ಬೆಳಗಾವಿ: ಸತೀಶ ಜಾರಕಿಹೊಳಿ ಯಾವಾಗ ಸಿಎಂ ಆಗ್ತಾರೆ ಎಂದು ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಸತೀಶ ಜಾರಕಿಹೊಳಿ, ಈಗಾಗಲೇ ಟಿಕೆಟ್ ತೆಗೆದುಕೊಡು ಕುಳಿತಿರುವೆ. ಟ್ರೇನ್ ಬರೋವರೆಗೂ ಕಾಯಬೇಕಷ್ಟೇ. ಅದು ಎಷ್ಟು ತಡವಾಗಿ ಬಂದರೂ ಕುಳಿತುಕೊಳ್ಳಲೇಬೇಕು ಎನ್ನುವ ಮೂಲಕ ಸಿಎಂ ಆಗುವ ಮನದ ಇಂಗಿತವನ್ನು ಮತ್ತೆ ವ್ಯಕ್ತಪಡಿಸಿದರು.
ನಿಗಮ ಮಂಡಳಿ ಅಧ್ಯಕ್ಷ ಸ್ಥಾನಗಳನ್ನು ಉತ್ತರ ಕರ್ನಾಟಕಕ್ಕೆ ಹಂಚದ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಇನ್ನು ಹಂಚಿಕೆ ಆಗಬೇಕು. ನಾವು ಸಿಎಂ ಅವರಿಗೆ ಹೇಳಿದ್ದೇವೆ. ನಮ್ಮ ಜಿಲ್ಲೆ ದೊಡ್ಡದಿದೆ ಹೆಚ್ಚು ನಿಗಮ ಮಂಡಳಿ ಸ್ಥಾನಗಳನ್ನು ನೀಡಿ ಎಂದಿದ್ದೇವೆ ಅಂತಾ ಸ್ಪಷ್ಟಪಡಿಸಿದರು.
ಚಿಕ್ಕೋಡಿಗೆ ಜನ ಬಂದಿಲ್ಲ, ಕೆಲಸ ಮಾಡಿಲ್ಲ ಅಂತಾ ಹೇಳಬಾರದು. ಈಗಲೂ ಸಹ ಅದೇ ನಿಲುವನ್ನು ನಾವು ಮುಂದುವರೆಸಿದ್ದೇವೆ. ನೂರಕ್ಕೆ ನೂರು ಸರ್ಕಾರಿ ಕೆಲಸ ಮಾಡಲು ಆಗಲ್ಲ. ಆದರೆ, ಜನರ ಜೊತೆಗೆ ಬೆರೆತು ಅವರ ಸಮಸ್ಯೆ ಆಲಿಸಬೇಕು. ರಾಯಬಾಗ, ಕುಡಚಿ ಸೇರಿದಂತೆ ಎಲ್ಲ ಕಡೆ ಓಡಾಡ್ತಿದ್ದೇವೆ ಎಂದು ಸತೀಶ ಜಾರಕಿಹೊಳಿ ಹೇಳಿದರು.
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರ: ಅದು ಪಕ್ಷದ ವೇದಿಕೆಯಲ್ಲಿ ಹೈಕಮಾಂಡ್ ಚರ್ಚೆ ಮಾಡಬೇಕು. ಬಹಳಷ್ಟು ಜನ ಆಕಾಂಕ್ಷಿಗಳಿದ್ದಾರೆ, ಆದರೆ, ಅಂತಿಮವಾಗಿ ಹೈಕಮಾಂಡ್ ನಿರ್ಣಯ ಮಾಡಬೇಕು. ಇನ್ನು ಆ ವಿಚಾರ ಸದ್ಯ ನಮ್ಮ ಮುಂದೆ ಇಲ್ಲ ಎಂದು ಸತೀಶ ಜಾರಕಿಹೊಳಿ ಹೇಳಿದರು.
ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೊಟ್ಟರೆ ನಿಭಾಯಿಸ್ತಿರಾ ಎಂಬ ಪ್ರಶ್ನೆಗೆ ಉತ್ತರಿಸಿದ ಸತೀಶ ಜಾರಕಿಹೊಳಿ, ಸದ್ಯ ಚುನಾವಣೆ ಇಲ್ಲ. ಮತಗಳನ್ನು ತಂದು ಕೊಡುವವರು ಅಧ್ಯಕ್ಷರಾಗಬೇಕು. ಅಂತಹ ಯಾವುದೇ ಚರ್ಚೆ ದೆಹಲಿಗೆ ಭೇಟಿ ನೀಡಿದಾಗ ಆಗಿಲ್ಲ. ಸಹಜವಾಗಿ ದೆಹಲಿಗೆ ಹೋದಾಗ ರಾಜಕೀಯ ಚರ್ಚೆ ಆಗಿರುತ್ತದೆ. ಒಳಗೆ ಯಾರು ಏನು ಹೇಳಿದರು ಎಂದು ಅವರಿಗೆ ಮಾತ್ರ ಗೊತ್ತಿರುತ್ತದೆ. ಪ್ಲಾನಿಂಗ್ ಏನೂ ಇಲ್ಲ. ನೆಗೆಟಿವ್ ಇದ್ದಿದ್ದನ್ನು ಪಾಸಿಟಿವ್ ಮಾಡಬೇಕು. ಅದು ಒಂದು ಕಲೆ. ಇನ್ನು ಬೇರೆ ಬೇರೆ ಕೆಲಸಗಳಿಗೆ ನಾವು ಕೇಂದ್ರ ಸಚಿವರನ್ನು ಭೇಟಿ ಆಗಿದ್ದೇವೆ. ಪ್ರಧಾನಿ ಅವರನ್ನು ಸಿಎಂ ಭೇಟಿ ಆಗಿದ್ದಾರೆ ಎಂದು ಹೇಳಿದರು.
ಡಿಸಿಎಂ ವಿಚಾರ ಪಕ್ಷದ ವೇದಿಕೆಯಲ್ಲಿ ಎಲ್ಲವೂ ಚರ್ಚೆ ಆಗಬೇಕು. ಸುಮ್ಮನೆ ನಾವು ನಿತ್ಯ ಇಡೀ ರಾಜ್ಯದ ತುಂಬಾ ಡಿಸಿಎಂ ಚರ್ಚೆ ಮಾಡುವ ಬದಲು, ಪಕ್ಷದ ವೇದಿಕೆಯಲ್ಲಿ ಚರ್ಚೆ ಮಾಡಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಸಿಎಂ ಸ್ಥಾನವನ್ನು ಬಿಟ್ಟು ಕೊಡಬೇಕು ಎಂಬ ಸ್ವಾಮೀಜಿ ಹೇಳಿಕೆಗೆ ಉತ್ತರಿಸಿದ ಅವರು, ಹಿಂದೆ ಮುರುಗೇಶ ನಿರಾಣಿ ಅವರನ್ನು ಮಂತ್ರಿ ಮಾಡಲೇಬೇಕು ಎಂದು ಸ್ವಾಮೀಜಿಯೊಬ್ಬರು ಯಡಿಯೂರಪ್ಪಗೆ ಹೇಳಿದ್ದರು. ಸ್ವಾಮೀಜಿಗಳು ಆಯಾ ಸಮಾಜದ ಪರ ಮಾತಾಡುವುದು ತಪ್ಪಲ್ಲ. ಹಾಗಾಗಿ, ಡಿಸಿಎಂ ಹುದ್ದೆ ಸೃಷ್ಟಿ ಬಗ್ಗೆ ಪಕ್ಷ ಹೇಳಬೇಕು. ಮಾಡುತ್ತೇವೆ ಎಂದರೆ ಮಾಡ್ತೇವಿ ಅಂತ ಹೇಳಬೇಕು, ಇಲ್ಲವಾದರೆ ಇಲ್ಲ ಅಂತ ಹೇಳಬೇಕು ಎಂದರು.
