ETV Bharat / state

ಆನ್​ಲೈನ್​ ಷೇರು ಮಾರುಕಟ್ಟೆ ಹೂಡಿಕೆ ಆಮಿಷ: ಮಂಗಳೂರಿನ ವ್ಯಕ್ತಿಗೆ 1.50 ಕೋಟಿ ವಂಚನೆ - Online Stock Market Fraud - ONLINE STOCK MARKET FRAUD

ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಆಮಿಷ ತೋರಿಸಿ ವ್ಯಕ್ತಿಯೊಬ್ಬರಿಗೆ ಬರೋಬ್ಬರಿ 1.50 ಕೋಟಿ ರೂ. ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.

online fraud
ಸಾಂದರ್ಭಿಕ ಚಿತ್ರ (ETV Bharat)
author img

By ETV Bharat Karnataka Team

Published : Jul 20, 2024, 7:22 PM IST

ಮಂಗಳೂರು: ಆನ್‌ಲೈನ್ ಮೂಲಕ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದಾಗಿ ನಂಬಿಸಿ, ಮಂಗಳೂರು ನಗರದ ನಿವಾಸಿಯೊಬ್ಬರಿಂದ 1.50 ಕೋಟಿ ರೂ. ಪಡೆದು ವಂಚಿಸಿರುವ ಪ್ರಕರಣ ನಡೆದಿದೆ.

ದೂರುದಾರರು ಫೇಸ್‌ಬುಕ್ ಬಳಸುತ್ತಿದ್ದಾಗ "Jefferies wealth multiplication Plan' ಎಂಬ ಪೋಸ್ಟ್ ನೋಡಿ, ಅದರಲ್ಲಿನ ಪ್ರಶ್ನೆಗಳಿಗೆ ಉತ್ತರಿಸಿ, ಮೊಬೈಲ್ ಸಂಖ್ಯೆ ನಮೂದಿಸಿದ್ದರು. ಮೇ 3ರಂದು ಅಪರಿಚಿತ ವ್ಯಕ್ತಿಯೊಬ್ಬ ದೂರುದಾರರನ್ನು "Jefferies wealth multiplication center-223' ಗ್ರೂಪ್​ಗೆ ಸೇರ್ಪಡೆಗೊಳಿಸಿದ್ದ. ಆ ಗ್ರೂಪ್‌ನಲ್ಲಿದ್ದ ಇತರ ಸದಸ್ಯರು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ ಲಾಭ ಬಂದಿರುವುದಾಗಿ ಸ್ಟೀನ್‌ಶಾಟ್‌ಗಳನ್ನು ಹಾಕುತ್ತಿದ್ದರು. ಇದನ್ನು ನೋಡಿ ನಂಬಿದ ದೂರುದಾರರು, ಪ್ರೇರಿತಗೊಂಡು ಹೂಡಿಕೆ ಮಾಡಲು ಮುಂದಾಗಿದ್ದಾರೆ. ಗ್ರೂಪ್‌ನ ಅಡ್ಮಿನ್ ಆಗಿದ್ದ ಅಪರಿಚಿತ ವ್ಯಕ್ತಿ ಜೂಲಿಯಾ ಸ್ಟನ್ ಎಂಬವರು ಸೈಟ್‌ನ ಲಿಂಕ್ ಅನ್ನು ದೂರುದಾರರಿಗೆ ವಾಟ್ಸ್ ಆ್ಯಪ್ ಮೂಲಕ ಕಳುಹಿಸಿದ್ದರು ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಅನಂತರ ಅವರು ತಿಳಿಸಿರುವಂತೆ ದೂರುದಾರರು ಷೇರು ಮಾರ್ಕೆಟ್‌ಗೆ ಸಂಬಂಧಿಸಿದಂತೆ ಖಾತೆಯೊಂದನ್ನು ತೆರೆದಿದ್ದರು. ಷೇರುಗಳನ್ನು ಖರೀದಿಸಿ ಲಾಭ ಗಳಿಸುವ ಇರಾದೆಯಿಂದ ಮೇ 28ರಿಂದ ಜೂನ್​ 28ರ ವರೆಗೆ ಹಂತ - ಹಂತವಾಗಿ 73 ಲಕ್ಷ ರೂ. ಹಾಗೂ 77 ಲಕ್ಷ ರೂ. ಸೇರಿದಂತೆ ಒಟ್ಟು 1.50 ಕೋಟಿ ರೂ.ಗಳನ್ನು ಅಪರಿಚಿತ ವ್ಯಕ್ತಿ ನೀಡಿದ ಹಲವು ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿದ್ದಾರೆ. ಕೆಲವು ದಿನಗಳ ಬಳಿಕ ತಾನು ಹೂಡಿಕೆ ಮಾಡಿದ ಹಣವನ್ನು ಹಿಂಪಡೆಯಲು ಮುಂದಾದಾಗ ವಿಥ್ ಡ್ರಾ ಮಾಡಲು ಸಾಧ್ಯವಾಗಿಲ್ಲ ಎಂದು ದೂರಿನಲ್ಲಿ ವಿವರಿಸಿದ್ದಾರೆ.

ಇದನ್ನೂ ಓದಿ: ರೆಸ್ಟೋರೆಂಟ್​ಗೆ 5 ಸ್ಟಾರ್ ರಿವ್ಯೂ ನೀಡುವ ಪಾರ್ಟ್ ಟೈಂ ಜಾಬ್ ಆಮಿಷ: ಲಕ್ಷಾಂತರ ವಂಚನೆ - Online Fraud Case

ಆಗ ಚೀಫ್ ಅಡ್ಡಿನ್‌ನನ್ನು ವಾಟ್ಸ್ಆ್ಯಪ್ ಕರೆಯ ಮೂಲಕ ಸಂಪರ್ಕಿಸಿದಾಗ ಪ್ರತಿಕ್ರಿಯೆ ನೀಡಲಿಲ್ಲ. ಇದರಿಂದ ತಾನು ಮೋಸ ಹೋಗಿರುವುದು ಗೊತ್ತಾಗಿದೆ ಎಂದು ವ್ಯಕ್ತಿಯು (ದೂರುದಾರ) ಜುಲೈ 5ರಂದು ಎನ್‌ಸಿಸಿಆರ್​​ಪಿಗೆ (ನ್ಯಾಷನಲ್ ಸೈಬರ್ ಕೈಂ ರಿಪೋರ್ಟಿಂಗ್ ಪೋರ್ಟಲ್) ದೂರು ನೀಡಿದ್ದಾರೆ. ಅದರಂತೆ, ಮಂಗಳೂರು ನಗರ ಸೈಬರ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ಕೈಗೊಂಡಿದ್ದಾರೆ.

ಇದನ್ನೂ ಓದಿ: ಉಡುಪಿ: ಪಾರ್ಟ್ ಟೈಮ್ ಜಾಬ್​ ಹೆಸರಿನಲ್ಲಿ ಯುವತಿಗೆ ₹2 ಲಕ್ಷ ವಂಚನೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.