ETV Bharat / state

ಕಾಂಗ್ರೆಸ್​ನವರು ರಾಜ್ಯವನ್ನೇ ವಕ್ಫ್​ ಮಾಡಲು ಹೊರಟಿದ್ದಾರೆ : ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆರೋಪ

ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಕಾಂಗ್ರೆಸ್​ನವರು ರಾಜ್ಯವನ್ನೇ ವಕ್ಫ್​ ಮಾಡಲು ಹೊರಟಿದ್ದಾರೆ ಎಂದಿದ್ದಾರೆ.

Public awareness campaign against land grabbing
ಭೂ ಕಬಳಿಕೆ ವಿರೋಧಿ ಜನಜಾಗೃತಿ ಹೋರಾಟ (ETV Bharat)
author img

By ETV Bharat Karnataka Team

Published : 2 hours ago

Updated : 1 hours ago

ಬೀದರ್ : ವಕ್ಫ್ ಬಗ್ಗೆ ಸಚಿವ ಜಮೀರ್ ಅಹಮ್ಮದ್ ಖಾನ್ ಅವರು 32 ಸಾವಿರ ಎಕರೆ ಇದೆ ಅಂತಾರೆ. ಬೀದರ್, ಬಿಜಾಪುರದಲ್ಲೇ ಅಷ್ಟು ಆಸ್ತಿ ಇದೆ. ಹಾಗಾದರೆ ಉಳಿದ ಜಮೀನು ಎಲ್ಲಿ ಹೋಯ್ತು ? ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪ್ರಶ್ನಿಸಿದ್ದಾರೆ.

ವಕ್ಫ್ ಭೂಮಿ ವಿರುದ್ಧ ಐದು ಜಿಲ್ಲೆಗಳಲ್ಲಿ ಬಿಜೆಪಿ ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ರಮೇಶ್ ಜಾರಕಿಹೊಳಿ ನೇತೃತ್ವದಲ್ಲಿ ಆಯೋಜಿಸಿರುವ ಭೂ ಕಬಳಿಕೆ ವಿರೋಧಿ ಜನಜಾಗೃತಿ ಹೋರಾಟಕ್ಕೆ ಸೋಮವಾರ ಗಡಿ‌ ಜಿಲ್ಲೆ ಬೀದರ್​​ನಿಂದ ಚಾಲನೆ ನೀಡಲಾಗಿದೆ.

ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (ETV Bharat)

ಈ ಕುರಿತು ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿಯವರು 42 ನೇ ತಿದ್ದುಪಡಿ ಮಾಡಲು ಮುಂದಾಗಿದ್ದಾರೆ. ಜಾಯಿಂಟ್​ ಪಾರ್ಲಿಮೆಂಟರಿ ಬೋರ್ಡ್​ನಲ್ಲಿ 32 ಸಾವಿರ ಕೋಟಿ ಎಕರೆ ವಕ್ಫ್ ಎನ್ನುತ್ತಾರೆ. ಇವರು ರಾಜ್ಯವನ್ನೇ ವಕ್ಫ್​ ಮಾಡಲು ಹೊರಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಂಸತ್‌ನಲ್ಲಿ ವಕ್ಫ್ ತಿದ್ದುಪಡಿ ತರಲು ಮುಂದಾಗಿದ್ದಾರೆ: ಈ ಕುರಿತು ರಮೇಶ್ ಜಾರಕಿಹೊಳಿ ಮಾತನಾಡಿ, ಯತ್ನಾಳ್​ ವಿಜಯಪುರದಲ್ಲಿ ದೀರ್ಘ ಅಧ್ಯಯನದ ಮೂಲಕ ಹೋರಾಟ ಮಾಡಿ ರಾಜ್ಯದ ಜನರ ಕಣ್ಣು ತೆರೆಸಿದ್ದಾರೆ. ಬಿಜೆಪಿ ಹೋರಾಟಕ್ಕೆ, ಮಿತ್ರ ಪಕ್ಷ ಜೆಡಿಎಸ್ ಜೊತೆ ಸೇರಿದೆ. ಆದರೆ ಇದು ಪಕ್ಷಾತೀತ ಹೋರಾಟವಾಗಿದೆ. ಈ ವಕ್ಫ್ ಭಾರತದಿಂದ ತೊಲಗಬೇಕು. ಪ್ರಧಾನಿ ಮೋದಿ ಅವರು 42ನೇ ತಿದ್ದುಪಡಿ ತಂದು, ಸರಿಪಡಿಸಲು ಮುಂದಾಗಿದ್ದಾರೆ. ಇದೇ ಸಂಸತ್‌ನಲ್ಲಿ ವಕ್ಫ್ ತಿದ್ದುಪಡಿ ತರಲು ಮುಂದಾಗಿದ್ದಾರೆ. ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ ನೀವೆಲ್ಲಾ ಮನವಿ ಮಾಡಿ, ಬಿಲ್‌ಗೆ ವಿರೋಧ ಮಾಡದಂತೆ ಒತ್ತಾಯ ಮಾಡಬೇಕು ಎಂದರು.