ಬೆಳಗಾವಿ ಬಿಜೆಪಿ ಹಾಗೂ ಚಿಕ್ಕೋಡಿಯಲ್ಲಿ ಕಾಂಗ್ರೆಸ್ ಗೆಲುವಿಗೆ ಎರಡು ಶಕ್ತಿ ಕಾರಣ ಎಂಬ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಅದನ್ನು ನೀವೇ ಸ್ಟಿಂಗ್ ಆಪರೇಷನ್ ಮಾಡಿ ಹೇಳಬೇಕು. ಜೇಮ್ಸ್ ಬಾಂಡ್ ರೀತಿ ನೀವೇ ಸ್ಟಿಂಗ್ ಮಾಡಿ ಎಂದು ಮಾಧ್ಯಮಗಳಿಗೆ ಸತೀಶ ಜಾರಕಿಹೊಳಿ. ಚಿಕ್ಕೋಡಿಯಲ್ಲಿ ಲೀಡ್ ಕಡಿಮೆ ಆಗಿದ್ದರ ಬಗ್ಗೆ ಮಾತನಾಡಿದ ಅವರು, 1900 ಬೂತ್ ಗಳಲ್ಲಿ ಸರ್ವೇ ಮಾಡಿರುತ್ತೇವೆ. ಮುಂದಿನ ಚುನಾವಣೆಗೆ ಅದು ನಮಗೆ ಅನುಕೂಲ ಆಗುತ್ತದೆ. ಹೆಚ್ಚು ಲೀಡ್ ಪಡೆಯಲು ನಮಗೆ ಸರ್ವೇ ಅನುಕೂಲ ಆಗುತ್ತದೆ ಎಂದು ಹೇಳಿದರು.
ಲಕ್ಷ್ಮಣ ಸವದಿ ಮನೆಯಲ್ಲಿ ಸವದಿ, ತಮ್ಮನ್ನವರ, ಕಾಗೆ ಭೇಟಿ ವಿಚಾರಕ್ಕೆ, ಸಭೆ ಮಾಡಬಹುದು ಅವರು ಕೂಡಲೇಬಾರದು ಅಂತಲ್ಲ, ಕೂಡಿರಬಹುದು. ಚುನಾವಣೆ ಗೆದ್ದ ನಂತರ ಜಾರಕಿಹೊಳಿ ಸಹೋದರರು ಶಾಸಕರ ವಿರುದ್ಧ ತಿರುಗಿ ಬೀಳ್ತಿರುವುದಕ್ಕೆ ಚುನಾವಣೆಯಲ್ಲಿ ನಮ್ಮ ಜೊತೆಗೆ ಇದ್ದರೆ ಅಷ್ಟೆ ಸಾಕು. ಅವರು ಯಾವಾಗಲೂ ನಮ್ಮ ಜೊತೆ ಇರಬೇಕು ಎಂದೇನಿಲ್ಲ ಎಂದು ಸತೀಶ ಜಾರಕಿಹೊಳಿ ಅಸಮಾಧಾನ ವ್ಯಕ್ತಪಡಿಸಿದರು.
ಹಾರೂಗೇರಿಯ ಅಳಗವಾಡಿಯಲ್ಲಿ ಮನೆ ಮಾಡುತ್ತಿರುವುದಕ್ಕೆ ಉತ್ತರಿಸಿದ ಅವರು, ಅಳಗವಾಡಿಯಿಂದ ಕುಡಚಿ - ರಾಯಬಾಗ ಸಮಾನಾಂತರ ದೂರ ಆಗುತ್ತದೆ. ಹೀಗಾಗಿ ಅಲ್ಲಿಯೇ ಮನೆ ಮಾಡುತ್ತಿದ್ದೇವೆ ಎಂದ ಸತೀಶ ಜಾರಕಿಹೊಳಿ, ರಾಯಬಾಗ, ಕುಡಚಿ ಸಾಮಾನ್ಯ ವಿಧಾನಸಭೆ ಕ್ಷೇತ್ರಗಳಾಗಿ ಮಾರ್ಪಾಡು ಆಗುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಅವಕಾಶ ಸಿಕ್ಕರೆ ಅಲ್ಲೂ ಟವೇಲ್ ಹಾಸುತ್ತೇವೆ. ಇಲ್ಲವಾದರೆ ನಮ್ಮ ಕಾರ್ಯಕರ್ತರು ಓಡಾಡಿ ಕೆಲಸ ಮಾಡಿದ್ರೆ ಅವರಿಗೆ ಸಪೋರ್ಟ್ ಮಾಡುತ್ತೇವೆ ಎಂದು ಹೇಳಿದರು.
ಓದಿ: ಸದ್ಯಕ್ಕೆ ಸಿಎಂ ಸ್ಥಾನ ಖಾಲಿ ಇಲ್ಲ, ಸಿದ್ದರಾಮಯ್ಯ ಕುರ್ಚಿಯಲ್ಲಿದ್ದಾರೆ: ಸಚಿವ ಜಮೀರ್ ಅಹಮದ್ - Zameer Ahmad