ETV Bharat / state

ಲೋಕಸಭೆಗೆ ಮತದಾನ: ವಿಶೇಷಚೇತನರು, ಹಿರಿಯ ನಾಗರಿಕರಿಗೆ ಆ್ಯಪ್​ ಸೇರಿ ವಿಶೇಷ ಸೌಲಭ್ಯ - Lok Sabha Election - LOK SABHA ELECTION

ಲೋಕಸಭಾ ಚುನಾವಣೆ ವೇಳೆ ವಿಶೇಷಚೇತನರು ಮತ್ತು ಹಿರಿಯ ನಾಗರಿಕ ಮತದಾರರಿಗೆ ಅಗತ್ಯ ಸೇವೆ ಹಾಗೂ ಸೌಲಭ್ಯಗಳು ಇರಲಿವೆ.

lok-sabha-election
ಲೋಕಸಭಾ ಚುನಾವಣೆ ಮತದಾನ: ವಿಕಲಚೇತನರು, ಹಿರಿಯ ನಾಗರಿಕರಿಗೆ ಆ್ಯಪ್​ ಸೇರಿ ವಿಶೇಷ ಸೌಲಭ್ಯ
author img

By ETV Bharat Karnataka Team

Published : Apr 25, 2024, 8:13 PM IST

Updated : Apr 25, 2024, 10:28 PM IST

ಬೆಂಗಳೂರು: ನಾಳೆ ರಾಜ್ಯದಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆ ವೇಳೆ ವಿಶೇಷಚೇತನ ಮತ್ತು ಹಿರಿಯ ನಾಗರಿಕ ಮತದಾರರಿಗೆ ಯಾವುದೇ ಅಡೆತಡೆ ಇಲ್ಲದೆ ಮತಗಟ್ಟೆಗಳಿಗೆ ಬಂದು ಸುಗಮ ಮತದಾನಕ್ಕೆ ಅಗತ್ಯ ಸೇವೆ ಹಾಗೂ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಭಾರತ ಚುನಾವಣಾ ಆಯೋಗ, ರಾಜ್ಯ ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ಹಾಗೂ ವಿಶೇಷಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಸಹಯೋಗದಲ್ಲಿ ಕ್ರಮ ವಹಿಸಲಾಗಿದೆ.

ರಾಂಪ್ (ಇಳಿಜಾರು) ರೈಲಿಂಗ್, ಗಾಲಿ ಕುರ್ಚಿಗಳು, ಅಂಧ ಮತದಾರರಿಗೆ ಅಗತ್ಯವಿರುವಂತೆ ಮತಯಂತ್ರದಲ್ಲಿ ಬೈಲ್ ಲಿಪಿ ಸಂಖ್ಯೆಗಳು, ಬೈಲ್ ಲಿಪಿಯ ಡಮ್ಮಿ ಮತಪತ್ರ, ಬೂತಕನ್ನಡಿ ವ್ಯವಸ್ಥೆ ಮಾಡಲಾಗಿದೆ. ಶ್ರವಣದೋಷವುಳ್ಳ ಮತದಾರರಿಗೆ ಅಗತ್ಯ ಸಂಜ್ಞಾ ಭಾಷಾ ತಜ್ಞರ ನೆರವು, ಸೂಚನಾ ಫಲಕಗಳು, ಶೌಚಾಲಯದ ವ್ಯವಸ್ಥೆ, ಮತದಾನ ಮಾಡಲು ಪ್ರತ್ಯೇಕ ಸರತಿ ಸಾಲು ಇರಲಿದೆ. ಜೊತೆಗೆ, ಕುಡಿಯುವ ನೀರು, ಪ್ರಥಮ ಚಿಕಿತ್ಸಾ ಪೆಟ್ಟಿಗೆ, ಆರೋಗ್ಯ ಸಹಾಯಕರ ನೆರವು, ಅಗತ್ಯವಿರುವ ವಿಶೇಷಚೇತನರು ಮತ್ತು ಹಿರಿಯ ನಾಗರಿಕರಿಗೆ ಉಚಿತ ಸಾರಿಗೆ ವ್ಯವಸ್ಥೆ ಹಾಗೂ ತರಬೇತಿ ಪಡೆದ ಸ್ವಯಂ ಸೇವಕರು ಸೇರಿದಂತೆ ವಿವಿಧ ಸೌಲಭ್ಯ ಒದಗಿಸಲಾಗಿದೆ ಎಂದು ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಜಂಟಿ ನಿರ್ದೇಶಕ ಹಾಗೂ ರಾಜ್ಯ ಚುನಾವಣಾ ಸಂಯೋಜಕ ಎಸ್.ನಟರಾಜ್ ಪ್ರಕಟಣೆಯಲ್ಲಿ ಕೋರಿದ್ದಾರೆ.

