ETV Bharat / state

ರಾಜ್ಯದ ಮೇಲೆ ಕೇಂದ್ರ ಗಧಾ ಪ್ರಹಾರ ನೀತಿ ಅನುಸರಿಸುತ್ತಿದೆ : ಸಚಿವ ಹೆಚ್.ಕೆ‌‌‌. ಪಾಟೀಲ್

ರಾಜ್ಯದ ಮೇಲೆ ಆರ್ಥಿಕವಾಗಿ ಕೇಂದ್ರ ಸರ್ಕಾರವು ಗಧಾ ಪ್ರಹಾರ ಮಾಡುತ್ತಿದೆ. ಈ ನೀತಿ ಅತ್ಯಂತ ಖಂಡನೀಯ ಎಂದು ಸಚಿವ ಹೆಚ್​ಕೆ ಪಾಟೀಲ್​ ಹೇಳಿದ್ದಾರೆ.

ಸಚಿವ ಹೆಚ್.ಕೆ‌‌‌.ಪಾಟೀಲ್ ಅಸಮಾಧಾನ
ಸಚಿವ ಹೆಚ್.ಕೆ‌‌‌.ಪಾಟೀಲ್ ಅಸಮಾಧಾನ
author img

By ETV Bharat Karnataka Team

Published : Feb 1, 2024, 7:59 PM IST

ಬೆಂಗಳೂರು: ರಾಜ್ಯದ ಮೇಲೆ ಕೇಂದ್ರ ಸರ್ಕಾರ ಗಧಾ ಪ್ರಹಾರ ಮಾಡುತ್ತಿದೆ. ಇದು ಅತ್ಯಂತ ಖಂಡನೀಯ ಎಂದು ಕಾನೂನು ಸಚಿವ ಹೆಚ್.ಕೆ‌. ಪಾಟೀಲ್ ಕಿಡಿಕಾರಿದ್ದಾರೆ. ಕೇಂದ್ರ ಬಜೆಟ್​ನಲ್ಲಿ ರಾಜ್ಯವನ್ನು ಕಡೆಗಣಿಸಲಾಗಿದೆ ಎಂದು ಸಂಸದ ಡಿ.ಕೆ. ಸುರೇಶ್ ಪ್ರತ್ಯೇಕ ರಾಷ್ಟ್ರದ ಹೇಳಿಕೆಗೆ ಪ್ರತಿಕ್ರಿಯಿಸಿದರು. ಯಾವ ಕಾರಣಕ್ಕೆ ಕರ್ನಾಟಕಕ್ಕೆ ಇಷ್ಟು ಕಡಿಮೆ ಪ್ರಮಾಣದ ಹಣ ಕೊಡುತ್ತೀರ ಎಂದು ಕೇಂದ್ರ ಸರ್ಕಾರನ್ನು ಸಚಿವರು ಪ್ರಶ್ನಿಸಿದರು.

223 ತಾಲೂಕುಗಳಲ್ಲಿ ಬರ ಇದ್ದರೂ ರಾಜ್ಯಕ್ಕೆ ಈವರೆಗೆ ನಯಾ ಪೈಸೆ ನೀಡಿಲ್ಲ. ಇದು ಯಾವ ಧೋರಣೆ. ಒಕ್ಕೂಟ ವ್ಯವಸ್ಥೆಯಲ್ಲಿ ವಿಶ್ವಾಸ ಮೂಡಬೇಕು. ಇದನ್ನು ಎಲ್ಲಾ ದಕ್ಷಿಣ ರಾಜ್ಯಗಳು ಖಂಡಿಸುತ್ತವೆ. ಎಲ್ಲಿ ಶ್ರಮ ಇದೆ ಮತ್ತು ಆದಾಯವಿದೆ ಹಾಗೂ ಹೆಚ್ಚು ದುಡಿಯುವ ರಾಜ್ಯಗಳಿಗೆ ನ್ಯಾಯಯುತ ಪಾಲು ಬರಬೇಕು. ರಾಜಕೀಯ ಮಾಡುವುದಾದರೆ ಹೇಗೆ ವಿಶ್ವಾಸಾರ್ಹತೆ ಕುದುರಿಸಲು ಸಾಧ್ಯ ಎಂದು ಹೆಚ್​ ಕೆ ಬೇಸರ ವ್ಯಕ್ತಪಡಿಸಿದರು.

