ETV Bharat / state

ಮಂಗಳೂರು ವಿವಿ 42ನೇ ಘಟಿಕೋತ್ಸವ: ಮೂವರು ಉದ್ಯಮಿಗಳಿಗೆ ಗೌರವ ಡಾಕ್ಟರೇಟ್ ಪ್ರದಾನ - mangaluru University convocation - MANGALURU UNIVERSITY CONVOCATION

ಮಂಗಳೂರು ವಿಶ್ವವಿದ್ಯಾನಿಲಯದ 42ನೇ ಘಟಿಕೋತ್ಸವದಲ್ಲಿ ಮೂವರು ಉದ್ಯಮಿಗಳಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು.

ಮೂವರು ಉದ್ಯಮಿಗಳಿಗೆ ಗೌರವ ಡಾಕ್ಟರೇಟ್ ಪ್ರದಾನ
ಮೂವರು ಉದ್ಯಮಿಗಳಿಗೆ ಗೌರವ ಡಾಕ್ಟರೇಟ್ ಪ್ರದಾನ (ETV Bharat)
author img

By ETV Bharat Karnataka Team

Published : Jun 15, 2024, 10:54 PM IST

ಮಂಗಳೂರು: ಆರ್ಥಿಕ ಸಂಕಷ್ಟದಲ್ಲಿರುವ ಮಂಗಳೂರು ವಿಶ್ವವಿದ್ಯಾನಿಲಯ ಈ ಬಾರಿ 42ನೇ ಘಟಿಕೋತ್ಸವವನ್ನು ಗೊಂದಲಗಳೊಂದಿಗೆ, ಅವ್ಯವಸ್ಥಿತವಾಗಿ ನಡೆಸುವುದರ ಜೊತೆಗೆ ಮೂವರು ಉದ್ಯಮಿಗಳಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಿತು.

ಮಂಗಳೂರು ವಿಶ್ವವಿದ್ಯಾನಿಲಯದ 42ನೇ ಘಟಿಕೋತ್ಸವ ಶನಿವಾರ ಮಂಗಳೂರು ವಿಶ್ವವಿದ್ಯಾನಿಲಯದ ಮಂಗಳಾ ವಿವಿ ಸಭಾಂಗಣದಲ್ಲಿ ನಡೆದಿದ್ದು, ರಾಜ್ಯಪಾಲರು, ರಾಜ್ಯಪಾಲರ ಭದ್ರತಾ ಸಿಬ್ಬಂದಿಗಳಿಂದ ತೀರಾ ಗೊಂದಲಕ್ಕೆ ಕಾರಣವಾಯಿತು. ಮಂಗಳೂರು ವಿಶ್ವವಿದ್ಯಾನಿಲಯದ ಘಟಿಕೋತ್ಸವ ಆರಂಭವು ನಾಡಗೀತೆ ಮತ್ತು ವಿಶ್ವವಿದ್ಯಾನಿಲಯದ ಗೀತೆಯೊಂದಿಗೆ ಆರಂಭವಾಗಿ, ರಾಷ್ಟ್ರಗೀತೆಯೊಂದಿಗೆ ಮುಕ್ತಾಯವಾಗುವುದು ನಡೆಯಬೇಕಿತ್ತು. ಅದಕ್ಕೆ ಮೊದಲೇ ಸಿದ್ಧತೆ ನಡೆದಿತ್ತು. ಆದರೆ ವೇದಿಕೆಗೆ ಬಂದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ನಾಡಗೀತೆ ಮತ್ತು ವಿಶ್ವವಿದ್ಯಾನಿಲಯದ ಗೀತೆಗೆ ಮುಂಚೆ ರಾಷ್ಟ್ರಗೀತೆಯನ್ನು ನುಡಿಸುವಂತೆ ಸೂಚಿಸಿದರು.

