ETV Bharat / state

ಅಸಹಜ ಲೈಂಗಿಕ ಕಿರುಕುಳ ಪ್ರಕರಣ: ಸೂರಜ್ ರೇವಣ್ಣ ಜು.1ರ ವರೆಗೆ ಸಿಐಡಿ ವಶಕ್ಕೆ - MLC Suraj Revanna Case

ಲೈಂಗಿಕ ಕಿರುಕುಳ ಆರೋಪ ಪ್ರಕರಣದಲ್ಲಿ ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ ಅವರನ್ನು ಜುಲೈ1 ರವರೆಗೂ ಸಿಐಡಿ ಕಸ್ಟಡಿಗೆ ನೀಡಿ ಕೋರ್ಟ್ ಆದೇಶಿಸಿದೆ.

ಸೂರಜ್ ರೇವಣ್ಣ
ಸೂರಜ್ ರೇವಣ್ಣ (ETV Bharat)
author img

By ETV Bharat Karnataka Team

Published : Jun 24, 2024, 5:08 PM IST

ಬೆಂಗಳೂರು: ಅಸಹಜ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣರನ್ನು ಜುಲೈ 1 ರವರೆಗೂ ಸಿಐಡಿ ವಶಕ್ಕೆ ನೀಡಿ ನ್ಯಾಯಾಲಯ ಆದೇಶಿಸಿದೆ. ಪ್ರಕರಣದ ವಿಚಾರಣೆ ನಡೆಸಿದ ನಗರದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಈ ಆದೇಶ ಹೊರಡಿಸಿದೆ.

ವಿಚಾರಣೆ ವೇಳೆ ಸರ್ಕಾರದ ಪರ ವಕೀಲರು, ಪ್ರಕರಣದಲ್ಲಿ ದೂರುದಾರಿಗೆ ಆರೋಪಿಯಿಂದ ಭಯವಿದೆ. ಅದಕ್ಕಾಗಿ ತಡವಾಗಿ ದೂರು ನೀಡಲಾಗಿದೆ. ದೂರಿನ ಬಗ್ಗೆ ಸುದೀರ್ಘ ವಿಚಾರಣೆ ನಡೆಯಬೇಕಾಗಿದೆ. ಹಾಸನದಲ್ಲಿ ಘಟನೆ ನಡೆದಿದೆ. ಅಲ್ಲಿಗೆ ಹೋಗಿ ಮಹಜರು ಮಾಡಬೇಕು. ವೈದ್ಯಕೀಯ ಪರೀಕ್ಷೆಗೆ ಒಳಪಡಿಸಬೇಕು. ಸಾಕ್ಷ್ಯಗಳ ಸಂಗ್ರಹ ಮಾಡಬೇಕು. ಮೊಬೈಲ್ ಫೋನ್ ವಶಕ್ಕೆ ಪಡೆಯಬೇಕು. ವಾಟ್ಸ್‌ಪ್ ಸಂದೇಶಗಳನ್ನು ಪಡೆದುಕೊಳ್ಳಬೇಕು. ಅಲ್ಲದೆ, ದೂರುದಾರರಿಗೆ ಬೆದರಿಕೆ ಹಾಕಿರೋದಕ್ಕೆ ಸಾಕ್ಷಿ ಕಲೆ ಹಾಕಬೇಕಾಗಿದೆ. ಕೃತ್ಯ ನಡೆದ ದಿನ ಧರಿಸಿದ್ದ ಬಟ್ಟೆ, ಬಳಕೆ ಮಾಡಿದ್ದ ವಾಹನ ವಶಕ್ಕೆ ಪಡೆದುಕೊಳ್ಳಬೇಕು. ಎರಡನೇ ಆರೋಪಿಯ ಬಂಧನ ಮಾಡಬೇಕು. ಹೀಗಾಗಿ 14 ದಿನ ಕಸ್ಟಡಿ ಬೇಕು ಎಂದು ವಾದ ಮಂಡಿಸಿದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸೂರಜ್ ರೇವಣ್ಣರ ಪರ ವಕೀಲರು, ಪ್ರಕರಣದಲ್ಲಿ ದೂರುದಾರ ಘಟನೆ ಆದಾಗ ದೂರು ನೀಡಿಲ್ಲ. ಬದಲಾಗಿ ಆತ ತಡವಾಗಿ ದೂರು ನೀಡಲಾಗಿದೆ. ಅಲ್ಲದೇ ಆತ ಬ್ಲಾಕ್ ಮೇಲ್ ಯತ್ನ ಮಾಡಿರುವುದು ಪ್ರಕರಣದಲ್ಲಿ ಸ್ಪಷ್ಟವಾಗಿದೆ. 2 ರಿಂದ 3 ದಿನ ಸಿಐಡಿ ವಶಕ್ಕೆ ನೀಡಿದರೆ ಸಾಕು. ಆದರೆ, ವಿನಾಕಾರಣ ಕಿರುಕುಳ ನೀಡುವ ಉದ್ದೇಶದಿಂದ 14 ದಿನಗಳ ಕಾಲ ಸಿಐಡಿ ವಶಕ್ಕೆ ಕೇಳಲಾಗುತ್ತಿದೆ ಎಂದು ವಿವರಿಸಿದರು.

