ETV Bharat / state

ಶಾಂತವಾದರಾ ಯತ್ನಾಳ್?: ಶಿಸ್ತು ಸಮಿತಿ ಮುಂದೆ ಹಾಜರಾದ ಬೆನ್ನಲ್ಲೇ ಬಿಎಸ್​​ವೈ ಹೇಳಿಕೆಗೆ ಸ್ವಾಗತ! - BASANAGOWDA PATIL YATNAL

ಶಿಸ್ತು ಸಮಿತಿ ಮುಂದೆ ಎಲ್ಲಾ ವಿಚಾರಗಳನ್ನು ಸವಿಸ್ತಾರವಾಗಿ ಹೇಳಿದ್ದೇನೆ. ಪಕ್ಷದ ಹಿತದೃಷ್ಟಿಯಿಂದ ತೀರ್ಮಾನ ತೆಗೆದುಕೊಳ್ತಾರೆ ಎಂಬ ವಿಶ್ವಾಸವಿದೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪ್ರತಿಕ್ರಿಯಿಸಿದರು.

yatnal
ಬಸನಗೌಡ ಪಾಟೀಲ್ ಯತ್ನಾಳ್ (ETV Bharat)
author img

By ETV Bharat Karnataka Team

Published : Dec 5, 2024, 6:44 AM IST

ಬೆಂಗಳೂರು/ನವದೆಹಲಿ: ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ದೆಹಲಿಯಲ್ಲಿ ಕೇಂದ್ರ ಶಿಸ್ತು ಸಮಿತಿಯ ಮುಂದೆ ಹಾಜರಾದ ಬಳಿಕ ತಮ್ಮ ನಿಲುವಿನಲ್ಲಿ ತಣ್ಣಗಾದಂತೆ ಕಂಡು ಬಂದಿದೆ. ಶಿಸ್ತು ಸಮಿತಿ ಮುಂದೆ ಹಾಜರಾದ ಬಳಿಕ ಮಾತನಾಡಿದ ಯತ್ನಾಳ್, ಮಾಜಿ ಸಿಎಂ ಯಡಿಯೂರಪ್ಪ ಹೇಳಿಕೆಯನ್ನು ಸ್ವಾಗತಿಸಿದ್ದಾರೆ.

ದೆಹಲಿಯಲ್ಲಿ ಶಿಸ್ತು ಸಮಿತಿ‌ಯ ಓಂ ಪಾಠಕ್ ಅವರನ್ನು ಭೇಟಿ ಮಾಡಿದ ನಂತರ ಮಾತನಾಡಿದ ಅವರು, ''ಶಿವಮೊಗ್ಗದಲ್ಲಿ 'ಯತ್ನಾಳ್​ ನಮ್ಮವರೇ' ಎಂಬ ಬಿಎಸ್​ವೈ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸುತ್ತಾ, ಯಡಿಯೂರಪ್ಪ ಹೇಳಿಕೆ ಸ್ವಾಗತಿಸುತ್ತೇನೆ. 1 ಗಂಟೆ 15 ನಿಮಿಷಗಳ ಕಾಲ ಶಿಸ್ತು ಸಮಿತಿ ಮುಂದೆ ಸವಿಸ್ತಾರವಾಗಿ ಎಲ್ಲಾ ವಿಚಾರಗಳನ್ನು ಹೇಳಿದ್ದೇನೆ. ಪಕ್ಷದ ಹಿತದೃಷ್ಟಿಯಿಂದ ತೀರ್ಮಾನಗಳನ್ನು ತೆಗೆದುಕೊಳ್ತಾರೆ. ವಕ್ಫ್​ ಬೋರ್ಡ್​ ವಿರುದ್ಧದ ಹೋರಾಟಕ್ಕೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಪಕ್ಷದ ಸಂಘಟನೆಗೆ ಕೆಲಸ ಮಾಡಿ ಎಂದು ಹೇಳಿದ್ದಾರೆ. ನಿಮ್ಮ ಭಾವನೆಗಳನ್ನು ನಾಯಕರ ಗಮನಕ್ಕೆ ತರುವುದಾಗಿ ಭರವಸೆ ನೀಡಿದ್ದಾರೆ. ನಿಮಗೆ ಭವಿಷ್ಯ ಇದೆ. ಶಾಂತ ಸ್ವಭಾವದಿಂದ ಇರಲು ಹೇಳಿದ್ದಾರೆ'' ಎಂದರು.

ಬಸನಗೌಡ ಪಾಟೀಲ್ ಯತ್ನಾಳ್ (ETV Bharat)

ನಾವು ಯಾವಾಗಲೂ ಹಿಂದುತ್ವದ ಪರ: ''ಹೈಕಮಾಂಡ್ ನಾಯಕರು ಮಧ್ಯಪ್ರದೇಶ ಮಾಡಿದ್ದಾರೆ. ಕಾರ್ಯಕರ್ತರ ಭಾವನೆ ಅರಿತು ನಿರ್ಧಾರ ತೆಗೆದುಕೊಳ್ಳಬೇಕು. ನಾವು ಪಕ್ಷ ಬಿಡುವ ಮೂರ್ಖತನದ ಕೆಲಸ ಮಾಡಲ್ಲ. ನಾವು ಅಷ್ಟು ದಡ್ಡರೂ ಅಲ್ಲ. ನಾವು ರಾಷ್ಟ್ರೀಯ ಸಿದ್ಧಾಂತ ಹೊಂದಿದ್ದವರು, ಹಿಂದುತ್ವದ ಪರ. ನಮಗೆ ಬಿಜೆಪಿ ಆಶಾ ಕಿರಣ. ನಾವು ಬಿಜೆಪಿ ಬಿಡುವ ಪ್ರಶ್ನೆಯೇ ಇಲ್ಲ. ಹೊಸ ಪಕ್ಷ ಕಟ್ಟಿ ಸೋತು ಸುಣ್ಣವಾದವರ ಬಗ್ಗೆ ಯೋಚಿಸಬೇಕಿದೆ. ನಮ್ಮ ವಿಶ್ವಾಸ ಪಕ್ಷ, ಮೋದಿ ಮೇಲಿದೆ. ಅಮಿತ್ ಶಾ ಮತ್ತು ನಡ್ಡಾರನ್ನು ಭೇಟಿಯಾಗಿಲ್ಲ'' ಎಂದು ತಿಳಿಸಿದರು.

