ETV Bharat / state

ಮಂಗಳೂರು ಮನೆ ದರೋಡೆ ಪ್ರಕರಣ: ಕಾರು ಬಿಟ್ಟು ಬಸ್​ ಹತ್ತಿದ್ದ ಚಡ್ಡಿ ಗ್ಯಾಂಗ್ 5 ಗಂಟೆಯಲ್ಲೇ ಅಂದರ್! - Mangaluru house robbery - MANGALURU HOUSE ROBBERY

ಮಂಗಳೂರಿನ ಉರ್ವಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಂಪತಿ ಕೂಡಿ ಹಾಕಿ ಮನೆ ದರೋಡೆ ಹಾಗೂ ಕಾರು ದೋಚಿದ್ದ ಮಧ್ಯಪ್ರದೇಶ ಮೂಲದ ಚಡ್ಡಿ ಗ್ಯಾಂಗ್​ನ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.

ಮಂಗಳೂರು ಮನೆ ದರೋಡೆ ಪ್ರಕರಣದ ಆರೋಪಿಗಳ ಬಂಧನ
ಮಂಗಳೂರು ಮನೆ ದರೋಡೆ ಪ್ರಕರಣದ ಆರೋಪಿಗಳ ಬಂಧನ (ETV Bharat)
author img

By ETV Bharat Karnataka Team

Published : Jul 9, 2024, 10:22 PM IST

ಮಂಗಳೂರು: ನಗರದಲ್ಲಿ ನಡೆದ ದರೋಡೆ ಪ್ರಕರಣದ ಚಡ್ಡಿ ಗ್ಯಾಂಗ್​ನ ಆರೋಪಿಗಳನ್ನು ಘಟನೆ ನಡೆದ ಐದೇ ಗಂಟೆಯಲ್ಲಿ ಪೊಲೀಸರು ಸಿನಿಮೀಯ ರೀತಿಯಲ್ಲಿ ಬಂಧಿಸಿದ್ದಾರೆ. ಮಧ್ಯಪ್ರದೇಶ ಮೂಲದ ರಾಜು ಸಿಂಗ್ವಾನಿಯ, ವಿಕ್ಕಿ, ಮಯೂರ್, ಬಾಲಿ ಎಂಬುವರೇ ಬಂಧಿತರು.

ಉರ್ವಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂದು ಬೆಳಗಿನ ಜಾವ ಸಮಯ ಸುಮಾರು 4 ಗಂಟೆಗೆ ಬರ್ಮುಡಾ ಚಡ್ಡಿ ಮತ್ತು ಬನಿಯನ್ ಧರಿಸಿದ್ದ ಸುಮಾರು 30 ರಿಂದ 40 ವರ್ಷ ಪ್ರಾಯದ 4 ಜನ ಚಡ್ಡಿ ಗ್ಯಾಂಗ್​ ದೇರೆಬೈಲು ಗ್ರಾಮದ ವಿಕ್ಟರ್ ಮೆಂಡೋನ್ಸಾ ಎಂಬುವರ ಮನೆಯ ಕಿಟಕಿಯ ಗ್ರಿಲ್​ ತುಂಡರಿಸಿ ಒಳ ಪ್ರವೇಶಿಸಿತ್ತು. ಮೆಂಡೋನ್ಸಾ ಹಾಗೂ ಪತ್ನಿ ಪ್ಯಾಟ್ರಿಸಿಯಾ ಅವರಿಗೆ ಮೇಲೆ ಹಲ್ಲೆ ಮಾಡಿ, ಇವರ 3 ಮೊಬೈಲ್ ಫೋನ್​ಗಳನ್ನು ಜಖಂಗೊಳಿಸಲಾಗಿತ್ತು. ಆ ಬಳಿಕ ಕಪಾಟಿನ ಲಾಕರ್​ನಲ್ಲಿ ಇರಿಸಿದ್ದ ಸುಮಾರು 12 ಲಕ್ಷ ರೂ ಮೌಲ್ಯದ ಚಿನ್ನ ಮತ್ತು ವಜ್ರದ ಆಭರಣ, ಮೊಬೈಲ್ ಫೋನ್ ಮತ್ತು 1 ಲಕ್ಷ ರೂ. ಮೌಲ್ಯದ 10 ಬ್ರಾಂಡೆಡ್ ವಾಚ್​ಗಳು, 3000 ರೂ. ನಗದು ಹಣವನ್ನು ಸುಲಿಗೆ ಮಾಡಿದ್ದರು. ಬಳಿಕ ಈ ಮನೆಯ ವೆರಾಂಡದಲ್ಲಿದ್ದ ಕಾರಿನ ಸಮೇತ ಪರಾರಿಯಾಗಿದ್ದರು.