ಕಾರ್ಯಕ್ರಮದ ಅಂತ್ಯಕ್ಕೆ ಮತ್ತೊಮ್ಮೆ ರಾಷ್ಟ್ರಗೀತೆ ನುಡಿಸಲಾಯಿತು. ಕಾರ್ಯಕ್ರಮವನ್ನು ಶಿಷ್ಟಾಚಾರಗಳೊಂದಿಗೆ ಮೊದಲೇ ಸಿದ್ಧಪಡಿಸಲಾಗಿತ್ತಾದರೂ ವೇದಿಕೆಯಲ್ಲಿ ಅವುಗಳನ್ನು ಬದಲಾಯಿಸಲು ರಾಜ್ಯಪಾಲರು, ಭದ್ರತಾ ಸಿಬ್ಬಂದಿ ಸೂಚಿಸಿದ್ದರಿಂದ ಮತ್ತೆ ಗೊಂದಲ ನಿರ್ಮಾಣವಾಯಿತು. ಗೌರವ ಡಾಕ್ಟರೇಟ್ ನೀಡುವ ಸಂದರ್ಭದಲ್ಲಿ, ಪದವಿ ಪ್ರಮಾಣ ಮಾಡುವ ಸಂದರ್ಭದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ಈ ಮೊದಲಿನಂತೆ ಮಾಡುತ್ತಿದ್ದ ವ್ಯವಸ್ಥೆಯನ್ನು ವೇದಿಕೆಯಲ್ಲಿ ಬದಲಾಯಿಸಲಾಯಿತು.

ಈ ನಡುವೆ ರಾಜ್ಯಪಾಲರು ಮಂಗಳೂರು ವಿವಿ ಕುಲಪತಿ ಡಾ. ಪಿ ಎಲ್ ಧರ್ಮ ಅವರನ್ನು ತರಾಟೆಗೆ ತೆಗೆದುಕೊಂಡ ಪರಿಣಾಮ ಕುಲಪತಿಗಳು ವೇದಿಕೆಯಲ್ಲಿ ಗದ್ಗದಿತರಾದರು. ಇನ್ನು ಶಿಷ್ಟಾಚಾರದಂತೆ ನಡೆಯಬೇಕಿದ್ದ ಕಾರ್ಯಕ್ರಮದಲ್ಲಿ ರಾಜ್ಯಪಾಲರ ಭದ್ರತಾ ಸಿಬ್ಬಂದಿಗಳು ವೇದಿಕೆಯಲ್ಲಿಯೇ ವಿಶ್ವವಿದ್ಯಾನಿಲಯದ ಅಧಿಕಾರಿಗಳ ಜೊತೆಗೆ ಚರ್ಚೆ ನಡೆಸುತ್ತಿದ್ದದ್ದು ಕಂಡುಬಂತು.

ಮೂವರಿಗೆ ಗೌರವ ಡಾಕ್ಟರೇಟ್ ಪ್ರದಾನ: ಮಂಗಳೂರು ವಿಶ್ವವಿದ್ಯಾನಿಲಯದ 42ನೇ ಘಟಿಕೋತ್ಸವದಲ್ಲಿ ಎಂ.ಆರ್. ಜಿ ಗ್ರೂಪ್ ಮಾಲೀಕ ಕೆ. ಪ್ರಕಾಶ್ ಶೆಟ್ಟಿ, ಡಾ. ತುಂಬೆ ಮೊಯ್ದಿನ್ ಮತ್ತು ರೊನಾಲ್ಡೋ ಕೊಲಾಸೋ ಅವರಿಗೆ ಗೌರವ ಡಾಕ್ಟರೇಟ್ ನೀಡಲಾಯಿತು. ಆದರೆ ಈ ಗೌರವ ಡಾಕ್ಟರೇಟ್ ಸ್ವೀಕರಿಸಲು ಡಾ ತುಂಬೆ ಮೊಯ್ದಿನ್ ಗೈರಾಗಿದ್ದರು.

