ETV Bharat / state

ವೃತ್ತಿಯಲ್ಲಿ ವೈದ್ಯರಾದರೂ ಅಂತಾರಾಷ್ಟ್ರೀಯ ಸೌಂದರ್ಯ ಸ್ಪರ್ಧೆಗೆ ಆಯ್ಕೆಯಾದ ಮಂಗಳೂರಿನ ಚೆಲುವೆಯರು! - doctors select beauty pageant - DOCTORS SELECT BEAUTY PAGEANT

ಫಿಲಿಪ್ಪಿನ್ಸ್​​ನಲ್ಲಿ ಈ ವರ್ಷಾಂತ್ಯ ನಡೆಯುವ ಸೌಂದರ್ಯ ಸ್ಪರ್ಧೆಯಲ್ಲಿ ಮಂಗಳೂರಿನ ಇಬ್ಬರು ವೈದ್ಯ ಚೆಲುವೆಯರು ಆಯ್ಕೆಯಾಗಿದ್ದಾರೆ.

ಸೌಂದರ್ಯ ಸ್ಪರ್ಧೆಗೆ ಆಯ್ಕೆಯಾದ ಮಂಗಳೂರಿನ ಚೆಲುವೆಯರು
ಸೌಂದರ್ಯ ಸ್ಪರ್ಧೆಗೆ ಆಯ್ಕೆಯಾದ ಮಂಗಳೂರಿನ ಚೆಲುವೆಯರು (ETV Bharat)
author img

By ETV Bharat Karnataka Team

Published : Sep 4, 2024, 8:21 PM IST

Updated : Sep 4, 2024, 10:36 PM IST

ಅಂತಾರಾಷ್ಟ್ರೀಯ ಸೌಂದರ್ಯ ಸ್ಪರ್ಧೆಗೆ ಆಯ್ಕೆಯಾದ ಮಂಗಳೂರಿನ ಚೆಲುವೆಯರು (ETV Bharat)

ಮಂಗಳೂರು: ವಿಶ್ವ ಸೌಂದರ್ಯ ಸ್ಪರ್ಧೆಯಲ್ಲಿ ಕರಾವಳಿ ಬೆಡಗಿಯರ ಸ್ಪರ್ಧೆ ಸಾಮಾನ್ಯ. ಬಾಲಿವುಡ್​​ ನಟಿ ಐಶ್ವರ್ಯ ರೈ ಸೇರಿದಂತೆ ಹಲವು ಚೆಲುವೆಯರು ವಿಶ್ವ ಮಟ್ಟದಲ್ಲಿ ಹೆಸರುಗಳಿಸಿದ್ದಾರೆ. ಆದರೆ, ಮಿಸೆಸ್ ವಿಭಾಗದಲ್ಲಿ ಸ್ಪರ್ಧಿಸಿರಲಿಲ್ಲ. ಇದೇ ಮೊದಲ ಬಾರಿಗೆ ಇಬ್ಬರು ಅಂತಾರಾಷ್ಟ್ರೀಯ ಸೌಂದರ್ಯ‌ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.

ಡಾ.ನಿಶಿತಾ ಶೆಟ್ಟಿಯಾನ್ ಫೆರ್ನಾಂಡೀಸ್ ಮತ್ತು ಡಾ.ಶ್ರುತಿ ಬಲ್ಲಾಳ್ ಆಯ್ಕೆಯಾದ ಸುಂದರಿಯರು. ಈಚೆಗೆ ಬೆಂಗಳೂರಿನ ಕಿಂಗ್ಸ್‌ ಮೆಡೋಸ್‌ನಲ್ಲಿ ನಡೆದ ಮಿಸ್ ಆ್ಯಂಡ್ ಮಿಸೆಸ್ ಇಂಡಿಯಾದ 8ನೇ ಆವೃತ್ತಿಯ ಫ್ಯಾಷನ್‌ ಶೋ ಕಿರೀಟವನ್ನು ಮುಡಿಗೇರಿಸಿಕೊಂಡು, ಅಂತಾರಾಷ್ಟ್ರೀಯ ಸೌಂದರ್ಯ‌ ಸ್ಪರ್ಧೆಗೆ ಅರ್ಹತೆ ಪಡೆದುಕೊಂಡಿದ್ದಾರೆ. ಇಂಡಿಪೆಂಡೆಂಟ್ ಇಂಡಿಯಾ ಇಂಟರ್ ನ್ಯಾಷನಲ್​ ವಿಭಾಗದಲ್ಲಿ ಡಾ.ನಿಶಿತಾ ಶೆಟ್ಟಿಯಾನ್ ಫೆರ್ನಾಂಡೀಸ್, ಅರ್ಥ್ ಇಂಡಿಯಾ ಇಂಟರ್​ನ್ಯಾಷನಲ್​​ ವಿಭಾಗದಲ್ಲಿ ಡಾ.ಶ್ರುತಿ ಬಲ್ಲಾಳ್ ಅವರು ವಿಜೇತರಾಗಿದ್ದಾರೆ. ರಾಜ್ಯದ ನಾನಾ ಭಾಗಗಳಿಂದ ಸುಮಾರು 35 ಸ್ಪರ್ಧಿಗಳು ಈ ಫ್ಯಾಷನ್‌ ಶೋದಲ್ಲಿ ಪಾಲ್ಗೊಂಡಿದ್ದರು.

