ETV Bharat / state

ಆರೋಪ ಸಾಬೀತು ಮಾಡದಿದ್ದರೆ ನಗರಾಭಿವೃದ್ಧಿ ಸಚಿವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ: ಜಿ.ಟಿ. ದೇವೇಗೌಡ - G T Devegowda slams Byrathi Suresh

author img

By ETV Bharat Karnataka Team

Published : Jul 27, 2024, 3:43 PM IST

Updated : Jul 27, 2024, 4:32 PM IST

ನನ್ನ ವಿರುದ್ಧ ಮಾಡಿರುವ ಆರೋಪದ ಸಂಬಂಧ ಒಂದು ವಾರದೊಳಗೆ ನಗರಾಭಿವೃದ್ಧಿ ಸಚಿವರು ಉತ್ತರ ಕೊಡಬೇಕು‌. ಇಲ್ಲದಿದ್ದರೇ ನಾನೇ ಅವರಿಗೆ ನೋಟಿಸ್ ಜಾರಿ ಮಾಡುತ್ತೇನೆ. ನನ್ನ ವಿರುದ್ಧ ಮಾಡಿರುವ ಆರೋಪ ಸಾಬೀತು ಮಾಡದಿದ್ದರೆ ಸಚಿವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ ಎಂದು ಶಾಸಕ ಜಿ.ಟಿ. ದೇವೇಗೌಡ ತಿಳಿಸಿದ್ದಾರೆ.

ಜಿ.ಟಿ. ದೇವೇಗೌಡ
ಜಿ.ಟಿ. ದೇವೇಗೌಡ (ETV Bharat)
ಜಿ.ಟಿ. ದೇವೇಗೌಡ (ETV Bharat)

ಮೈಸೂರು: ನನ್ನ ವಿರುದ್ಧ ನಗರಾಭಿವೃದ್ಧಿ ಸಚಿವರು ಮಾಡಿರುವ ಆರೋಪವನ್ನು ಏಳು ದಿನಗಳಲ್ಲಿ ದಾಖಲೆಗಳ ಮೂಲಕ ಸಾಬೀತು ಪಡಿಸಬೇಕು. ಇಲ್ಲದಿದ್ದರೇ ಸಚಿವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ ಎಂದು ಶಾಸಕ ಜಿ.ಟಿ. ದೇವೇಗೌಡ ಎಚ್ಚರಿಕೆ ನೀಡಿದ್ದಾರೆ.

ಮೈಸೂರಿನ ಜಲದರ್ಶಿನಿ ಅತಿಥಿ ಗೃಹದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಿನ್ನೆ ಮುಖ್ಯಮಂತ್ರಿಗಳ ಜತೆಗಿನ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್‌, ನನ್ನ ವಿರುದ್ಧ ಆರೋಪ ಮಾಡುವ ಮುನ್ನ ಎಲ್ಲವನ್ನೂ ಸಮರ್ಪಕವಾಗಿ ಪರಿಶೀಲನೆ ಮಾಡಬೇಕಿತ್ತು. ತಪ್ಪಿತಸ್ಥರಿಗೆ ಶಿಕ್ಷೆ ನೀಡುವ ಕೆಲಸ ಮಾಡಬೇಕಿತ್ತು. ಬಡಾವಣೆಗಳನ್ನು ಅಭಿವೃದ್ಧಿ ಮಾಡುವಲ್ಲಿ ಮುಡಾ ವಿಫಲವಾಗಿದೆ. ಸ್ಲಂಗಳನ್ನು ಸೃಷ್ಟಿಸಲು ಮುಡಾ ಹೊರಟಿದೆ. ಮುಡಾ ಬಡಾವಣೆಗಳ ಜನರಿಗೆ ಮೂಲ ಸೌಲಭ್ಯಗಳನ್ನು ಕಲ್ಪಿಸಿಕೊಡುವಲ್ಲಿ ವಿಫಲವಾಗಿದೆ. ಸಚಿವರು ಸತ್ಯಾಂಶ ಬಯಲು ಮಾಡಬೇಕು. ಏಳು ದಿನಗಳಲ್ಲಿ ದಾಖಲೆ ಸಮೇತ ಸಾಬೀತುಪಡಿಸಬೇಕು ಎಂದರು.

ಒಂದು ವಾರದೊಳಗೆ ನಗರಾಭಿವೃದ್ಧಿ ಸಚಿವರು ಉತ್ತರ ಕೊಡಬೇಕು‌. ಇಲ್ಲದಿದ್ದರೇ ನಾನೇ ಅವರಿಗೆ ನೋಟಿಸ್ ಜಾರಿ ಮಾಡುತ್ತೇನೆ. ನನ್ನ ವಿರುದ್ಧ ಮಾಡಿರುವ ಆರೋಪ ಸಾಬೀತು ಮಾಡದಿದ್ದರೆ ಸಚಿವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ. ನನ್ನ 50 - 60 ವರ್ಷಗಳ ರಾಜಕೀಯ ಜೀವನದಲ್ಲಿ ಯಾವುದೇ ಕಟ್ಟಡ ಕಟ್ಟಲು ಆಗಿಲ್ಲ. ನನ್ನ ತಂದೆಯಿಂದ ಬಂದಿರುವ ಜಮೀನಿನಲ್ಲಿ ವ್ಯವಸಾಯ ಮಾಡಿಕೊಂಡು, ಜತೆಗೆ ರಾಜಕಾರಣ ಮಾಡಿಕೊಂಡು ಬಂದಿದ್ದೇನೆ. ನಾನು ಖರೀದಿ ಮಾಡಿರುವ ಜಮೀನು ಕಾನೂನು ಬದ್ಧವಾಗಿದೆ. ನನ್ನಂತ ರಾಜಕಾರಣಿ ಮೇಲೆ ಈ ರೀತಿ ಆರೋಪ ಮಾಡುವುದು ಸರಿಯಿಲ್ಲ ಎಂದು ವಾಗ್ದಾಳಿ ನಡೆಸಿದರು.

