ETV Bharat / state

"ಸಮುದಾಯಗಳ ಬಗ್ಗೆ ಮಾತನಾಡಿದ್ದು, ಪಕ್ಷದ ಬಗ್ಗೆ ಹೇಳಿಕೆ ನೀಡಿದ್ದಲ್ಲ": ದಲಿತ ಸಿಎಂ ಹೇಳಿಕೆಗೆ ಸಚಿವ ಮಹದೇವಪ್ಪ ಸ್ಪಷ್ಟನೆ - Mahadevappa clarrification

ಇತ್ತೀಚೆಗೆ ಕರ್ನಾಟಕ ರಾಜ್ಯ ಸರ್ಕಾರಿ ಎಸ್ಸಿ ಎಸ್ಟಿ ನೌಕರರ ಸಮನ್ವಯ ಸಮಿತಿಯಿಂದ ಆಯೋಜಿಸಿದ್ದ 5ನೇ ರಾಜ್ಯಮಟ್ಟದ ಜಾಗೃತ ಸಮಾವೇಶದಲ್ಲಿ ದಲಿತ ಸಿಎಂ ಬಗ್ಗೆ ನೀಡಿದ್ದ ಹೇಳಿಕೆ ವಿಚಾರದಲ್ಲಿ ಸಚಿವ ಮಹದೇವಪ್ಪ ಸ್ಪಷ್ಟನೆ ನೀಡಿದರು.

Minister Mahadevappa
ಸಚಿವ ಮಹದೇವಪ್ಪ
author img

By ETV Bharat Karnataka Team

Published : Mar 7, 2024, 7:18 AM IST

Updated : Mar 7, 2024, 7:49 AM IST

ಸಚಿವ ಮಹದೇವಪ್ಪ

ಬೆಂಗಳೂರು: "ನಾನು ಈ ಸಮುದಾಯಗಳ ಕುರಿತು ಮಾತನಾಡಿದ್ದೇನೆ ಹೊರತು ಪಾರ್ಟಿ ಬಗ್ಗೆ ಹೇಳಿಕೆ ನೀಡಿಲ್ಲ. ಅವರು, ನನ್ನ ಜನರು ಅಧಿಕಾರದಲ್ಲಿ ಇರಬೇಕು. ಫಾಲಿಸಿ ಮೇಕಿಂಗ್ ಜಾಗದಲ್ಲಿ ಇರಬೇಕು ಎಂದು ಅಂಬೇಡ್ಕರ್​ ಹೇಳಿದ್ದರು. ಅದಕ್ಕೆ ನಮ್ಮ ಜನರು ಒಗ್ಗಟ್ಟಾಗಬೇಕೆಂದು ನಾನು ಹೇಳಿದ್ದು. ಈ ವಿಷಯವನ್ನು ಕಾಂಪ್ಲಿಕೇಟ್​​ ಮಾಡಬೇಡಿ" ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಸ್ಪಷ್ಟನೆ ನೀಡಿದರು.