ಸಕ್ಷಮ್ ಆ್ಯಪ್‌: ರಾಜ್ಯದಲ್ಲಿ ಒಟ್ಟು 6,20,008 ಮತದಾರರು ವಿಶೇಷಚೇತನ ಮತದಾರರಿದ್ದಾರೆ. ನಾಳಿನ ಚುನಾವಣೆಯಲ್ಲಿ 2,76,042 ವಿಶೇಷಚೇತನ ಮತದಾರರು ಇದ್ದಾರೆ. ಅವರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಭಾರತ ಚುನಾವಣಾ ಆಯೋಗವು ಸಕ್ಷಮ್ ಆ್ಯಪ್‌ ಅಭಿವೃದ್ಧಿಪಡಿಸಿದೆ. ಇದು ವಿಶೇಷಚೇತನರಿಗೆ ಅಗತ್ಯವಿರುವ ಮಾಹಿತಿ ಮತ್ತು ಅವರಿಗೆ ದೊರೆಯುವ ಸೌಲಭ್ಯಗಳನ್ನು ಒಳಗೊಂಡಿದೆ. ಇದರಿಂದ ವಿಶೇಷಚೇತನರು ಭೌತಿಕವಾಗಿ ಅಲೆದಾಡುವುದನ್ನು ತಪ್ಪಿಸಿ, ತಮ್ಮ ಸ್ಥಳದಿಂದಲೇ ಮೊಬೈಲ್‌ನಲ್ಲಿ ಆನ್‌ಲೈನ್ ಮೂಲಕ ತಮಗೆ ಬೇಕಾದ ಮಾಹಿತಿ ಹಾಗೂ ಸೌಲಭ್ಯಗಳಾದ ಗಾಲಿಕುರ್ಚಿ, ಸಾರಿಗೆ, ಸಹಾಯಕರು, ಪ್ರತ್ಯೇಕ ಸಾಲು, ಸಂಜ್ಞಾ ಭಾಷಾ ಪರಿಣಿತರು, ಬೂತಗನ್ನಡಿ ಹಾಗೂ ನೀರಿನ ವ್ಯವಸ್ಥೆಯನ್ನೂ ಪಡೆಯಬಹುದು.

ನಾಳೆ ಮತದಾನ ನಡೆಯಲಿರುವ 14 ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ವೀಲ್ ಚೇರ್​​ಗಾಗಿ 756, 489 ಟ್ರಾನ್ಸ್​​ಪೋರ್ಟೇಷನ್ ಹಾಗೂ ಸಹಾಯಕರನ್ನು ಕೋರಿ 31 ವಿಶೇಷಚೇತನ ಮತದಾರರು ಈಗಾಗಲೇ ಸಕ್ಷಮ್ ಆ್ಯಪ್‌ನಲ್ಲಿ ಬುಕ್ ಮಾಡಿದ್ದಾರೆ. ಮತದಾನದ ದಿನದಂದು ಸಂಜೆ 5:00 ಗಂಟೆಯವರೆಗೆ ಸಹ ಬುಕ್ಕಿಂಗ್​ಗೆ ಅವಕಾಶ ನೀಡಲಾಗಿದೆ.

ತಮ್ಮ ಮೊಬೈಲ್ Android ಆಗಿದ್ದರೆ Google Play Storeನಿಂದ ಹಾಗೂ I Phone ಆಗಿದ್ದರೆ ಮೊಬೈಲ್ ಆ್ಯಪ್​ನಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು. ನಂತರ ತಮ್ಮ ಮೊಬೈಲ್ ಸಂಖ್ಯೆಯನ್ನು ಬಳಸಿ ನೋಂದಾಯಿಸಿಕೊಂಡು ಲಾಗಿನ್ ಆಗಬಹುದು. ನಂತರ ಮತ ಚಲಾಯಿಸಲು ಮತಗಟ್ಟೆಗೆ ತೆರಳಲು Pick Up ಮತ್ತು Dropಗೆ ಸಾರಿಗೆ ವ್ಯವಸ್ಥೆಯನ್ನು ಕಾಯ್ದಿರಿಸಬಹುದು ಹಾಗೂ ಮತಗಟ್ಟೆಯಲ್ಲಿ ದೊರೆಯುವ ವಿಶೇಷಚೇತನರ ಸೌಲಭ್ಯಗಳನ್ನು ಪಡೆಯಲು ಆನ್‌ಲೈನ್‌ನಲ್ಲಿ ಕಾಯ್ದಿರಿಸಬಹುದು. ಎಲ್ಲಾ ವಿಶೇಷಚೇತನರು ಬಳಸಿ, ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸಿ ಮತದಾನದ ಪ್ರಮಾಣವನ್ನು ಹೆಚ್ಚಿಸುವಂತೆ ಕರ್ನಾಟಕ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಮನವಿ ಮಾಡಿದ್ದಾರೆ.