ಲಾಟರಿಯಿಂದ ಒಂದು ಮುಡಾ ನಿವೇಶನ ಬಂದಿದೆ: ಮುಡಾ ವ್ಯಾಪ್ತಿ ಶೇ. 90 ರಷ್ಟು ಭಾಗ ಚಾಮುಂಡೇಶ್ವರಿ ಕ್ಷೇತ್ರದ ವ್ಯಾಪ್ತಿಯಲ್ಲಿ ಇದೆ. ಆದರೂ ಆ ಭಾಗದ ಶಾಸಕನಾದ ನಾನು ಇಲ್ಲಿಯವರೆಗೂ ಒಂದೇ ಒಂದು ನಿವೇಶನ ಪಡೆದಿಲ್ಲ. ಗೋವಿಂದರಾಜು ಮುಡಾ ಅಧ್ಯಕ್ಷರಾಗಿದ್ದಾಗ 50X80 ಅಳತೆಯಾ ಒಂದು ನಿವೇಶನ ಲಾಟರಿಯಲ್ಲಿ ಬಂದಿರುವುದನ್ನ ಹೊರತು ಪಡಿಸಿದರೇ, ಯಾವೊಂದುನಿವೇಶನವನ್ನು ಪಡೆದಿಲ್ಲ. ನಗರಾಭಿವೃದ್ಧಿ ಸಚಿವರು ಮುಡಾ ವಿಚಾರದಲ್ಲಿ ಸರಿಯಾಗಿ ನಡೆದುಕೊಂಡಿದ್ದರೇ ಎಲ್ಲರ ಬಂಡವಾಳ ಬಯಲಾಗುತ್ತಿತ್ತು. ಆದರೆ, ಅವರು ಸರಿಯಾಗಿ ನಡೆದುಕೊಂಡಿಲ್ಲ ಎಂದು ಕಿಡಿಕಾರಿದರು.

ನಾನು ಶಾಸಕನಾದ ಸಂದರ್ಭದಲ್ಲಿ ನಮ್ಮ ಕ್ಷೇತ್ರದ ಇಬ್ಬರು ವ್ಯಕ್ತಿಗಳಿಗೆ ಎರಡು ಪತ್ರ ನೀಡಿದ್ದೇನೆ. ಕಾನೂನಾತ್ಮಕವಾಗಿ ಇದ್ದರೇ ಪರಿಹಾರ ಕೊಡಿ ಎಂದು. ಆದರೇ ನಗರಾಭಿವೃದ್ಧಿ ಸಚಿವರು ಯಾವುದನ್ನು ನೋಡದೆ ಈ ರೀತಿ ಹೇಳಿಕೆ ಕೊಟ್ಟಿದ್ದು, ಸರಿಯಲ್ಲ ಕಲೆಕ್ಷನ್ ಮಾಡೋಕೆ ಇಟ್ಟುಕೊಂಡವರ ಮಾತು ಕೇಳಿ ಇಂತಹ ಹೇಳಿಕೆಯನ್ನ ಮಂತ್ರಿಗಳು ನೀಡಿದ್ದಾರೆ. ನಿಮ್ಮ ಎಲ್ಲ ತಪ್ಪುಗಳಿಂದ ಈಗ ಮುಡಾ ಸಿಎಂ ತಲೆಗೆ ಬಂದಿದೆ. ಪ್ರಸ್ತುತ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಸಿಬ್ಬಂದಿಗಳಿಗೆ ಸಂಬಳ ಕೊಡಲು ಕಾಸಿಲ್ಲ. ಬಡಾವಣೆಗಳಲ್ಲಿ ರಸ್ತೆ, ನೀರು, ಯುಜಿಡಿಗಳನ್ನು ಮಾಡಿ ಮೂಲಭೂತ ಸೌಲಭ್ಯಗಳನ್ನು ಸೃಷ್ಟಿ ಮಾಡಲು ಮುಡಾ ವಿಫಲವಾಗಿದೆ ಎಂದು ಟೀಕಿಸಿದರು.

ಇದನ್ನೂ ಓದಿ: ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಹಣದ ಅವ್ಯವಹಾರ ನಡೆದಿರುವುದು ಸತ್ಯ: ಸಚಿವ ರಾಜಣ್ಣ - Valmiki Corporation Case

Last Updated : Jul 27, 2024, 4:32 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.