ETV Bharat / state

ಕೇಂದ್ರ ಸರ್ಕಾರ ರಾಜ್ಯಕ್ಕೆ ಮಾಡುತ್ತಿರುವ ಅನ್ಯಾಯದ ವಿರುದ್ಧ ನಾನು ಧ್ವನಿ ಎತ್ತಿದ್ದೇನೆ: ಸಂಸದ ಡಿ ಕೆ ಸುರೇಶ್ - MP DK Suresh

ನಾನು ಕನ್ನಡಿಗರ ಪರವಾಗಿ ಧ್ವನಿ ಎತ್ತಿದ್ದೇನೆ. ಬಿಜೆಪಿ ಅವರು ಇದನ್ನು ದೇಶ ವಿಭಜನೆ ಎಂದುಕೊಂಡರೆ ನಾನೇನು ಮಾಡಲು ಸಾಧ್ಯವಿಲ್ಲ ಎಂದು ಸಂಸದ ಡಿ ಕೆ ಸುರೇಶ್ ಹೇಳಿದ್ದಾರೆ.

mp-dk-suresh-reaction-on-central-government-over-injustice
ಕೇಂದ್ರ ಸರ್ಕಾರ ರಾಜ್ಯಕ್ಕೆ ಮಾಡುತ್ತಿರುವ ಅನ್ಯಾಯದ ವಿರುದ್ಧ ನಾನು ಧ್ವನಿ ಎತ್ತಿದ್ದೇನೆ: ಸಂಸದ ಡಿ ಕೆ ಸುರೇಶ್
author img

By ETV Bharat Karnataka Team

Published : Mar 19, 2024, 10:46 PM IST

Updated : Mar 19, 2024, 10:54 PM IST

ಕೇಂದ್ರ ಸರ್ಕಾರ ರಾಜ್ಯಕ್ಕೆ ಮಾಡುತ್ತಿರುವ ಅನ್ಯಾಯದ ವಿರುದ್ಧ ನಾನು ಧ್ವನಿ ಎತ್ತಿದ್ದೇನೆ: ಸಂಸದ ಡಿ ಕೆ ಸುರೇಶ್

ರಾಮನಗರ: ಕೇಂದ್ರ ಸರ್ಕಾರ ಕರ್ನಾಟಕ ರಾಜ್ಯಕ್ಕೆ ಮಾಡುತ್ತಿರುವ ಅನ್ಯಾಯದ ವಿರುದ್ಧ ನಾನು ಧ್ವನಿ ಎತ್ತಿದ್ದೇನೆ. ಬಿಜೆಪಿಯವರು ಅದನ್ನು ದೇಶ ವಿಭಜನೆ ಎಂದುಕೊಂಡರೆ ನಾನೇನು ಮಾಡಲು ಸಾಧ್ಯವಿಲ್ಲ ಎಂದು ಸಂಸದ ಡಿ.ಕೆ. ಸುರೇಶ್ ಹೇಳಿದ್ದಾರೆ. ರಾಮನಗರ ಜಿಲ್ಲೆ ಹಾರೋಹಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಶಿವಮೊಗ್ಗದಲ್ಲಿ ಪ್ರಧಾನಿ ಮೋದಿ ಅವರು ನಿಮ್ಮ ಹೇಳಿಕೆಯನ್ನು ದೇಶ ವಿಭಜನೆ ಕೂಗು ಎಂದು ಹೇಳಿರುವ ಬಗ್ಗೆ ಕೇಳಿದಾಗ ಪ್ರತಿಕ್ರಿಯಿಸಿ, ಏನೇ ಹೇಳಿದರೂ ನಡೆಯುತ್ತದೆ ಎಂಬ ಧಾಟಿಯಲ್ಲಿ ಅವರು ಮಾತನಾಡುತ್ತಿದ್ದಾರೆ. ನೀವು ನನ್ನನ್ನು ಪ್ರಶ್ನೆ ಮಾಡಿದ ರೀತಿಯಲ್ಲಿ ಅವರನ್ನು ಪ್ರಶ್ನೆ ಮಾಡಿ. ನನ್ನ ಹೇಳಿಕೆಯನ್ನು ತಿರುಚಲಾಗಿದೆ. ನಾನು ಯಾವ ಕಾರಣಕ್ಕೆ ಆ ಹೇಳಿಕೆ ನೀಡಿದೆ ಎಂದು ನೀವು ಪ್ರಧಾನಿಯವರನ್ನು ಕೇಳಿ ಎಂದರು.