ಬೆಂಗಳೂರು ಗ್ರಾಮಾಂತರದಲ್ಲಿ ಸಕಲ ಸಿದ್ಧತೆ: ನಾಳಿನ ಮತದಾನಕ್ಕೆ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಚುನಾವಣಾಧಿಕಾರಿ ಅವಿನಾಶ್ ಮೆನನ್ ತಿಳಿಸಿದ್ದಾರೆ. ಕ್ಷೇತ್ರದಲ್ಲಿ ಒಟ್ಟು 28,02,589 ಮತದಾರರಿದ್ದು, ಈ ಪೈಕಿ ಪುರುಷರು 14,25,685, 13,77,570 ಮಹಿಳೆಯರು ಹಾಗೂ 325 ಮಂದಿ ಇತರರಿದ್ದಾರೆ. ಕ್ಷೇತ್ರದಲ್ಲಿ ಒಟ್ಟು 2829 ಮತಗಟ್ಟೆ ಸ್ಥಾಪನೆ ಮಾಡಲಾಗಿದೆ. ಇದರಲ್ಲಿ 600 ಸೂಕ್ಷ್ಮ ಮತಗಟ್ಟೆಗಳಾಗಿವೆ. ಎಲ್ಲ ಮತಗಟ್ಟೆಗಳಲ್ಲೂ ಸಿಸಿ ಕ್ಯಾಮರಾ ಕಣ್ಗಾವಲು ಇರಿಸಲಾಗಿದ್ದು, ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ ಎಂದು ತಿಳಿಸಿದರು.

ಈಗಾಗಲೇ ಕ್ಷೇತ್ರದಾದ್ಯಂತ ಸೆಕ್ಷನ್ 144 ಜಾರಿಯಲ್ಲಿದ್ದು, ಶಬ್ದ ಬರುವ ಧ್ವನಿವರ್ಧಕಗಳು ಹಾಗೂ ಹೋಂ ಸ್ಟೇ, ಹೋಟೆಲ್ ಬಳಕೆಯನ್ನು ನಿಷೇಧಿಸಲಾಗಿದೆ. ಶುಕ್ರವಾರ ಸಂಜೆ 6 ಗಂಟೆವರೆಗೂ ಅಬಕಾರಿ ನಿಷೇಧ ಇರಲಿದ್ದು, ಯಾರೂ ಕೂಡ ಮದ್ಯದಂಗಡಿ ತೆರೆಯುವಂತಿಲ್ಲ. ಜೊತೆಗೆ ಕ್ಷೇತ್ರದೆಲ್ಲೆಡೆ 2829 ಮತಗಟ್ಟೆಗಳಿಗೆ ವೆಬ್ ಕ್ಯಾಸ್ಟಿಂಗ್ ನಡೆಯಲಿದೆ. 233 ಬ್ಯೂರೋಗಳಲ್ಲಿ 400ಕ್ಕೂ ಹೆಚ್ಚು ಸೂಕ್ಷ್ಮ ವೀಕ್ಷಕರಿದ್ದಾರೆ.

ಬಿಗಿ ಭದ್ರತೆ: ಈಗಾಗಲೇ ಬೆಂಗಳೂರು ಗ್ರಾಮಾಂತರ ಕ್ಷೇತ್ರವನ್ನು ಸೂಕ್ಷ್ಮ ಕೇಂದ್ರವೆಂದು ಘೋಷಣೆ ಮಾಡಲಾಗಿದೆ. 2,300ಕ್ಕೂ ಹೆಚ್ಚು ಪೋಲೀಸರನ್ನು ಇಲ್ಲಿನ ಭದ್ರತೆಗೆ ನಿಯೋಜಿಸಲಾಗಿದೆ. ನಾಲ್ಕು ಅರೆಸೇನಾ ತುಕಡಿ, 5 ಕೆಎಸ್​​ಅರ್​​​ಪಿ ಪಡೆ ಸೇರಿದಂತೆ 94 ಸೆಕ್ಟರ್ ಮೊಬೈಲ್ಸ್ ಅಧಿಕಾರಿಗಳು ಇರಲಿದ್ದಾರೆ. ಮತಗಟ್ಟೆಯ 200 ಮೀಟರ್ ಅಂತರದಲ್ಲಿ ಮತ ಪ್ರಚಾರ ಮಾಡುವುದನ್ನು ನಿಷೇಧಿಸಲಾಗಿದೆ ಎಂದು ಚುನಾವಣಾಧಿಕಾರಿ ಅವಿನಾಶ್ ಮೆನನ್ ತಿಳಿಸಿದ್ದಾರೆ.

ಇದನ್ನೂ ಓದಿ: ನಾಳೆ ಲೋಕಸಭೆ ಚುನಾವಣೆಗೆ ಮತದಾನ: ಮತಗಟ್ಟೆಗಳತ್ತ ಇವಿಎಂ ಹಿಡಿದು ತೆರಳಿದ ಸಿಬ್ಬಂದಿ - Lok Sabha Election 2024

Last Updated : Apr 25, 2024, 10:28 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.