ETV Bharat / state

ಸಚಿವ ಬೈರತಿ ಸುರೇಶ್‌ ತಲೆದಂಡ ಆಗಲೇಬೇಕು : ಶಾಸಕ ಶ್ರೀವತ್ಸ - MLA Srivatsa

author img

By ETV Bharat Karnataka Team

Published : Sep 3, 2024, 6:50 PM IST

ಬಿಜೆಪಿ ಶಾಸಕ ಶ್ರೀವತ್ಸ ಅವರು ಮುಡಾ ಹಗರಣದ ಕುರಿತು ಮಾತನಾಡಿದ್ದಾರೆ. ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ಆಯುಕ್ತ ದಿನೇಶ್​ ಕುಮಾರ್​ ಅವರನ್ನ ಅಮಾನತು ಮಾಡಲಾಗಿದೆ. ಆದರೆ, ಮುಡಾದ ಅವ್ಯವಹಾರಗಳಿಗೆ ಸಚಿವ ಬೈರತಿ ಸುರೇಶ್​ ಕಾರಣವಾದ್ದರಿಂದ ಅವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

mla-srivatsa
ಶಾಸಕ ಶ್ರೀವತ್ಸ (ETV Bharat)
ಶಾಸಕ ಶ್ರೀವತ್ಸ (ETV Bharat)

ಮೈಸೂರು : ಮುಡಾದಲ್ಲಿ ನಡೆದಿರುವ ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ಆಯುಕ್ತ ದಿನೇಶ್‌ ಕುಮಾರ್​ ಅವರ​ನ್ನ ಅಮಾನತು ಮಾಡಲಾಗಿದೆ. ಆದರೆ ಮುಡಾದ ಅವ್ಯವಹಾರಗಳಿಗೆ ಸಚಿವ ಬೈರತಿ ಸುರೇಶ್ ಕಾರಣವಾಗಿರುವುದರಿಂದ ನೈತಿಕ ಹೊಣೆ ಹೊತ್ತು ಸಚಿವರು ರಾಜೀನಾಮೆ ನೀಡಬೇಕು. ಸಚಿವರ ತಲೆದಂಡ ಆಗಿ ಸಚಿವರನ್ನೂ ತನಿಖೆಗೆ ಒಳಪಡಿಸಬೇಕು ಎಂದು ಬಿಜೆಪಿ ಶಾಸಕ ಶ್ರೀವತ್ಸ ಆಗ್ರಹಿಸಿದ್ದಾರೆ.

ಇಂದು ತಮ್ಮ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಮುಡಾ ಹಗರಣದಲ್ಲಿ ಮಾಜಿ ಆಯುಕ್ತ ದಿನೇಶ್‌ ಕುಮಾರ್‌ ಭಾರಿ ಭ್ರಷ್ಟಾಚಾರ ಮಾಡಿದ್ದಾರೆ ಎಂದು ನಗರಾಭಿವೃದ್ಥಿ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದೆ. ಈಗ ದಿನೇಶ್‌ ಕುಮಾರ್‌ ಅವರನ್ನು ಅಮಾನತು ಮಾಡಿದ್ದಾರೆ. ಅವರನ್ನ ಅಮಾನತು ಮಾಡಿದರೆ ಸಾಕಾಗುವುದಿಲ್ಲ. ಅವರ ವಿರುದ್ದ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಿ, ಬಂಧಿಸಿ ತನಿಖೆಗೆ ಒಳಪಡಿಸಬೇಕು. ಇವರ ಜತೆಗೆ ದಿನೇಶ್‌ ಕುಮಾರ್​ಗಿಂತ ಹಿಂದಿನ ಆಯುಕ್ತರಾಗಿದ್ದ ನಟೇಶ್‌ ಅವರನ್ನು ಅಮಾನತು ಮಾಡಿ, ಅವರ ಮೇಲೆ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಿ ಬಂಧಿಸಿ ತನಿಖೆಗೆ ಒಳಪಡಿಸಿದರೆ ಮುಡಾದ ಅಕ್ರಮಗಳು ಒಂದೊಂದಾಗಿ ಹೊರ ಬರುತ್ತವೆ ಎಂದು ಶಾಸಕರು ಆಗ್ರಹಿಸಿದರು.

ಆರ್​​ಟಿಐ ಕಾರ್ಯಕರ್ತರಿಗೆ ರಕ್ಷಣೆ ನೀಡಿ : ಮೈಸೂರಿನ ಆರ್​ಟಿಐ ಕಾರ್ಯಕರ್ತ ಗಂಗರಾಜು ಮೇಲೆ ಹಲ್ಲೆಗೆ ಯತ್ನಿಸಿ ಕೊಲೆ ಪ್ರಕರಣದ ಘಟನೆಯನ್ನ ಖಂಡಿಸುತ್ತೇನೆ. ಇದರ ಜತೆಗೆ ಸ್ನೇಹಮಯಿ ಕೃಷ್ಣ, ಟಿ. ಜೆ ಅಬ್ರಹಾಂ ಹಾಗೂ ಗಂಗರಾಜ ಅವರಂತಹ ಆರ್​ಟಿಐ ಕಾರ್ಯಕರ್ತರು ಸಮಾಜದಲ್ಲಿ ಆಗುತ್ತಿರುವ ಅನ್ಯಾಯ, ಅಕ್ರಮಗಳನ್ನ ಬಯಲಿಗೆ ಎಳೆಯುತ್ತಿದ್ದಾರೆ. ಇಂತಹವರಿಗೆ ಸೂಕ್ತ ರಕ್ಷಣೆ ನೀಡಬೇಕೆಂದು ನಗರ ಪೊಲೀಸ್​ ಆಯುಕ್ತರಿಗೆ ಮನವಿ ಮಾಡುತ್ತೇನೆ ಎಂದು ಇದೇ ಸಂದರ್ಭದಲ್ಲಿ ಶಾಸಕ ಶ್ರೀವತ್ಸ ತಿಳಿಸಿದರು.

ಮುಡಾದಲ್ಲಿ ನಡೆದಿರುವ ಎಲ್ಲ ಹಗರಣಗಳನ್ನ ಸಂಪೂರ್ಣ ತನಿಖೆಗೆ ಒಳಪಡಿಸಬೇಕು. ಈ ಬಗ್ಗೆ ನಾನು ಸಹ ಹೋರಾಟ ಮಾಡುತ್ತೇನೆ ಎಂದು ಇದೇ ಸಂದರ್ಭದಲ್ಲಿ ಶಾಸಕ ಶ್ರೀವತ್ಸ ಹೇಳಿಕೆ ನೀಡಿದರು.

ಇದನ್ನೂ ಓದಿ : ಮುಡಾ ಹಿಂದಿನ ಆಯುಕ್ತ ಜಿ.ಟಿ.ದಿನೇಶ್ ಕುಮಾರ್ ಅಮಾನತು - MUDA Former Commissioner Suspended

ETV Bharat Logo

Copyright © 2024 Ushodaya Enterprises Pvt. Ltd., All Rights Reserved.