ಹುಬ್ಬಳ್ಳಿ: ನಗರದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ಅಪಹರಣ ಪ್ರಕರಣ ಸುಖಾಂತ್ಯ ಕಂಡಿದೆ. ಹುಬ್ಬಳ್ಳಿಯ ಸಿಲ್ವರ್ ಟೌನ್ ಕ್ರಾಸ್ ಬಳಿ ಇರುವ ಸೇಂಟ್ಪಾಲ್ಸ್ ಶಾಲೆಯ ಶರಣು ತೇಜಿ ಎಂಬ ವಿದ್ಯಾರ್ಥಿಯನ್ನು ದುಷ್ಕರ್ಮಿಗಳು ದ್ವಿಚಕ್ರವಾಹದಲ್ಲಿ ಬಂದು ಕಿಡ್ನಾಪ್ ಮಾಡಿಕೊಂಡು ಪರಾರಿಯಾಗಿದ್ದರು. ವಿಷಯ ತಿಳಿದ ಪೊಲೀಸರು ಕಾರ್ಯಾಚರಣೆಗಿಳಿಯುತ್ತಿದಂತೆ ಅಪಹರಣಕಾರರು ಬಾಲಕನನ್ನು ಶಾಲೆಯ ಬಳಿ ಬಿಟ್ಟು ಹೋಗಿದ್ದಾರೆ. ಶರಣು ತೇಜಿ ರೈತ ಹೋರಾಟಗಾರ ಸಿದ್ದಣ್ಣ ತೇಜಿ ಅವರ ಎರಡನೇ ಮಗನಾಗಿದ್ದಾನೆ.
ಈ ಕುರಿತು ಹು-ಧಾ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಪ್ರತಿಕ್ರಿಯಿಸಿ, ಗೋಕುಲ್ ರೋಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಯೊಬ್ಬನನ್ನು ಕಿಡ್ನಾಪ್ ಮಾಡಿದ್ದಾರೆ ಎಂಬ ಮಾಹಿತಿ ಬಂದಿತ್ತು. ಇಷ್ಟರಲ್ಲಿ ಅಪಹರಣಕಾರರು ವಿದ್ಯಾರ್ಥಿಯನ್ನು ಮರಳಿ ಶಾಲೆಯ ಬಳಿ ಬಿಟ್ಟು ಹೋಗಿದ್ದಾರೆ. ಈ ಸಂಬಂಧ ವಿದ್ಯಾರ್ಥಿ ಏನು ಹೇಳುತ್ತಾನೆ ಕೇಳಬೇಕು. ಪೋಷಕರಿಗೂ ಸಹ ಠಾಣೆಗೆ ಬಂದು ದೂರು ಕೊಡಲು ಹೇಳಿದ್ದೇನೆ. ದೂರು ನೀಡಿದರೆ ಪ್ರಕರಣ ದಾಖಲು ಮಾಡಿಕೊಂಡು ವಿಚಾರಣೆ ನಡೆಸಲಾಗುತ್ತದೆ ಎಂದು ಹೇಳಿದರು.
ಇದನ್ನೂ ಓದಿ: ಕಿಡ್ನಾಪ್ ಆಗಿದ್ದ ಕಿತ್ತೂರು ಪ.ಪಂ. ಸದಸ್ಯ ಪತ್ತೆ: ಮೂವರು ಆರೋಪಿಗಳ ಬಂಧನ - Kittur Kidnap Case