ETV Bharat / state

ಕೌಟುಂಬಿಕ ಕಲಹ: ಪತ್ನಿ, ಮಾವ, ಅತ್ತೆ ಕೊಲೆ ಮಾಡಿದ ವ್ಯಕ್ತಿ - Triple Murder - TRIPLE MURDER

ಮೂವರ ಮೇಲೆ ಕಬ್ಬಿಣದ ರಾಡ್‌ನಿಂದ ಹಲ್ಲೆ ಮಾಡಿದ ವ್ಯಕ್ತಿಯೊಬ್ಬ, ಚಾಕಿವಿನಿಂದ ಇರಿದು ಭೀಕರವಾಗಿ ಕೊಲೆ ಮಾಡಿದ್ದಾನೆ.

TRIPLE MURDER
ಪರಿಶೀಲನೆಯಲ್ಲಿ ತೊಡಗಿರುವ ಪೊಲೀಸರು (ETV Bharat)
author img

By ETV Bharat Karnataka Team

Published : Jul 18, 2024, 7:53 PM IST

ಯಾದಗಿರಿ: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಅಳಿಯನೊಬ್ಬ ಪ್ರೀತಿಸಿ ಮದುವೆಯಾದ ತನ್ನ ಪತ್ನಿ, ಮಾವ ಮತ್ತು ಅತ್ತೆಯನ್ನು ಭೀಕರವಾಗಿ ಕೊಲೆ ಮಾಡಿದ ಘಟನೆ ಯಾದಗಿರಿ ತಾಲೂಕಿನ ಸೈದಾಪುರ ಬಳಿ ಗುರುವಾರ ನಡೆದಿದೆ. ಪತ್ನಿ ಅನ್ನಪೂರ್ಣ (25), ಅತ್ತೆ ಕವಿತಾ (45) ಹಾಗೂ ಮಾವ ಬಸವರಾಜಪ್ಪ (52) ಕೊಲೆಗೀಡಾದವರು. ಮೂವರು ದಾವಣಗೆರೆ ಮೂಲದವರಾಗಿದ್ದಾರೆ. ಮುನಗಲ್ ಗ್ರಾಮದ ನವೀನ್ (30) ಕೊಲೆ ಮಾಡಿದ ಆರೋಪಿ.

ಘಟನೆ ವಿವರ: ಕಳೆದ ನಾಲ್ಕು ವರ್ಷದ ಹಿಂದೆ ನವೀನ್ ದಾವಣಗೆರೆ ಮೂಲದ ಅನ್ನಪೂರ್ಣಾಳನ್ನು ಪ್ರೀತಿಸಿ ಮದುವೆಯಾಗಿದ್ದು, ಇವರಿಗೆ ಒಂದು ಹೆಣ್ಣು ಮಗು ಕೂಡ ಇದೆ. ಮಗುವಾದ ನಂತರ ಇಬ್ಬರ ನಡುವೆ ಹೊಂದಾಣಿಕೆ ಇರಲಿಲ್ಲ. ತನ್ನ ಗಂಡ ಸಣ್ಣ - ಸಣ್ಣ ವಿಚಾರಕ್ಕೂ ಜಗಳ ಮಾಡುತ್ತಾನೆ ಎಂದು ಪತ್ನಿ ಅನ್ನಪೂರ್ಣಾ ತನ್ನ ತವರುಮನೆ ದಾವಣೆಗೆರೆಗೆ ಬಂದಿದ್ದಳು. ತವರು ಮನೆಗೆ ಬಂದು ಒಂದು ವರ್ಷವಾದರೂ ಗಂಡನ ಮನೆಗೆ ಹೋಗಲು ಮನಸ್ಸು ಮಾಡಿರಲಿಲ್ಲ. ಇದರಿಂದ ಪತಿಗೆ ಸಿಟ್ಟು ಬಂದಿತ್ತು.

ಬುಧವಾರ ಹೆಂಡತಿಯ ತವರು ಮನೆಗೆ ಬಂದ ನವೀನ್, ಅನ್ನಪೂರ್ಣಳಾನ್ನು ನನ್ನೊಂದಿಗೆ ಕಳುಹಿಸಿಕೊಡಿ, ಹೊಂದಿಕೊಂಡು ಜೀವನ ಮಾಡುವುದಾಗಿ ಹೇಳಿದ್ದ. ಹಾಗಾಗಿ ಮಾವ ಬಸವರಾಜಪ್ಪ ಮನೆಯಲ್ಲಿಯೇ ರಾಜಿ, ಪಂಚಾಯಿತಿ ಮಾಡಿ ಕೆಲವು ಷರತ್ತುಗಳನ್ನು ವಿಧಿಸಿ ಮಗಳನ್ನು ಮನೆಗೆ ಕಳಿಸಿಕೊಡಲು ಒಪ್ಪಿಕೊಂಡಿದ್ದರು. ಮಗಳು ಅನ್ನಪೂರ್ಣ ಜೊತೆಗೆ ಅವಳ ತಂದೆ - ತಾಯಿ ಯಾದಗಿರಿಯಲ್ಲಿರುವ ಗಂಡನ ಮನೆಗೆ ಬಿಡಲು ಬಂದಿದ್ದರು. ಮತ್ತೆ ದಾವಣಗೆರೆಗೆ ತೆರಳಲು ಸಿದ್ದರಾಗಿದ್ದ ಅತ್ತೆ - ಮಾವನನ್ನು ಬಸ್ ನಿಲ್ದಾಣದವರೆಗೂ ಕಾರಿನಲ್ಲಿ ಬಿಡುವುದಾಗಿ ಪತ್ನಿ ಸಹಿತ ಮೂವರನ್ನು ಕಾರಿನಲ್ಲಿ ಕೂರಿಸಿಕೊಂಡು ಬರುತ್ತಿದ್ದ. ರಸ್ತೆ ಮಧ್ಯದಲ್ಲಿ ಕಾರು ನಿಲ್ಲಿಸಿದ ನವೀನ್, ಮೂವರ ಮೇಲೆ ಕಬ್ಬಿಣದ ರಾಡ್‌ನಿಂದ ಹಲ್ಲೆ ಮಾಡಿ, ಚಾಕಿವಿನಿಂದ ಇರಿದು ಭೀಕರವಾಗಿ ಕೊಲೆ ಮಾಡಿರುವುದಾಗಿ ಪೊಲೀಸರ ಪ್ರಾಥಮಿಕ ಮಾಹಿತಿಯಿಂದ ತಿಳಿದು ಬಂದಿದೆ.

ಕೊಲೆ ಬಳಿಕ ಮೂವರ ಮೃತದೇಹಗಳನ್ನು ವಡಗೇರ ತಾಲೂಕಿನ ಜೋಳದಡಗಿ ಗ್ರಾಮದ ಬಳಿ ಬೀಸಾಡಿ ಬಂದಿದ್ದಾನೆ. ಯಾದಗಿರಿಯ ಅನ್ನಪೂರ್ಣಾಳ ಶವವನ್ನ ಪತ್ತೆ ಮಾಡಿರುವ ಪೊಲೀಸರು, ಸೈದಾಪುರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲು ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: ಭಗ್ನ ಪ್ರೇಮಿಯಿಂದ ತ್ರಿವಳಿ ಕೊಲೆ! - Bihar Triple Murder

ETV Bharat Logo

Copyright © 2025 Ushodaya Enterprises Pvt. Ltd., All Rights Reserved.