ಘಟಿಕೋತ್ಸವದಲ್ಲಿ ಅಭಿವೃದ್ಧಿಶೀಲ ರಾಷ್ಟ್ರಗಳ ಸಂಶೋಧನೆ ಮತ್ತು ಮಾಹಿತಿ ವ್ಯವಸ್ಥೆ, ಮಹಾ ನಿರ್ದೇಶಕರು ಪ್ರೊ. ಸಚಿನ್ ಚತುರ್ವೇದಿ ಮುಖ್ಯ ಅತಿಥಿಯಾಗಿ ಭಾಷಣ ಮಾಡಿದರು. ಕರ್ನಾಟಕದ ರಾಜ್ಯಪಾಲರು ಹಾಗೂ ವಿಶ್ವವಿದ್ಯಾನಿಲಯದ ಕುಲಾಧಿಪತಿಗಳಾಗಿರುವ ಥಾವರ್ ಚಂದ್ ಗೆಹ್ಲೋಟ್ ಈ ಘಟಿಕೋತ್ಸವದ ಅಧ್ಯಕ್ಷತೆ ವಹಿಸಿ ಎಲ್ಲಾ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿದರು. ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಈ ಘಟಿಕೋತ್ಸವದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ 155 ಮಂದಿಗೆ ಪಿಹೆಚ್.ಡಿ ಡಾಕ್ಟರೇಟ್ ಪದವಿ(ಕಲೆ -51, ವಿಜ್ಞಾನ -73. ವಾಣಿಜ್ಯ-26, ಶಿಕ್ಷಣ -05) ಪ್ರದಾನ ಮಾಡಲಾಯಿತು. ಇವರಲ್ಲಿ ಅಫ್ಘಾನಿಸ್ತಾನದ 6, ತಾಂಜೇನಿಯಾದ 2, ನೈಜಿರಿಯಾದ 1, ಇಥಿಯೋಪಿಯದ 9, ಕ್ರುವೆಶಿಯದ 1, ಇರಾಕ್ ಮೂರು ವಿದ್ಯಾರ್ಥಿಗಳು ಪದವಿ ಪ್ರಮಾಣ ಸ್ವೀಕರಿಸಿದರು. 58 ಚಿನ್ನದ ಪದಕ ಮತ್ತು 57 ನಗದು ಬಹುಮಾನಗಳಿದ್ದು, ವಿವಿಧ ಕೋರ್ಸ್​ಗಳ ಒಟ್ಟು 168 ರ‍್ಯಾಂಕ್​ಗಳಲ್ಲಿ ಪ್ರಥಮ ರ‍್ಯಾಂಕ್​ ಪಡೆದ 72 ಮಂದಿಗೆ ರ‍್ಯಾಂಕ್ ಪ್ರಮಾಣ ಪತ್ರ ನೀಡಲಾಯಿತು.

ಮಂಗಳೂರು ವಿಶ್ವವಿದ್ಯಾನಿಲಯವು 2022-23ನೇ ಸಾಲಿನಲ್ಲಿ ನಡೆಸಿದ ವಿವಿಧ ಪರೀಕ್ಷೆಗಳಲ್ಲಿ ಒಟ್ಟು 29,465 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು 21,319 (72.35%) ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಅದರಲ್ಲಿ ಸ್ನಾತಕೋತ್ತರ ಪದವಿ ಪರೀಕ್ಷೆಗೆ 3,277 ವಿದ್ಯಾರ್ಥಿಗಳು ಹಾಜರಾಗಿದ್ದು 3,094 (94.42%) ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಪದವಿ ಪರೀಕ್ಷೆಗೆ 26,188 ವಿದ್ಯಾರ್ಥಿಗಳು ಹಾಜರಾಗಿದ್ದು 18,225 (69.59) ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ಸ್ನಾತಕೋತ್ತರ ಪದವಿಯಲ್ಲಿ ಉತ್ತೀರ್ಣರಾದ 3,094 ವಿದ್ಯಾರ್ಥಿಗಳಲ್ಲಿ 839(27.10%) ಹುಡುಗರು ಮತ್ತು 2255 (72.90%) ಹುಡುಗಿಯರು. ಪದವಿ ಪರೀಕ್ಷೆಯಲ್ಲಿ 18,225 ವಿದ್ಯಾರ್ಥಿಗಳಲ್ಲಿ 6,639(36.50%) ಹುಡುಗರು ಮತ್ತು 11,586(63.60%) ಹುಡುಗಿಯರು. ವಿವಿಧ ಪರೀಕ್ಷೆಗಳಲ್ಲಿ ಉತ್ತೀರ್ಣರಾದ 21,319 ವಿದ್ಯಾರ್ಥಿಗಳಲ್ಲಿ 8,097(382) ಹುಡುಗರು (ಶೇಕಡಾವಾರು ಉತ್ತೀರ್ಣರಾದ ಹುಡುಗರು 65.20%) ಮತ್ತು 13,841(65%) ಹುಡುಗಿಯರು (ಶೇಕಡಾವಾರು ಉತ್ತೀರ್ಣರಾದ ಹುಡುಗಿಯರು 81.30%) ಆಗಿದ್ದಾರೆ.

