ಹಾವೇರಿ: ಬಿ.ಎಸ್.ಯಡಿಯೂರಪ್ಪನವರಿಗೆ ಜಾಮೀನು ಸಿಕ್ಕಿರುವುದು ನ್ಯಾಯಸಮ್ಮತವಾಗಿದೆ ಎಂದು ಸಂಸದ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ. ಹಾವೇರಿಯಲ್ಲಿಂದು ಮಾತನಾಡಿದ ಅವರು, ಯಡಿಯೂರಪ್ಪ ಆ ತರಹದ ವಿಚಾರದಲ್ಲಿ ಭಾಗಿಯಾಗಿಲ್ಲ. ಇದೆಲ್ಲವೂ ಷಡ್ಯಂತ್ರ ಎಂದರು.
ಯಡಿಯೂರಪ್ಪ ಅಧಿಕಾರಿಗಳು ಕರೆದಾಗ ಹೋಗಿ ಕೇಳಿದ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ಕೊಟ್ಟಿದ್ದಾರೆ. ಅವರಿಗೆ ಸನ್ನಡತೆಯಿದೆ. ಕೋರ್ಟ್ ಇದನ್ನು ಒಪ್ಪಿಕೊಂಡು ಬೇಲ್ ಕೊಟ್ಟಿದ್ದು ನ್ಯಾಯಸಮ್ಮತವಾಗಿದೆ. ಇದನ್ನು ನಾವು ಸ್ವಾಗತಿಸುತ್ತೇವೆ. ಮುಂದೆಯೂ ಸಹ ಕಾನೂನು ಹೋರಾಟದಲ್ಲಿ ಯಡಿಯೂರಪ್ಪ ವಿಜಯಶಾಲಿಯಾಗಲಿದ್ದಾರೆ ಎಂದರು.
ಇದಕ್ಕೂ ಮುನ್ನ ಮಾತನಾಡಿದ ಅವರು, ಸಂಪೂರ್ಣ ಕೇಸ್ ಪಾಲೋ ಮಾಡಿದರೆ, ಹಿನ್ನೆಲೆ ನೋಡಿದರೆ ಷಡ್ಯಂತ್ರ ಇದೆ ಎಂದು ಗೊತ್ತಾಗುತ್ತದೆ. ಮೂರು ತಿಂಗಳು ಬಿಟ್ಟು, ಈಗ ಒಂದೇ ದಿನಕ್ಕೆ ಸಮಯ ಕೊಟ್ಟು, ವಾರೆಂಟ್ ನೀಡಿದ್ದು ನೋಡಿದರೆ ಬಹಳಷ್ಟು ದೋಷಗಳು ಕಂಡುಬರುತ್ತವೆ ಎಂದು ಬೊಮ್ಮಾಯಿ ತಿಳಿಸಿದರು.
ಇದನ್ನೂ ಓದಿ: ಪೋಕ್ಸೋ ಕೇಸ್: ಬಿ. ಎಸ್ ಯಡಿಯೂರಪ್ಪ ಬಂಧಿಸದಂತೆ ಹೈಕೋರ್ಟ್ ನಿರ್ದೇಶನ - Yadiyurappa POCSO Case