ಈ ಕುರಿತು ಮೆಂಡೊನ್ಸಾ 7 ಗಂಟೆ ಸುಮಾರಿಗೆ ಉರ್ವಾ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ದೂರು ಬಂದ ಕೂಡಲೇ ಪೊಲೀಸರು ಕಾರ್ಯಪ್ರವೃತರಾಗಿ ಸ್ಥಳಕ್ಕೆ ಭೇಟಿ ಕೊಟ್ಟಿದ್ದರು. ಆರೋಪಿಗಳು ಕಾರಿನೊಂದಿಗೆ ಪರಾರಿಯಾಗಿದ್ದ ಮಾಹಿತಿಯನ್ನು ನಗರ ನಿಸ್ತಂತು ಕೊಠಡಿಗೆ ನೀಡಿದ್ದಾರೆ. ಬಳಿಕ ಮುಲ್ಕಿ ಬಸ್​ ನಿಲ್ದಾಣದ ಸಮೀಪ ಕಾರನ್ನು ಪತ್ತೆ ಮಾಡಿ ವಶಕ್ಕೆ ಪಡೆಯಲಾಗಿತ್ತು. ನಂತರ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದಾಗ ಆರೋಪಿಗಳು ಸಾರಿಗೆ ಬಸ್​ನಲ್ಲಿ ಮಂಗಳೂರು ಕಡೆಗೆ ಪ್ರಯಾಣಿಸಿದ್ದು ಕೂಡಾ ಕಂಡು ಬಂತು.

ಅಂತೆಯೇ, ಕೆಎಸ್​ಆರ್​ಟಿಸಿ ಅಧಿಕಾರಿಗಳನ್ನು ಸಂಪರ್ಕಿಸಿ, ಮುಲ್ಕಿ ಕಡೆಯಿಂದ ಮಂಗಳೂರಿಗೆ ಬಂದ ಬಸ್​ಗಳ ಮಾಹಿತಿ ಪಡೆಯಲಾಗಿತ್ತು. ಬಾಗಲಕೋಟೆ ಕಡೆಯಿಂದ ಮಂಗಳೂರಿಗೆ ಬಂದ ಬಸ್​ವೊಂದರ​ ನಿರ್ವಾಹಕ, ಮಂಗಳೂರಿನಿಂದ ಬೆಂಗಳೂರಿಗೆ ಹೋದ ಬಸ್​ನಲ್ಲಿ 4 ಜನರು ಒಟ್ಟಿಗೆ ಪ್ರಯಾಣಿಸಿದ ಮಾಹಿತಿ ಕೊಟ್ಟಿದ್ದರು. ಇದರ ಮಾಹಿತಿಯಂತೆ ಹಾಸನ ಪೊಲೀಸರಿಗೆ ಮಾಹಿತಿ ರವಾನಿಸಿ ಸಕಲೇಶಪುರ ಸಮೀಪ ಈ ಬಸ್​ ನಿಲ್ಲಿಸಲಾಗಿತ್ತು. ಅದರಲ್ಲಿ ಪ್ರಯಾಣಿಸುತ್ತಿದ್ದ ನಾಲ್ವರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಾಗಿತ್ತು. ಆಗ ಆರೋಪಿಗಳು ಕೃತ್ಯವೆಸಗಿದ್ದನ್ನು ಒಪ್ಪಿಕೊಂಡಿದ್ದರು. ಅಲ್ಲದೇ, ಮನೆಯಲ್ಲಿ ದೋಚಿದ್ದ ಎಲ್ಲ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಈ ಮೂಲಕ ಹಾಸನ ಪೊಲೀಸರ ಸಹಕಾರದೊಂದಿಗೆ ಮಂಗಳೂರು ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ ಕೃತ್ಯ ನಡೆದ ಕೇವಲ 5 ಗಂಟೆಗಳ ಒಳಗೆ ನಡೆಸಿ ಆರೋಪಿಗಳನ್ನು ದರೋಡೆ ಪ್ರಕರಣವನ್ನು ಭೇದಿಸಿದ್ದಾರೆ.

ಇದನ್ನೂ ಓದಿ: ಮಂಗಳೂರಿನಲ್ಲಿ ಮತ್ತೆ ಮನೆ ದರೋಡೆ: ವೃದ್ಧರನ್ನು ಕೂಡಿಹಾಕಿ ಹಲ್ಲೆಗೈದು ಕಾರಿನೊಂದಿಗೆ ಪರಾರಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.