬೇಕು. ನನ್ನ ಹೇಳಿಕೆಗೆ ನಾನು ಈಗಲೂ ಬದ್ದವಾಗಿದ್ದೇನೆ. ಪಕ್ಷಕ್ಕೆ ಧಕ್ಕೆ ಆದರೆ ನೋಟಿಸ್ ಕೊಡ್ತಾರೆ. ನಾನು ಪಕ್ಷದ ದೃಷ್ಟಿಯಿಂದ ಹೇಳಿದ್ದೇನೆ. ಚುನಾವಣೆಯಲ್ಲಿ ಮೋದಿ ಕರ್ನಾಟಕದ ಬಗ್ಗೆ ಮಾತಾಡಿದ್ರು. ಪದೇ ಪದೆ ಮಾತಾಡಿದ್ದು ಎಫೆಕ್ಟ್ ಆಗಿದೆ. ಇನ್ನೂ ಪೂರ್ಣ ಪ್ರಮಾಣದ ಫಲಿತಾಂಶ ಬಂದಿಲ್ಲ. ಆದರೆ, ಎಫೆಕ್ಟ್ ಆಗಿದೆ. ನಾನು ಸಕ್ರಿಯ ರಾಜಕಾರಣದಲ್ಲಿ ಇಲ್ಲ. ಆದರೆ, ಪಕ್ಷ ಉಳಿಸಲು ಕೆಲಸ ಮಾಡುತ್ತೇನೆ ಎಂದರು.
ಮನೆಯಲ್ಲಿ ಕುಳಿತು ವರದಿ ಸಿದ್ಧ ಮಾಡಿದ್ದಾರೆ ಎಂಬ ಶಾಮನೂರು ಶಿವಶಂಕರಪ್ಪ ವಾದದ ವಿಚಾರವಾಗಿ ಪ್ರತಿಕ್ರಿಯಿಸಿ, ಶಾಮನೂರು ಶಿವಶಂಕರಪ್ಪ ಓಡಾಡಿದ್ದಾರಾ? ನಾನು ಸರ್ವೆ ಮಾಡುವಾಗ ಮನೆ ಮನೆ ಓಡಾಡಿದ್ದೇನೆ. ನಮ್ಮ ತಾಲೂಕಿನಲ್ಲಿ ಸರ್ವೆ ಮಾಡುವವರ ಜೊತೆಗೆ ಮನೆ ಮನೆಗೆ ಹೋಗಿದ್ದೇವೆ. ಕಾಂತರಾಜ ವರದಿ ಕೇವಲ ಆರ್ಥಿಕ ಶೈಕ್ಷಣಿಕ ಸಾಮಾಜಿಕ ಜನಗಣತಿ ಮಾತ್ರವಲ್ಲ. ಅದು ಜಾತಿ ಜನಗಣತಿ ಕೂಡ ಹೌದು. ವೈಜ್ಞಾನಿಕ ಅವೈಜ್ಞಾನಿಕ ಎಂದರೆ ಏನೂ ಅಂತ ಅರ್ಥ ಆಗ್ತಾ ಇಲ್ಲ. ಇದರಿಂದ ಯಾವುದೇ ಸಮುದಾಯಕ್ಕೆ ಅನ್ಯಾಯ ಆಗುತ್ತದೆ ಎಂದು ಅನಿಸೋದಿಲ್ಲ. ಇದರ ಜಾರಿಗೆ ಡಿಲೇ ಮಾಡುವ ಅವಶ್ಯಕತೆ ಇಲ್ಲ ಎಂದು ಹೇಳಿದರು.
ಸಬ್ ಕಮಿಟಿ ಮಾಡಿ ಡಿಲೇ ಮಾಡೋ ಅವಶ್ಯಕತೆ ಇಲ್ಲ. ಇದನ್ನು ಮುಂದೂಡುವ ಅವಶ್ಯಕತೆ ಇಲ್ಲ. ಕೆನೆಪದರ ಕಡ್ಡಾಯ ಎಂಬುದು ನನ್ನ ಅಭಿಪ್ರಾಯ. ಒಂದು ತಿಂಗಳು ಟೈಂ ಕೊಟ್ಟು ಏನಾದರೂ ಬದಲಾವಣೆ ಇದ್ರೆ ಮಾಡಲಿ. ಜಾತಿ ಜನಗಣತಿ ಮಾಡುವಾಗ ನಾನೇ ವೈಯಕ್ತಿಕವಾಗಿ ಹಲವು ಕಡೆ ಹೋಗಿದ್ದೇನೆ. ಪ್ರತಿಯೊಂದು ಮನೆಗೆ ಭೇಟಿ ನೀಡಿದ್ದಾರೆ. ಜಾತಿ ಉಪಜಾತಿಯನ್ನೂ ಕೂಡ ದಾಖಲು ಮಾಡಿಕೊಂಡಿದ್ದಾರೆ. ಬಹಳ ಉತ್ತಮವಾಗಿ ಜನಗಣತಿ ಮಾಡಿದ್ದಾರೆ ಎಂದರು.
ಇದನ್ನೂ ಓದಿ: ಜಾತಿಗಣತಿಗೆ ವೀರಶೈವ ಲಿಂಗಾಯತ ಮಹಾಸಭಾ, ಒಕ್ಕಲಿಗರ ವಿರೋಧವಿದೆ: ಶಾಮನೂರು ಶಿವಶಂಕರಪ್ಪ