ಮಾಜಿ ಸಚಿವ ಕುಮಾರ್ ಬಂಗಾರಪ್ಪ ಮಾತನಾಡಿ, ವಕ್ಫ್ ಇಲ್ಲದ ಸಮಯದಲ್ಲಿ ದೇವಸ್ಥಾನಕ್ಕೆ ಆಸ್ತಿ ನೀಡಿ, ದೇವಸ್ಥಾನ ನಡೆಸಲು ಜಾಗ ನೀಡಿದ್ರು. ಅನೇಕ ಧರ್ಮಗಳಿಗೆ ಜಾಗ ನೀಡಿ ದೇವಸ್ಥಾನಗಳನ್ನ ನಡೆಸಲು ಸೂಚಿಸಲಾಗಿತ್ತು. 1974ರ ಭೂ ಸುಧಾರಣಾ ಕಾಯ್ದೆಯಂತೆ, ಉಳುಮೆ ಮಾಡುವವರಿಗೇ ಆ ಜಾಗವನ್ನ ನೀಡಲಾಯಿತು. ಆದರೆ ತಲೆತಲಾಂತರದಿಂದ ಉಳುಮೆ ಮಾಡುತ್ತಾ ಬರ್ತಿರೋ ಜಾಗವನ್ನ ವಕ್ಫ್ ಮಾಡಿದ್ದಾರೆ. ಕಾಲ ಕ್ರಮೇಣ ಭೂಮಿಯ ಬೆಲೆ ಹೆಚ್ಚಳವಾಗ್ತಿದ್ದಂತೆ, ಅಧಿಕಾರಿಗಳು ಹಣ ಮಾಡೋದಕ್ಕೆ ಮುಂದಾಗಿದ್ದಾರೆ ಎಂದು ಆರೋಪಿಸಿದರು.

ಕೋಟ್ಯಂತರ ಹಣ ಕಿಕ್ ಬ್ಯಾಕ್ ಪಡೆಯುತ್ತಿದ್ದಾರೆ: ಗೃಹಸಚಿವ ಪರಮೇಶ್ವರ್ ಅವರು ಬಿಜೆಪಿ ಕಾಲದಲ್ಲಿ ನೋಟಿಸ್ ಕೊಟ್ಟಿದ್ದು ಅಂದ್ರು. ನಿಜ ಬಿಜೆಪಿ ನೋಟಿಸ್ ಕೊಟ್ಟಿದ್ದು, ಆದರೆ ರೆಹಮಾನ್ ಖಾನ್, ಜಾಫರ್ ಶರೀಫ್, ಹ್ಯಾರೀಸ್ ಇಂತಹವರಿಗೆ ನೋಟಿಸ್ ಕೊಟ್ಟಿದ್ದು. ಇವರೆಲ್ಲಾ ವಕ್ಫ್ ಹೆಸರಲ್ಲಿ ಲೂಟಿ ಹೊಡೆದಿದ್ದರು, ಅವರಿಗೆ ನೋಟಿಸ್ ಕೊಟ್ಟಿದ್ದು ಅಂತ ಇವರು ಹೇಳಲೇ ಇಲ್ಲ. ಇಂದು ನೋಟಿಸ್ ಕೊಟ್ಟಿದ್ದಾರೆ. ವಕ್ಫ್ ಬೋರ್ಡ್ ಹೆಸರಲ್ಲಿ ಕೋಟ್ಯಂತರ ಹಣ ಕಿಕ್ ಬ್ಯಾಕ್ ಪಡೆಯುತ್ತಿದ್ದಾರೆ ಎಂದು ಆರೋಪ ಮಾಡಿದರು.

ಇದನ್ನೂ ಓದಿ : ವಕ್ಫ್ ವಿಚಾರ, ಜನರು ದಂಗೆ ಏಳುವ ಪರಿಸ್ಥಿತಿ ಬಂದಿದೆ: ಆರ್ ಅಶೋಕ್

Last Updated : 1 hours ago
ETV Bharat Logo

Copyright © 2024 Ushodaya Enterprises Pvt. Ltd., All Rights Reserved.