ಅಲ್ಲದೆ, ಈಗಾಗಲೇ ಎಲ್ಲಾ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ. ಮಹಜರು ಮಾತ್ರ ಬಾಕಿ ಇದೆ. ಹೀಗಾಗಿ ಒಂದು ದಿನ ಮಾತ್ರ ಸಾಕು ಎಂದು ಪೀಠಕ್ಕೆ ಮನವಿ ಮಾಡಿದರು.
ಈ ವೇಳೆ ಕೃತ್ಯದಲ್ಲಿ ಪೆನ್ ಡ್ರೈವ್ ಸೀಜ್ ಏನಿದು? ಎಂದು ನ್ಯಾಯಮೂರ್ತಿಗಳು ಪ್ರಶ್ನಿಸಿದರು.‌ ಇದಕ್ಕೆ ಸರ್ಕಾರಿ ವಕೀಲರು, ಅದು ದೂರುದಾರ ಕೊಟ್ಟಿರುವ ಪೆನ್​ಡ್ರೈವ್ ಎಂದು ವಿವರಿಸಿದರು. ಅದನ್ನು ಏಕೆ ಮಹಜರು ಮಾಡಿಲ್ಲ ಎಂದು ನ್ಯಾಯಾಧೀಶರು ಪ್ರಶ್ನಿಸಿದರು. ಅದಕ್ಕೆ, ವಕೀಲರು, ಸ್ಥಳೀಯ ಪೊಲೀಸ್ ತಂದು ಕೊಟ್ಟಿದ್ದು ಎಂದು ತಿಳಿಸಿದರು.

ಅಂತಿಮವಾಗಿ 10 ದಿನ ಆದ್ರೂ ಕೊಡಿ ಎಂದು ಪಬ್ಲಿಕ್ ಪ್ರಾಸಿಕ್ಯೂಟರ್ ಮನವಿ ಮಾಡಿದರು. ವಾದ ಆಲಿಸಿದ ನ್ಯಾಯಾಧೀಶರು ಆರು ದಿನಗಳ ಕಾಲ‌‌ ಅಂದರೆ ಜುಲೈ 1 ರವರೆಗೂ ಪೊಲೀಸ್ ವಶಕ್ಕೆ ನೀಡಿ ಆದೇಶಿಸಿದರು.

ಇದನ್ನೂ ಓದಿ: ಸೂರಜ್ ರೇವಣ್ಣ ವಿರುದ್ಧ ಕ್ರಮದ ಬಗ್ಗೆ ಚರ್ಚೆ ಮಾಡುತ್ತೇವೆ : ಜಿ ಟಿ ದೇವೇಗೌಡ - GTD REACTION ON SURAJ REVANNA CASE

ETV Bharat Logo

Copyright © 2024 Ushodaya Enterprises Pvt. Ltd., All Rights Reserved.