ETV Bharat / state

ನಾವು ಜೈ ಶ್ರೀರಾಮ್ ಘೋಷಣೆ ಕೂಗುತ್ತೇವೆ, ಕೇಸರಿ ಶಾಲು ಬಿಜೆಪಿ ಸ್ವತ್ತಲ್ಲ: ಎಂ.ಬಿ.ಪಾಟೀಲ್ - ಬೆಂಗಳೂರು

ನಾವು ಬಣವಣ್ಣನವರ ತತ್ವ, ಸಿದ್ಧಾಂತದಲ್ಲಿ ನಂಬಿಕೆ ಇಟ್ಟುಕೊಂಡವರು. ಅಷ್ಟೇ ಅಲ್ಲ, ನಾವೂ ಜೈ ಶ್ರೀ ರಾಮ್ ಘೋಷಣೆ ಕೂಗುತ್ತೇವೆ. ಇದು ಬಿಜೆಪಿಯವರ ಸ್ವತ್ತಲ್ಲ ಎಂದು ಎಂದು ಸಚಿವ ಎಂ.ಬಿ.ಪಾಟೀಲ್ ಹೇಳಿದರು.

minister-m-b-patil
ಸಚಿವ ಎಂ.ಬಿ.ಪಾಟೀಲ್
author img

By ETV Bharat Karnataka Team

Published : Feb 12, 2024, 3:18 PM IST

ಬೆಂಗಳೂರು: "ನಾವು ಜೈ ಬಸವಣ್ಣ, ಜೈ ವಾಲ್ಮೀಕಿ, ಜೈ ಭೀಮ್ ಮತ್ತು ಜೈ ಶ್ರೀರಾಮ ಅಂತೀವಿ" ಎಂದು ಸಚಿವ ಎಂ.ಬಿ.ಪಾಟೀಲ್ ಬಿಜೆಪಿಗೆ ತಿರುಗೇಟು ನೀಡಿದರು. ವಿಧಾನಸೌಧದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸದಸ್ಯರು ಸದನದಲ್ಲಿ ಜೈ ಶ್ರೀರಾಮ್ ಘೋಷಣೆ ಕೂಗಿರುವ ವಿಚಾರವಾಗಿ ಪ್ರತಿಕ್ರಿಯಿಸಿ, "ನಾವು ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕರನ್ನಾಗಿ ಮಾಡಿದ್ದೇವೆ. ಕೇಸರಿ ಶಾಲು ಅವರ ಸ್ವತ್ತಲ್ಲ. ನಮ್ಮ‌ ಮಠದಲ್ಲಿ ಕೇಸರಿ ಶಾಲು ಬಳಸುತ್ತೇವೆ. ನಾವು ಪೂಜೆ ಮಾಡುವಾಗ ಕೇಸರಿ ಶಾಲು ಬಳಸುತ್ತೇವೆ. ಕೇಸರಿ ಅವರ ಸ್ವಂತದ್ದಾ?. ಅವರು ಹಾಗೆ ಅಂದುಕೊಂಡಿರಬೇಕು ಅಷ್ಟೇ" ಎಂದು ವಾಗ್ದಾಳಿ ನಡೆಸಿದರು.

ರಾಜ್ಯಪಾಲರ ಭಾಷಣ ಸುಳ್ಳಿನ ಭಾಷಣ ಎಂಬ ಬಿಜೆಪಿ ಆರೋಪಕ್ಕೆ, "ಐದು ಗ್ಯಾರಂಟಿ ಜಾರಿ ಸುಳ್ಳಾ?. 1.6 ಕೋಟಿ ಫಲಾನುಭವಿಗಳು ಲಾಭ ಪಡೆಯುವುದು ಸುಳ್ಳಾ?. ಗೃಹಲಕ್ಷ್ಮಿ ಯೋಜನೆ ಸುಳ್ಳಾ?. ಶಕ್ತಿ ಯೋಜನೆ ಸುಳ್ಳಾ?. ಅನ್ನಭಾಗ್ಯ ಯೋಜನೆ ಸುಳ್ಳಾ‌?. ಯುವ ನಿಧಿ ಯೋಜನೆ ಸುಳ್ಳಾ?. ಸುಳ್ಳಿನ‌ ಫ್ಯಾಕ್ಟರಿ ಅಂದರೆ ಅದು ಬಿಜೆಪಿ" ಎಂದು ಟೀಕಿಸಿದರು.

