ETV Bharat / state

ವಿಜಯೇಂದ್ರ ಬಹಳ ದಿನ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದಲ್ಲಿರಲ್ಲ: ಸಚಿವ ಎಂ.ಬಿ.ಪಾಟೀಲ್ - M B Patil reaction on Vijayendra - M B PATIL REACTION ON VIJAYENDRA

ವಿಜಯೇಂದ್ರ ಅವರನ್ನು ಯತ್ನಾಳ್, ರಮೇಶ್ ಜಾರಕಿಹೊಳಿ, ಅಶ್ವತ್ಥ ನಾರಾಯಣ, ಅಶೋಕ್ ಸೇರಿದಂತೆ ಯಾರು ಕೂಡ ಒಪ್ಪಿಲ್ಲ. ಅವರು ಬಹಳ ದಿನಗಳ ಕಾಲ ಬಿಜೆಪಿ ರಾಜ್ಯಾಧ್ಯಕ್ಷ ಸೀಟಿನಲ್ಲಿ ಇರಲ್ಲ. ಸ್ವಲ್ಪ ದಿನಗಳಲ್ಲೇ ಅವರನ್ನ ಆ ಸ್ಥಾನದಿಂದ ಕೆಳಗಿಳಿಸುತ್ತಾರೆ ಎಂದು ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ.

ಸಚಿವ ಎಂ.ಬಿ.ಪಾಟೀಲ್
ಸಚಿವ ಎಂ.ಬಿ.ಪಾಟೀಲ್ (ETV Bharat)
author img

By ETV Bharat Karnataka Team

Published : Sep 7, 2024, 3:21 PM IST

ಬೆಂಗಳೂರು: ವಿಜಯೇಂದ್ರ ಬಹಳ ದಿನಗಳ ಕಾಲ ಬಿಜೆಪಿ ರಾಜ್ಯಾಧ್ಯಕ್ಷ ಸೀಟಿನಲ್ಲಿ ಇರಲ್ಲ. ಸ್ವಲ್ಪ ದಿನಗಳಲ್ಲೇ ಅವರನ್ನು ಕೆಳಗೆ ಇಳಿಸ್ತಾರೆ ಎಂದು ಸಚಿವ ಎಂ.ಬಿ.ಪಾಟೀಲ್ ಭವಿಷ್ಯ ನುಡಿದಿದ್ದಾರೆ. ಸದಾಶಿವನಗರ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿಎಂ ರಾಜೀನಾಮೆ ಖಚಿತ ಎಂಬ ವಿಜಯೇಂದ್ರ ಹೇಳಿಕೆ ಕುರಿತು ಪ್ರತಿಕ್ರಿಯಿಸಿ, ವಿಜಯೇಂದ್ರ ಅವರಿಗೆ ಹೇಳಿ ಅವರ ತಂದೆ ಸಿಲುಕಿಸಿದ್ದು ಹೇಗೆ?. ಅವರ ಬಗ್ಗೆ ಪಾಪ ವಿಜಯೇಂದ್ರ ತಿಳಿದುಕೊಳ್ಳಬೇಕು. ಏನೇನೋ‌ ಮಾಡಿ ಅವರ ರಾಜೀನಾಮೆ ಕೊಡಿಸಿದ್ರಲ್ಲ. ಬಿಜೆಪಿಯವರೇ ಅವರನ್ನು ಕೆಳಗೆ ಇಳಿಸಿದ್ದು. ಮೊದಲು ವಿಜಯೇಂದ್ರ ಇದನ್ನ ತಿಳಿಯಲಿ ಎಂದು ತಿರುಗೇಟು ನೀಡಿದರು.

ವಿಜಯೇಂದ್ರ ಅವರನ್ನು ಬಿಜೆಪಿಯವರು ಒಪ್ಪಿದ್ದಾರಾ?: ಕಾಂಗ್ರೆಸ್​ನಲ್ಲೂ ಅಂತದ್ದೇ ಸನ್ನಿವೇಶ ಇದ್ಯಾ ಎಂಬ ಪ್ರಶ್ನೆಗೆ ಉತ್ತರಿಸಿ, ಅಲ್ಲಿ ಆ ರೀತಿ ಆಗಿದೆ, ನಮ್ಮಲ್ಲಿ ಆಗಿಲ್ಲ. ವಿಜಯೇಂದ್ರ ಅವರನ್ನು ಬಿಜೆಪಿಯವರು ಒಪ್ಪಿದ್ದಾರಾ?. ಯತ್ನಾಳ್, ರಮೇಶ್ ಜಾರಕಿಹೊಳಿ, ಅಶ್ವತ್ಥ ನಾರಾಯಣ, ಅಶೋಕ್ ಸೇರಿದಂತೆ ಯಾರು ಕೂಡ ಒಪ್ಪಿಲ್ಲ ಎಂದರು.