ಬೆಂಗಳೂರಿನಲ್ಲಿ ಮಾಧ್ಯಮದವರು ಕೇಳಿದ ದಲಿತರು ಮುಖ್ಯಮಂತ್ರಿ ಆಗಬೇಕೆಂಬ ಬೇಡಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, "ಮೀಸಲಾತಿಯಿಂದ ನನಗೆ ಸಂತೋಷ ಆಗಲಿಲ್ಲ. ನನ್ನ ಜನ ನಿರ್ಣಾಯಕ ಜಾಗದಲ್ಲಿ ಕುಳಿತುಕೊಳ್ಳಬೇಕು ಎಂದು ಬಾಬಾ ಸಾಹೇಬ್​ ಅಂಬೇಡ್ಕರ್​ ಅವರು ಹೇಳಿದ್ದಾರೆ. ಅದು ಎಸ್​ಪಿ, ಡಿಸಿ, ಜಡ್ಜಸ್​, ಸಿಎಂ, ಪಿಎಂ, ರಾಷ್ಟ್ರಪತಿ ಇರಬಹುದು, ಇಂತಹ ಜಾಗದಲ್ಲಿ ನನ್ನ ಜನ ಇರಬೇಕು ಎಂದು ಬಯಸಿದ್ದರು. ಅದಕ್ಕೆ ನೀವೆಲ್ಲ ಒಗ್ಗಟ್ಟಾಗಿ ನಾಯಕತ್ವವನ್ನು ರೂಢಿಸಿಕೊಂಡು ಅಂತಹ ಪರಿಸ್ಥಿತಿಯನ್ನು ನಿರ್ಮಾಣ ಮಾಡಬೇಕು. ಒಂದು ಸಿದ್ಧಾಂತದ ಕೆಳಗಡೆ ಮತ ಹಾಕುತ್ತೀರಿ. ಆದರೆ ಇವತ್ತಿನ ಜಾತಿ ರಾಜಕಾರಣದಿಂದ ಮತ ಹಾಕಿದ ನಂತರ ಆಯಾ ಜಾತಿಯ ಜನ ಆಯಾ ನಾಯಕನ ಹಿಂದೆ ಹೋಗುತ್ತಾರೆ. ಮತಹಾಕಿ ಸುಮ್ಮನಾಗುತ್ತಾರೆ. ಸೈದ್ಧಾಂತಿಕವಾಗಿ ಮತ ಹಾಕಿ ನಂತರ ಹೋಗಿ ಬೇರೆಯವರ ಮುಂದೆ ಹೋಗಿ ಕೈಜೋಡಿಸಿ ನಿಲ್ಲುತ್ತೀರಿ. ಜಾತಿ ಬೆಂಬಲದಿಂದ ಮತ ಪಡೆದವರು ನಂತರ ನಮ್ಮ ಮೇಲೆ ಆಡಳಿತ ಮಾಡುತ್ತಾರೆ. ಅದಕ್ಕಾಗಿ ಒಗ್ಗಟ್ಟಾಗಿ ಎಂದು ನಾನು ಹೇಳಿದ್ದು." ಎಂದು ಹೇಳಿದ್ದಾರೆ.

"ಬಹುಜನ ಒಂದಾಗಿದ್ದಾರೆ, ಯಾಕೆ ನಿಮಗೆ ಕಣ್ಣು ಕಾಣಲ್ವಾ? ಬಹುಜನ ಒಂದಾಗಿರೋದಕ್ಕೆ ಕಾಂಗ್ರೆಸ್​ ಗೆಲ್ತಾ ಇರೋದು. ಕಾಂಗ್ರೆಸ್​ ಪಕ್ಷದಲ್ಲಿ ಬೇಕಾದಷ್ಟು ಜನ ದಲಿತರು ಸಿಎಂ ಆಗಿದ್ದಾರೆ. ಜಗನ್ನಾಥ್​ ಪಾಂಡೆ, ರಾಮಸುಂದರ್​ ದಾಸ್​, ಸಂಜೀವಯ್ಯ, ಮಹಾರಾಷ್ಟ್ರದಲ್ಲಿ ಏಕನಾಥ್​ ಶಿಂಧೆ ಅವರು ಸೇರಿದಂತೆ ದೇಶದಲ್ಲಿ ಬಹಳಷ್ಟು ದಲಿತರು ಸಿಎಂ ಆಗಿದ್ದಾರೆ. ಬೇರೆ ಪಕ್ಷದವರೂ ಕೂಡ ದಲಿತರನ್ನು ಸಿಎಂ ಮಾಡಬೇಕಲ್ವಾ? ನಾನು ಸಮುದಾಯಗಳ ಬಗ್ಗೆ ಮಾತನಾಡಿದ್ದು, ಹೊರತು ನಮ್ಮ ಪಕ್ಷದ ಬಗ್ಗೆ ಹೇಳಿಕೆ ನೀಡಿದ್ದಲ್ಲ. ವಿನಾಕಾರಣ ನೀವು ನನ್ನ ಹೇಳಿಕೆಯನ್ನು ಕಾಂಪ್ಲಿಕೇಟ್​ ಮಾಡಬೇಡಿ." ಎಂದರು.