ಅಂಧ ವಿದ್ಯಾರ್ಥಿಯ ಸಾಧನೆ: ಬಿಎ ಯಲ್ಲಿ ಅಧೀಶ್ ಎಂಬ ಅಂಧ ವಿದ್ಯಾರ್ಥಿ ರ‍್ಯಾಂಕ್ ಪಡೆದು ಸಾಧನೆ ಮಾಡಿದ್ದಾರೆ. ಇವರು ಸಹಾಯಕರೊಂದಿಗೆ ವೇದಿಕೆಗೆ ಬಂದು ಪದವಿ ಪ್ರಮಾಣಪತ್ರ ಸ್ವೀಕರಿಸಿದರು. ಬಳಿಕ ಮಾತನಾಡಿದ ಅವರು, ಲ್ಯಾಪ್​ಟಾಪ್ ನಲ್ಲಿ ಸಾಫ್ಟ್​ವೇರ್ ಬಳಸಿ ಅಧ್ಯಯನ ಮಾಡಿದೆ. ಉಪನ್ಯಾಸಕರು ಸಹಕಾರ ನೀಡಿದರು. ನನ್ನ ಸಾಧನೆಗೆ ಎಲ್ಲರ ಸಹಕಾರ ಸಿಕ್ಕಿದೆ ಎಂದರು.

ಇಂಡಸ್ಟ್ರಿ ಕೆಮೆಸ್ಟ್ರಿಯಲ್ಲಿ ಸ್ನಾತಕೋತ್ತರ ಪದವಿ ಪಡೆದ ಭಾಗ್ಯಲಕ್ಷ್ಮಿ ಮಾತನಾಡಿ, ನನಗೆ ಮೊದಲ ರ‍್ಯಾಂಕ್ ಮತ್ತು ಮೂರು ಗೋಲ್ಡ್ ಮೆಡಲ್ ಸಿಕ್ಕಿದೆ. ನನ್ನ ಸಾಧನೆಗೆ ಉಪನ್ಯಾಸಕರು, ಪೋಷಕರು ಸಪೋರ್ಟ್ ಮಾಡಿದರು ಎಂದು ಹೇಳಿದರು.

ಇದನ್ನೂ ಓದಿ: ಮಂಗಳೂರು ವಿವಿಯಲ್ಲಿ ಆರ್ಥಿಕ ಸಮಸ್ಯೆ, ಘಟಕ ಕಾಲೇಜು ಮುನ್ನಡೆಸಲು ತೊಂದರೆ: ಕುಲಪತಿ ಡಾ.ಪಿ.ಎಲ್.ಧರ್ಮ - Mangaluru University

ETV Bharat Logo

Copyright © 2024 Ushodaya Enterprises Pvt. Ltd., All Rights Reserved.