ಈ ಚೆಲುವೆಯರು ವೃತ್ತಿಯಲ್ಲಿ ವೈದ್ಯರು: ಅಂತಾರಾಷ್ಟ್ರೀಯ ಸೌಂದರ್ಯ ಸ್ಪರ್ಧೆಗೆ ಆಯ್ಕೆಯಾದ ಇಬ್ಬರೂ ವೃತ್ತಿಯಲ್ಲಿ ವೈದ್ಯರಾಗಿದ್ದಾರೆ. ನಿಶಿತಾ ಶೆಟ್ಟಿಯಾನ್ ಫೆರ್ನಾಂಡೀಸ್ ಮಂಗಳೂರಿನಲ್ಲಿ ಹೆರಿಗೆ ತಜ್ಞೆಯಾಗಿದ್ದಾರೆ. ವಿವಾಹಿತರಾಗಿರುವ ಇವರಿಗೆ ಇಬ್ಬರು ಮಕ್ಕಳಿದ್ದಾರೆ. ಮಾಡೆಲಿಂಗ್​​ನಲ್ಲಿ ಆಸಕ್ತಿ ಹೊಂದಿರುವ ನಿಶಿತಾ ಮಂಗಳೂರಿನಲ್ಲಿ ನಡೆದ ಮೊದಲ ವೈದ್ಯರ ಫ್ಯಾಷನ್ ಶೋನಲ್ಲಿ ಭಾಗವಹಿಸಿ ವಿಜೇತರಾಗಿದ್ದರು. ಆ ಬಳಿಕ ನಿರಂತರವಾಗಿ ಸೌಂದರ್ಯ ಸ್ಪರ್ಧೆಗಳಲ್ಲಿ ಭಾಗಿಯಾಗಿದ್ದಾರೆ.

ಇನ್ನೂ, ಡಾ.ಶ್ರುತಿ ಬಲ್ಲಾಳ್​ ಅವರೂ ವಿವಾಹಿತರಾಗಿದ್ದು, ಇಬ್ಬರು ಮಕ್ಕಳ ತಾಯಿ. ಮಧುಮೇಹ ತಜ್ಞೆಯಾಗಿರುವ ಇವರು ಉಡುಪಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ವೈದ್ಯ ಕುಟುಂಬದ ಶ್ರುತಿ ಮಾಡೆಲಿಂಗ್​​ನಲ್ಲಿ ತೊಡಗಿಸಿಕೊಂಡಿದ್ದು, ಮಿಸೆಸ್ ಇಂಡಿಯಾ ಅರ್ಥ್ ಇಂಟರ್​​ನ್ಯಾಷನಲ್, ಮಿಸೆಸ್ ಇಂಡಿಯಾ ಕರ್ನಾಟಕ ವಿವಾಸಿಯಸ್, ಮಿಸೆಸ್ ಇಂಡಿಯಾ ಕರ್ನಾಟಕ ಇನೊವೇಟಿವ್ ಫರ್ಪಾಮರ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ.

ನವೆಂಬರ್​​ನಲ್ಲಿ ಫಿಲಿಫೈನ್ಸ್​​ನಲ್ಲಿ ನಡೆಯುವ ಇಂಡಿಪೆಂಡೆಂಟ್ ಇಂಟರ್​ನ್ಯಾಷನಲ್ ಸ್ಪರ್ಧೆಯಲ್ಲಿ ಡಾ.ನಿಶಿತಾ ಶೆಟ್ಟಿಯಾನ್ ಫೆರ್ನಾಂಡೀಸ್ ಪಾಲ್ಗೊಂಡರೆ, ಡಿಸೆಂಬರ್​ನಲ್ಲಿ ಅಲ್ಲಿಯೇ ನಡೆಯುವ ಅರ್ಥ್ ಇಂಟರ್​ನ್ಯಾಷನಲ್ ಸ್ಪರ್ಧೆಯಲ್ಲಿ ಡಾ.ಶ್ರುತಿ ಬಲ್ಲಾಳ್ ಭಾಗವಹಿಸಲಿದ್ದಾರೆ.