ಮುಡಾ ಕೇಸ್ ಡೈವರ್ಟ್​ಗೆ ದರ್ಶನ್ ಫೋಟೋ ರಿಲೀಸ್ ಎಂಬ ಪ್ರಲ್ಹಾದ್​ ಜೋಶಿ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿ, ಪ್ರಲ್ಹಾದ್​ ಜೋಶಿ ತಿಳಿದವರು. ಅವರು ಈ ರೀತಿ ಮಾತನಾಡೋದು ಸರಿಯಲ್ಲ. ದರ್ಶನ್ ರಾಜಾತಿಥ್ಯ ಗಂಭೀರವಾದುದು. ನಾನು ಹೋಮ್ ಮಿನಿಸ್ಟರ್ ಆಗಿದ್ದೆ. ಆಗಲೂ ಜೈಲಿನಲ್ಲಿ ಇಂಥ ವ್ಯವಸ್ಥೆ ನೋಡಿದ್ದೇನೆ. ಘಟನೆಯನ್ನು ಸರ್ಕಾರ ಗಂಭೀರವಾಗಿ ತೆಗೆದುಕೊಂಡಿದೆ. ಅದಕ್ಕಾಗಿ ದರ್ಶನ್ ಅಂಡ್ ಟೀಮ್ ಚದುರಿಸಲಾಗಿದೆ. ಚದುರಿಸಿ ಬೇರೆ ಬೇರೆ ಜೈಲಿಗೆ ಶಿಫ್ಟ್ ಮಾಡಲಾಗಿದೆ. ಫೋಟೋ ಲೀಕ್ ಸೇರಿ ಎಲ್ಲರದರ ತನಿಖೆ ಆಗಲಿದೆ. ಮುಡಾ ಡೈವರ್ಟ್ ಮಾಡೋಕೆ ಅದರಲ್ಲಿ ಏನಾಗಿದೆ?. ಸುಮ್ಮನೆ ಮಾತನಾಡೋದು ಸರಿಯಲ್ಲ ಎಂದು ಹೇಳಿದರು.

ಮುಡಾದಿಂದ ಯಾರು ಭಯಗೊಂಡಿಲ್ಲ: ನಿವೇಶನ ಹಂಚಿಕೆಯಲ್ಲಿ ಮೂಲ ಮುಡಾದ್ದೇ ತಪ್ಪಿದೆ. ಸೈಟ್ ಹಂಚಿಕೆ ಆಗಿದ್ದು ಬಿಜೆಪಿ ಅವಧಿಯಲ್ಲಿ. ಇದರಲ್ಲಿ ಸಿದ್ದರಾಮಯ್ಯ ಅವರ ಪಾಲೇನಿದೆ. ಮುಡಾದಿಂದ ಯಾರು ಭಯಗೊಂಡಿಲ್ಲ. ಕಾನೂನಾತ್ಮಕವಾಗಿ ಹೋರಾಟ ಮಾಡ್ತಿದ್ದೇವೆ. ಇದರಲ್ಲಿ ನಮಗೆ‌ ಜಯ ಸಿಕ್ಕೇ ಸಿಗುತ್ತದೆ. ಹಗಲುಗನಸು ಬೇಡ‌.‌ ಗವರ್ನರ್ ನಡವಳಿಕೆ ಮಾತ್ರ ಕಾನೂನು ಬಾಹಿರ ಎಂದರು.

ಇದನ್ನೂ ಓದಿ: ದರ್ಶನ್, ಮುಡಾ ವಿಚಾರ ಬಿಡಿ ಮೊದಲು ಮಹದಾಯಿ ವಿಚಾರ ಏನಾಗಿದೆ ಮಾತನಾಡಿ: ಡಿಸಿಎಂ ಡಿ.ಕೆ. ಶಿವಕುಮಾರ್ - DCM PRESS CONFERENCE

ETV Bharat Logo

Copyright © 2024 Ushodaya Enterprises Pvt. Ltd., All Rights Reserved.