6 ಬಿಲ್​ಗಳ ಬಗ್ಗೆ ಮಾಹಿತಿ ಕೋರಿದ ರಾಜ್ಯಪಾಲರು: ಇದೇ ವೇಳೆ ಮಾತನಾಡಿದ ಕಾನೂನು ಸಚಿವ ಹೆಚ್.ಕೆ‌. ಪಾಟೀಲ್, ರಾಜ್ಯಪಾಲರ ಬಳಿ ಆರು ಬಿಲ್​ಗಳಿದ್ದು, ಅವುಗಳ ಬಗ್ಗೆ ಹೆಚ್ಚಿನ ಮಾಹಿತಿ ಕೇಳಿದ್ದಾರೆ. ಅವರು ಕೇಳಿದ ಮಾಹಿತಿಗಳನ್ನು ನೀಡಿದ್ದೇವೆ. ಒಟ್ಟು 6 ಮಸೂದೆಗಳ ಬಗ್ಗೆ ಮಾಹಿತಿ ಕೇಳಿದ್ದಾರೆ. ಶ್ರೀ ರೇಣುಕಾ ಯಲ್ಲಮ್ಮ ಕ್ಷೇತ್ರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ ವಿಧೇಯಕ, ಬಾಂಬೆ ಪಬ್ಲಿಕ್ ಟ್ರಸ್ಟ್ ವಿಧೇಯಕ ಸೇರಿದಂತೆ ಒಟ್ಟು ಆರು ಬಿಲ್​ಗಳ ಮಾಹಿತಿ ಕೇಳಿದ್ದಾರೆ. ಬೆಳಗಾವಿ ಅಧಿವೇಶನದ ಬಳಿಕ ಒಟ್ಟು 19 ಬಿಲ್​ಗಳನ್ನು ರಾಜ್ಯಪಾಲರ ಅನುಮತಿಗಾಗಿ ಕಳಿಸಿದ್ದೆವು. ಈ ಪೈಕಿ ಆರು ಬಿಲ್​ಗಳ ಮಾಹಿತಿಯನ್ನು ಕಳುಹಿಸಿಕೊಡಲಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ: ವಿವಾಹ ನೋಂದಣಿ ಸರಳೀಕರಿಸುವ ಹಿಂದೂ ವಿವಾಹಗಳ ನೋಂದಣಿ ತಿದ್ದುಪಡಿ ನಿಯಮಗಳಿಗೆ ಸಂಪುಟ ಅಸ್ತು

ರಾಜ್ಯಕ್ಕೆ ಅನ್ಯಾಯ ಡಿಸಿಎಂ: ಈವರೆಗೆ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹತ್ತು ಬಜೆಟ್ ಮಂಡಿಸಿದೆ. ಆದ್ರೆ ಇಷ್ಟು ಕಳಪೆ ಕೇಂದ್ರ ಬಜೆಟ್ಅನ್ನು ನಾನೂ ಯಾವತ್ತೂ ನೋಡಿಲ್ಲ ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಕೂಡ ವಾಗ್ದಾಳಿ ನಡೆಸಿದ್ದಾರೆ. ಕೇಂದ್ರ ಬಜೆಟ್​ನಿಂದ ರಾಜ್ಯಕ್ಕೆ ದೊಡ್ಡ ಅನ್ಯಾಯವಾಗಿದೆ. ಕೇಂದ್ರ ಹಣಕಾಸು ಸಚಿವರನ್ನು ಭೇಟಿಯಾದಾಗ ನೀವು ಕರ್ನಾಟಕದ ಪ್ರತಿನಿಧಿಯಾಗಿದ್ದೀರಿ. ನಮಗೆ ಹೆಚ್ಚಿನ ಸಹಾಯ ಮಾಡಬೇಕು ಎಂದು ಮನವಿ ಮಾಡಿದ್ದೆ. ಆದ್ರೆ ಕರ್ನಾಟಕ್ಕೆ ಮತ್ತು ದ‌ಕ್ಷಿಣ ಭಾರತಕ್ಕೆ ಯಾವ ಸಹಾಯವೂ ಆಗಿಲ್ಲ ಎಂದು ಅವರು ಆರೋಪಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.