ಈ ಸಮುದಾಯಗಳು ಸಂಘಟನಾತ್ಮಕವಾಗಿ ಒಗ್ಗಟ್ಟಾಗಿ, ಕೋಮುವಾದವನ್ನು ಸೋಲಿಸಿ, ಅಧಿಕಾರದ ಸ್ಥಳಕ್ಕೆ ಬರಬೇಕು. ದಲಿತರಲ್ಲಿ ಬಹಳಷ್ಟು ಜನರು ಪ್ರತಿಭಾವಂತರಿದ್ದಾರೆ. ದಲಿತ ಅನ್ನುವ ಕಾರಣಕ್ಕೆ ಅವಕಾಶ ಸಿಕ್ಕಿಲ್ಲ. ದಲಿತ ನಾಯಕತ್ವದ ಹಿಂದೆ ನಿಲ್ಲಬೇಕು ಅಂತ ಹೇಳಿದ್ದೇನೆ. ಇದು ಅಂಬೇಡ್ಕರ್ ಮಾತು" ಎಂದು ಹೇಳಿದರು.

ಸಿಎಂಗೆ ಅವಕಾಶ ಕೊಡಿಸಿ: "ನೀವೆಲ್ಲ (ಮಾಧ್ಯಮಗಳು) ಸೇರಿ ನಮಗೆ ಸಿಎಂ ಅವಕಾಶ ‌ಕೊಡಿಸಿ. ನಮ್ಮ ಪರವಾಗಿ ಯಾರೂ ಮಾತನಾಡುವುದಿಲ್ಲ. ನಿಮ್ಮ ಧ್ವನಿ ಕೂಡ ಮುಖ್ಯ, ನಮ್ಮ ಪರವಾಗಿ ಮಾತನಾಡಿ. ನಿಮ್ಮ ಐಡಿಯಾಗಳನ್ನು ನಮ್ಮ ಮಾತಿನಲ್ಲಿ ಹೇಳಿಸಬೇಡಿ. ನಾಲ್ಕಾರು ರಾಜ್ಯದಲ್ಲಿ ಕಾಂಗ್ರೆಸ್ ದಲಿತರನ್ನು ಸಿಎಂ ಮಾಡಿದ್ದಾರೆ. ಬೇರೆ ಯಾವ ಪಕ್ಷದವರು ಮಾಡಿದ್ದಾರೆ ಅಂತ ತೋರಿಸಿ" ಎಂದು ಗರಂ ಆದರು.

ಹೆಚ್ಚಿನ ಕ್ಷೇತ್ರಗಳಿಗೆ ಬೇಡಿಕೆ ಇಡುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, "ಪಕ್ಷ ಈ ಬಗ್ಗೆ ನಿರ್ಧಾರ ಮಾಡಬೇಕು. ಮೀಸಲು ಕ್ಷೇತ್ರ ಬಿಟ್ಟು ಬೇರೆ ಕಡೆಯೂ ದಲಿತ ಅಭ್ಯರ್ಥಿಗಳು ಇದ್ದಾರೆ. ಇದರ ಬಗ್ಗೆ ಕಾಂಗ್ರೆಸ್ ನಿರ್ಧಾರ ಮಾಡಬೇಕು. ನಮ್ಮ ನಾಯಕರಿಗೆ ಸಾಮಾನ್ಯ ಕ್ಷೇತ್ರದಲ್ಲೂ ಕೂಡ ಗೆಲ್ಲುವ ಸಾಮರ್ಥ್ಯ ಇದೆ. ಆದರೆ, ಪಕ್ಷ ಅವಕಾಶ ಕೋಡಬೇಕು. ಸದ್ಯಕ್ಕೆ ಹೆಚ್ಚಿನ ಕ್ಷೇತ್ರಗಳಿಗೆ ಡಿಮ್ಯಾಂಡ್ ಇಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

"ಲೋಕಸಭಾ ಚುನಾವಣೆಗೆ ನಾನು ನಿಲ್ಲುವುದಿಲ್ಲ. ಪದೇ ಪದೇ ಯಾಕೆ ಪ್ರಶ್ನೆ ಕೇಳ್ಳುತ್ತಿರಾ?" ಎಂದು ಸಚಿವರು ಗರಂ ಆದರು.

ಇದನ್ನೂ ಓದಿ: ಪಲ್ಸ್​ ಪೋಲಿಯೋ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿದ ಸಚಿವ ಹೆಚ್.ಸಿ.ಮಹದೇವಪ್ಪ

Last Updated : Mar 7, 2024, 7:49 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.