ಮೋದಿ ಅವರು ಕಳೆದ 10 ವರ್ಷಗಳಲ್ಲಿ ಬೆಂಗಳೂರಿಗೆ ಹಾಗೂ ಕರ್ನಾಟಕಕ್ಕೆ ಕೊಟ್ಟಿರುವ ಕೊಡುಗೆಗಳ ಬಗ್ಗೆ ಚರ್ಚೆ ಮಾಡಿ. ನೀರಿನ ಅಭಾವ ಇರುವ ಸಂದರ್ಭದಲ್ಲಿ ಮೇಕೆದಾಟು ಯೋಜನೆಗೆ ಅನುಮತಿ ಯಾಕೆ ನೀಡುತ್ತಿಲ್ಲ?. ಈ ಯೋಜನೆಗೆ ಅನುಮತಿ ನೀಡಲು ಯಾವ ಸಮಸ್ಯೆ ಇದೆ. ನಾನು ಕನ್ನಡಿಗರ ಪರವಾಗಿ ಧ್ವನಿ ಎತ್ತಿದ್ದೇನೆ. ಅವರು ಅದನ್ನು ದೇಶ ವಿಭಜನೆ ಎಂದುಕೊಂಡರೆ ನಾನೇನು ಮಾಡಲು ಸಾಧ್ಯವಿಲ್ಲ. ಒಬ್ಬ ಭಾರತೀಯನಾಗಿ ಹಾಗೂ ಕನ್ನಡಿಗನಾಗಿ ಕರ್ನಾಟಕ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯ ಪ್ರಶ್ನೆ ಮಾಡುತ್ತೇನೆ. ದೇಶದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಾಗಲು ಕೇಂದ್ರ ಸರ್ಕಾರವೇ ಕಾರಣ. ಅವರು ಏನೇ ಅಂದರೂ ಚಿಂತೆಯಿಲ್ಲ ಎಂದು ಹೇಳಿದರು.

ಬಿಜೆಪಿ ಸರ್ಕಾರದ ಶಾಡೋ ಸಿಎಂಗಳನ್ನೂ ಜನ ನೋಡಿದ್ದಾರೆ: ಅನೇಕ ಸೂಪರ್ ಸಿಎಂಗಳಿದ್ದಾರೆ ಎಂಬ ಪ್ರಧಾನಿ ಟೀಕೆ ಬಗ್ಗೆ ಪ್ರತಿಕ್ರಿಯಿಸಿ, ಈ ರೀತಿ ಹೇಳುವುದು ಹೊಸತೇನಲ್ಲ. ಅವರ ಸರ್ಕಾರ ಇದ್ದಾಗ ಯಾರೆಲ್ಲಾ ಶಾಡೋ ಸಿಎಂ ಆಗಿ ಕೆಲಸ ಮಾಡಿದ್ದಾರೆ ಎಂದು ಜನ ನೋಡಿದ್ದಾರೆ. ಅವರು ಹೇಳಿಕೆ ಕೇವಲ ಚುನಾವಣಾ ಗಿಮಿಕ್​ ಎಂದರು.

ಕುಮಾರಸ್ವಾಮಿ ಆರೋಗ್ಯ ಬೇಗ ಸುಧಾರಿಸಲಿ: ಡಿ.ಕೆ ಸುರೇಶ್ ನನ್ನ ಬದುಕಿಗೆ ವಿಷ ಹಾಕಿದ್ದಾರೆ ಎಂಬ ಕುಮಾರಸ್ವಾಮಿ ಅವರ ಹೇಳಿಕೆ ವಿಚಾರವಾಗಿ ಮಾತನಾಡಿ, ನಾನು ಯಾರ ಬದುಕಿಗೂ ವಿಷ ಹಾಕುವವನಲ್ಲ. ಎಲ್ಲರಿಗೂ ಒಳ್ಳೆಯದನ್ನೇ ಬಯಸುತ್ತೇನೆ. ಅವರು ಆರೋಗ್ಯ ತಪಾಸಣೆಗಾಗಿ ತೆರಳುತ್ತಿದ್ದಾರೆ. ಅವರು ಆದಷ್ಟು ಬೇಗ ಗುಣಮುಖರಾಗಿ ಬರಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ತಿಳಿಸಿದರು.

ಬಲವಂತವಾಗಿ ಬಿಜೆಪಿ ಹಾಗೂ ಜೆಡಿಎಸ್ ನಾಯಕರಿಗೆ ಕಾಂಗ್ರೆಸ್ ಶಾಲು ಹಾಕುತ್ತಿದ್ದಾರೆ ಎಂಬ ಸಿ. ಪಿ ಯೋಗೇಶ್ವರ್ ಅವರ ಹೇಳಿಕೆಗೆ ಪ್ರತಿಯಿಸಿ, ನನಗೆ ಬಲವಂತ ಮಾಡುವ ಅಭ್ಯಾಸವಿಲ್ಲ. ಅವರು ತಮ್ಮ ನಾಯಕರನ್ನು ಮೆಚ್ಚಿಸಿಕೊಳ್ಳಲು ಮಾಧ್ಯಮಗಳ ಮುಂದೆ ಬಂದು ಮಾತನಾಡುತ್ತಾರೆ. ಕೆಲಸಗಳ ಮೂಲಕ ನಾನು ಜನರನ್ನು ತಲುಪಿದ್ದೇನೆ ಎಂದು ತಿಳಿಸಿದರು.

ಇದನ್ನೂ ಓದಿ: ಬೆಂಗಳೂರು ಗ್ರಾಮಾಂತರಕ್ಕೆ ಅರೆಸೇನಾ ಪಡೆ ನಿಯೋಜಿಸುವಂತೆ ಚುನಾವಣೆ ಆಯೋಗಕ್ಕೆ ಹೆಚ್​ಡಿಕೆ ಆಗ್ರಹ

Last Updated : Mar 19, 2024, 10:54 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.