ETV Bharat / state

ಬೆಂಗಳೂರಿಗೆ ಹೋದರೂ ಸಂಬಳ ಕಮ್ಮಿ ಎಂದು ಹೆಂಡ್ತಿಯ ಕಿರಿಕ್: ಮನೆಗಳ್ಳತನಕ್ಕಿಳಿದು ಪೊಲೀಸರ ಅತಿಥಿಯಾದ ಗಂಡ - CRIME NEWS - CRIME NEWS

ಕೆಲಸ ಮಾಡುತ್ತಿದ್ದ ಮನೆಯಲ್ಲೇ ಕಳ್ಳತನ ಮಾಡಿದ್ದ ಆರೋಪಿಯನ್ನ ಮಹಾದೇವಪುರ ಠಾಣಾ ಪೊಲೀಸರು ಬಂಧಿಸಿದ್ದಾರೆ.

man-was-arrested-for-stealing-from-house-where-he-was-working-in-bengaluru
ಬೆಂಗಳೂರಿಗೆ ಹೋದರೂ ಸಂಬಳ ಕಮ್ಮಿ ಎಂದು ಹೆಂಡ್ತಿಯ ಕಿರಿಕ್: ಮನೆಗಳ್ಳತನಕ್ಕಿಳಿದು ಪೊಲೀಸರ ಅತಿಥಿಯಾದ ಗಂಡ
author img

By ETV Bharat Karnataka Team

Published : Apr 23, 2024, 7:58 PM IST

ಬೆಂಗಳೂರು: ಊರಿನಲ್ಲಿದ್ದ ಪತ್ನಿಯ ಕಾಟ ತಾಳಲಾರದೆ ಕೆಲಸ ಮಾಡುತ್ತಿದ್ದ ಮನೆಯಲ್ಲೇ ಕಳ್ಳತನ ಮಾಡಿದ್ದ ಆರೋಪಿಯನ್ನು ಮಹಾದೇವಪುರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಬಿಹಾರ ಮೂಲದ ಸುರೇಂದರ್ ಕುಮಾರ್ (29) ಬಂಧಿತ ಆರೋಪಿ.

ಕಳೆದ ಒಂದೂವರೆ ವರ್ಷದಿಂದ ದೊಡ್ಡನೆಕ್ಕುಂದಿ ಬಳಿ ಇರುವ ಜೊನಾಷ ಪ್ಯಾರಡಿಸೋ ವಿಲ್ಲಾದಲ್ಲಿರುವ ಮನೆಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದ ಆರೋಪಿಗೆ ಉಳಿದುಕೊಳ್ಳಲು ರೂಮ್ ಸಹ ನೀಡಲಾಗಿತ್ತು. ಬರುತ್ತಿದ್ದ 18 ಸಾವಿರ ರೂಪಾಯಿ ತಿಂಗಳ ಸಂಬಳದಲ್ಲಿ ಬಹುಪಾಲನ್ನ ಸುರೇಂದರ್ ಬಿಹಾರದಲ್ಲಿರುವ ತನ್ನ ಪತ್ನಿಗೆ ಕಳಿಸುತ್ತಿದ್ದ. ಆದರೆ, 'ಬೆಂಗಳೂರಿಗೆ ಹೋದರೂ ನೀನು ಇಷ್ಟೇ ಹಣ ಸಂಪಾದನೆ ಮಾಡೋದ?' ಅಂತಾ ಆತನ ಪತ್ನಿ ನಿತ್ಯ ಫೋನ್‌ನಲ್ಲಿ ಜಗಳವಾಡುತ್ತಿದ್ದಳು. ಅಲ್ಲದೆ, ಜಾಸ್ತಿ ಹಣ ಸಂಪಾದನೆ ಮಾಡು ಎಂದು ಕಾಟ ಕೊಡಲಾರಂಭಿಸಿದ್ದಳು. ಇದರಿಂದ ಬೇಸತ್ತಿದ್ದ ಆರೋಪಿ ಏಪ್ರಿಲ್ 12 ರಂದು ಕೆಲಸ ಮಾಡುತ್ತಿದ್ದ ಮನೆಯವರೆಲ್ಲಾ ಮುಂಬೈಗೆ ತೆರಳಿದ್ದಾಗ ಮನೆಯ ಬಾಗಿಲು ಮುರಿದು ಒಳ ನುಗ್ಗಿ ಚಿನ್ನಾಭರಣ ಹಾಗೂ ವಜ್ರದ ಒಡವೆಗಳನ್ನ ಕದ್ದು ಪರಾರಿಯಾಗಿದ್ದ. ಮೂರು ದಿನಗಳ ಬಳಿಕ ಮನೆಯವರು ವಾಪಸ್ ಬಂದಾಗ ಕಳ್ಳತನದ ವಿಚಾರ ಬಯಲಾಗಿತ್ತು.

ಮನೆಗಳ್ಳತನಕ್ಕಿಳಿದು ಪೊಲೀಸರ ಅತಿಥಿಯಾದ ಗಂಡ
ಮನೆಗಳ್ಳತನಕ್ಕಿಳಿದು ಪೊಲೀಸರ ಅತಿಥಿಯಾದ ಗಂಡ

ಮನೆ ಮಾಲೀಕರು ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡ ಮಹಾದೇವಪುರ ಠಾಣಾ ಪೊಲೀಸರು ಆರೋಪಿಯ ವಿಳಾಸ ಪಡೆದು ಬಿಹಾರಕ್ಕೆ ತೆರಳಿದ್ದರು. ಆದರೆ ಆತ ಆಂಧ್ರಪ್ರದೇಶದಲ್ಲಿ ಕೆಲಸಕ್ಕೆಂದು ತೆರಳಿರುವುದು ತಿಳಿದು ಬಂದಿತ್ತು. ಬಳಿಕ ಆಂಧ್ರಪ್ರದೇಶಕ್ಕೆ ತೆರಳಿ ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತನಿಂದ 50 ಲಕ್ಷ ಮೌಲ್ಯದ 502 ಗ್ರಾಂ ಚಿನ್ನಾಭರಣ, 99.5 ಗ್ರಾಂ ವಜ್ರದ ಆಭರಣಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಮಹಿಳೆ ಹತ್ಯೆ ಕೇಸ್: ಓರ್ವ ಆರೋಪಿ ಪೊಲೀಸ್​ ಬಲೆಗೆ - Woman Murder Case

ETV Bharat Logo

Copyright © 2025 Ushodaya Enterprises Pvt. Ltd., All Rights Reserved.