"ಬಿಜೆಪಿಯವರು ಜನರ ಖಾತೆಗೆ 15 ಲಕ್ಷ ರೂ. ಹಾಕುತ್ತೇವೆ ಅಂದಿದ್ದರು, ಅದು ಬಂದಿದೆಯಾ?. ಎರಡು ಕೋಟಿ ಉದ್ಯೋಗ ಸೃಷ್ಟಿ ಮಾಡಿದ್ದಾರಾ?. ರೈತರ ಆದಾಯ ದ್ವಿಗುಣ ಆಯಿತಾ?‌. ಎನ್​ಡಿಆರ್​ಎಫ್​ನಡಿ ಬರದ ಹಣ ಕೊಟ್ಟಿಲ್ಲ. ಬರ ಪರಿಹಾರದಲ್ಲೂ ರಾಜಕೀಯ ಮಾಡಿದ್ದಾರೆ. ಭಾಷಣದ ಯಾವ ಪ್ಯಾರಾಗ್ರಾಪ್​ನಲ್ಲಿ ಸುಳ್ಳು ಎಂದು ಹೇಳಲಿ‌. ಬಿಜೆಪಿಯವರು ರಾಜಕೀಯ ಮಾಡುತ್ತಿದ್ದಾರೆ" ಎಂದರು.

ಇದನ್ನೂ ಓದಿ: ವಿಧಾನ ಮಂಡಲ ಜಂಟಿ ಅಧಿವೇಶನ: ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಹೊಗಳಿದ ರಾಜ್ಯಪಾಲರು

ಅಧಿವೇಶನದಲ್ಲಿ ಜೈ ಶ್ರೀರಾಮ್​ ಘೋಷಣೆ: ಇಂದಿನಿಂದ ವಿಧಾನಮಂಡಲ ಜಂಟಿ ಅಧಿವೇಶನ ಆರಂಭವಾಗಿದೆ. ರಾಜ್ಯಪಾಲ ಥಾವರ್​ ಚಂದ್​ ಗೆಹ್ಲೋಟ್​ ಭಾಷಣ ಮುಗಿಸುತ್ತಿದ್ದಂತೆ ಬಿಜೆಪಿ ಶಾಸಕರು ಜೈ ಶ್ರೀ ರಾಮ್​ ಎಂದು, ಕಾಂಗ್ರೆಸ್​ ಶಾಸಕರು ಜೈ ಭೀಮ್​ ಎಂದು ಘೋಷಣೆ ಕೂಗಿದ ಘಟನೆ ಅಧಿವೇಶನದಲ್ಲಿ ನಡೆಯಿತು. ಅದಲ್ಲದೆ ಬಿಜೆಪಿ ಶಾಸಕರು ಕೇಸರಿ ಶಾಲು ಧರಿಸಿ ಕಲಾಪದಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಸದನ ಆರಂಭಕ್ಕೂ ಮುನ್ನವೇ ಸದನದ ಒಳಗೆ ಕೇಸರಿ ಶಾಲು ಹಾಕಿಕೊಂಡು ಬಂದ ವಿಧಾನಸಭೆ ಸದಸ್ಯರು ಹಾಗೂ ವಿಧಾನ ಪರಿಷತ್ ಸದಸ್ಯರು ಜೈ ಶ್ರೀ ರಾಮ್​ ಘೋಷಣೆ ಕೂಗಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.