ಶಿಸ್ತು ಸಮಿತಿಯು ಮಾಧ್ಯಮಗಳ ಮುಂದೆ ಬಹಿರಂಗ ಹೇಳಿಕೆ ನೀಡಬೇಡಿ. ಏನೇ ಇದ್ದರೂ ಪಕ್ಷದ ವೇದಿಕೆಯಲ್ಲಿ ಮಾತನಾಡಿ ಎಂದು ಯತ್ನಾಳ್​​ಗೆ ಕಿವಿ ಮಾತು ಹೇಳಿದೆ. ಇದರೊಂದಿಗೆ ಶಿಸ್ತು ಸಮಿತಿ ಮುಂದೆ ಹಾಜರಾಗಿ ಬಂದ ಮೇಲೆ ಯತ್ನಾಳ್​ ಶಾಂತವಾದಂತೆ ಕಂಡುಬಂತು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹಾಗೂ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ವಿರುದ್ಧ ನಿರಂತರವಾಗಿ ವಾಗ್ದಾಳಿ ನಡೆಸುತ್ತಾ ಬಂದಿರುವ ಯತ್ನಾಳ್ ಸ್ವಲ್ಪ ಮೃದುವಾದರಾ ಎಂಬ ಪ್ರಶ್ನೆ ಮೂಡಿದೆ.

ದಾಖಲೆ ಕೊಡುತ್ತೇನೆ ಎಂದಿದ್ದ ಯತ್ನಾಳ್​: ಭೇಟಿಗೂ ಮುನ್ನ ಪ್ರತಿಕ್ರಿಯೆ ನೀಡಿದ್ದ ಯತ್ನಾಳ್​, ''ಆರು ಪುಟಗಳ ಉತ್ತರ ತಯಾರು ಮಾಡಿದ್ದೇನೆ. ಅದನ್ನು ನೀಡುತ್ತೇನೆ, ಜೊತೆಗೆ ವಿವರಣೆ ಕೊಡುತ್ತೇನೆ. ಪಕ್ಷದಲ್ಲಿ ತಟಸ್ಥ ನಿಲುವು ಹೊಂದಿರುವ ನಾಯಕರು ಇದ್ದಾರೆ. ಅವರಿಗೆ ಯಡಿಯೂರಪ್ಪ ಕುಟುಂಬದ ಮೇಲೆ ಆಕ್ರೋಶ ಇದೆ. ಅವರು ಬಹಿರಂಗವಾಗಿ ಮಾತನಾಡುತ್ತಿಲ್ಲ. ಭ್ರಷ್ಟಾಚಾರ ಕುಟುಂಬದ ಕಪಿಮುಷ್ಠಿಯಿಂದ ಹೊರ ಬರಬೇಕು ಎನ್ನುವ ಭಾವನೆ ಎಲ್ಲರಲ್ಲಿದೆ. ಯಾವ ಕಡೆಗೂ ವಾಲದ ರಾಷ್ಟ್ರೀಯ ನಾಯಕರನ್ನು ಕಳುಹಿಸಿ ಎಲ್ಲರ ಅಭಿಪ್ರಾಯ ಸಂಗ್ರಹ ಮಾಡಬೇಕು. ವಿಜಯೇಂದ್ರ ಅವರು ಟೀಂ ಮಾಡಿಕೊಂಡು ನಿಷ್ಠಾವಂತ ಕಾರ್ಯಕರ್ತರನ್ನು ಹೇಗೆ ತುಳಿಯುವ ಕೆಲಸ ಮಾಡಿದ್ದಾರೆ. ಹೊಂದಾಣಿಕೆ ರಾಜಕೀಯ, ಕುಟುಂಬ ರಾಜಕೀಯ, ಹಿಂದುತ್ವದಲ್ಲಿ ಹೇಗೆ ರಾಜೀ ಆಗಿದೆ. ಎಲ್ಲವನ್ನೂ ಪತ್ರದಲ್ಲಿ ಬರೆದಿದ್ದೇನೆ. ನಿಷ್ಠಾವಂತ ನಾಯಕರನ್ನು ಬೆಂಗಳೂರಿಗೆ ಕಳುಹಿಸಿದರೆ ಉಳಿದ ದಾಖಲೆ ಕೊಡುತ್ತೇನೆ ಎಂದು ಹೇಳುತ್ತೇನೆ ಎಂದು ಹೇಳಿದ್ದರು.

ಇದನ್ನೂ ಓದಿ: ಯತ್ನಾಳ್ ಹೊರಗಿನವರಲ್ಲ, ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗಬೇಕೆಂಬುದು ನನ್ನ ಅಭಿಪ್ರಾಯ: ಬಿಎಸ್​ವೈ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.