ದೇಶ ಪ್ರತಿನಿಧಿಸುವುದು ಸಂತಸದ ವಿಚಾರ: ಸೌಂದರ್ಯ ಸ್ಪರ್ಧೆಗೆ ಆಯ್ಕೆಯಾದ ಬಗ್ಗೆ ಸಂತಸದ ಹಂಚಿಕೊಂಡ ಡಾ.ಶ್ರುತಿ ಬಲ್ಲಾಳ್, ನನಗೆ ಸಣ್ಣ ವಯಸ್ಸಿನಿಂದಲೂ ಫ್ಯಾಷನ್ ಲೋಕಕ್ಕೆ ಬರಬೇಕು ಎಂಬ ಆಸೆಯಿತ್ತು. ಮದುವೆಯ ಬಳಿಕವೂ ಬೆಂಬಲ ಸಿಕ್ಕ ಕಾರಣ, ಹಲವು ಸ್ಪರ್ಧೆಗಳಲ್ಲಿ ಭಾಗವಹಿಸಿದ್ದೇನೆ. ಸೌಂದರ್ಯ ಸ್ಪರ್ಧೆಯಲ್ಲಿ ಪ್ರತಿಭೆ, ನಡಿಗೆ, ಮಾತು ಮುಖ್ಯ. ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸುವ ಅವಕಾಶ ಸಿಕ್ಕಿದ್ದು ಸಂತಸ ತಂದಿದೆ ಎಂದರು.

ಡಾ.ನಿಶಿತಾ ಶೆಟ್ಟಿಯಾನ್ ಫೆರ್ನಾಂಡೀಸ್ ಮಾತನಾಡಿ, ಅಂತಾರಾಷ್ಟ್ರೀಯ ಸ್ಪರ್ಧೆಗೆ ಆಯ್ಕೆಯಾಗಿ ದೇಶವನ್ನು ಪ್ರತಿನಿಧಿಸುತ್ತಿರುವುದು ಖುಷಿಯ ವಿಚಾರ. ವೈದ್ಯಕೀಯ ವೃತ್ತಿ, ಕುಟುಂಬದ ನಿರ್ವಹಣೆಯ ಜೊತೆಗೆ ಮಾಡೆಲಿಂಗ್​ಗೆ ಸಮಯ ಹೊಂದಿಸುವುದು ಕಷ್ಟ. ತಡ ರಾತ್ರಿಯಲ್ಲಿ ಅಭ್ಯಾಸ ಮಾಡಿ ಈ ಹಂತ ತಲುಪಿದ್ದೇನೆ ಎಂದು ತಿಳಿಸಿದರು.

ಪಾಥ್ ವೆ ಎಂಟರ್ ಪ್ರೈಸಸ್​ನ ದೀಪಕ್ ಗಂಗೂಲಿ ಮಾತನಾಡಿ, 5 ವರ್ಷದಿಂದ ಮಿಸೆಸ್ ಇಂಡಿಯಾ ಮಂಗಳೂರು ಸ್ಪರ್ಧೆ ಮಾಡುತ್ತಿದ್ದೇವೆ. ಈ ವರ್ಷ ಮೊದಲ ಬಾರಿಗೆ ಮಂಗಳೂರಿನಿಂದ ಇಬ್ಬರು ಅಂತಾರಾಷ್ಟ್ರೀಯ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಈ ಇಬ್ಬರು ವೈದ್ಯರು ಸ್ಪರ್ಧೆಯಲ್ಲಿ ಗೆಲ್ಲುವ ನಿರೀಕ್ಷೆ ಮೂಡಿಸಿದ್ದಾರೆ ಎಂದರು.

ಇದನ್ನೂ ಓದಿ: 'ಮಿಸ್​ ಅರ್ಥ್​ ಇಂಡಿಯಾ' ಕಿರೀಟ ಮುಡಿಗೇರಿಸಿಕೊಂಡ ರಾಜಸ್ಥಾನದ ಪ್ರಿಯಾನ್ ಸೈನ್

Last Updated : Sep 4, 2024, 10:36 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.