ETV Bharat / state

ಹಾವೇರಿ: ಬಸ್​ನಲ್ಲಿ ಪ್ರಯಾಣಿಸುತ್ತಿದ್ದಾಗಲೇ ಹೃದಯಾಘಾತವಾಗಿ ಪ್ರಯಾಣಿಕ ಸಾವು - heart attack - HEART ATTACK

ಬಸ್​​​​​ನಲ್ಲಿ ಪ್ರಯಾಣಿಸುತ್ತಿದ್ದಾಗ ಹೃದಯಾಘಾತದಿಂದ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಹಾನಗಲ್ ತಾಲೂಕಿನ ಮಕರವಳ್ಳಿ ಗ್ರಾಮದ ಬಳಿ ನಡೆದಿದೆ.

man-died-after-heart-attack-in-bus-at-hanagal
ಬಸ್​ನಲ್ಲಿ ಪ್ರಯಾಣಿಸುತ್ತಿದ್ದಾಗಲೇ ಹೃದಯಾಘಾತ: ಪ್ರಯಾಣಿಕ ಸಾವು
author img

By ETV Bharat Karnataka Team

Published : Apr 18, 2024, 6:04 AM IST

ಹಾವೇರಿ: ಸರ್ಕಾರಿ ಬಸ್​ನಲ್ಲಿ ಪ್ರಯಾಣಿಸುತ್ತಿದ್ದಾಗಲೇ ಹೃದಯಾಘಾತದಿಂದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹಾನಗಲ್ ತಾಲೂಕಿನ ಮಕರವಳ್ಳಿ ಗ್ರಾಮದ ಬಳಿ ನಡೆದಿದೆ. ಅಕ್ಕಿ ಆಲೂರು ಗ್ರಾಮದ ಮಲ್ಲೇಶಪ್ಪ ಬೆಲ್ಲದ(49) ಮೃತರು. ಸರ್ಕಾರಿ ಬಸ್​ನಲ್ಲಿ ಆನವಟ್ಟಿಯಿಂದ ಹಾನಗಲ್​ಗೆ ತೆರಳುತ್ತಿದ್ದ ವೇಳೆ ಹೃದಯಾಘಾತವಾಗಿದೆ. ಹಾನಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಇದನ್ನೂ ಓದಿ: ಬಿಎಂಟಿಸಿ ಬಸ್​ನಲ್ಲಿ ಸಂಚರಿಸುತ್ತಿದ್ದ ಪ್ರಯಾಣಿಕ ಹೃದಯಾಘಾತದಿಂದ ಸಾವು - Heart Attack

ಇತ್ತೀಚಿಗೆ, ಸಾರಿಗೆ ಬಸ್​​​ನಲ್ಲಿ ಪ್ರಯಾಣಿಸುತ್ತಿದ್ದಾಗ ಹೃದಯಾಘಾತವಾಗಿ ಜೆಸ್ಕಾಂ ಗುತ್ತಿಗೆ ಸಿಬ್ಬಂದಿಯೊಬ್ಬರು ಮೃತಪಟ್ಟ ಘಟನೆ ಕಮಲಾಪುರ ಬಳಿ ನಡೆದಿತ್ತು. ಕಲಬುರಗಿ ನಗರದ ಬಿದ್ದಾಪುರ ಕಾಲೊನಿಯ ನಿವಾಸಿ, ಮೂಲತಃ ನಾಗನಹಳ್ಳಿಯವರಾದ ವಿಜಯಕುಮಾರ ಶಿವಶರಣಪ್ಪ (45) ಮೃತರು. ವಿಜಯಕುಮಾರ ಶಿವಶರಣಪ್ಪ ಜೆಸ್ಕಾಂನಲ್ಲಿ ಗುತ್ತಿಗೆ ಆಧಾರದಡಿ ಬಿಲ್ ಕಲೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಕಲಬುರಗಿಯಿಂದ ಭಾಲ್ಕಿಯಲ್ಲಿನ ತಮ್ಮ ಸಹೋದರಿ ಮನೆಗೆ ತೆರಳುತ್ತಿದ್ದರು. ಮುಗಳಖೋಡ- ಬೀದರ್ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದು, ಕಮಲಾಪುರ ಬಳಿ ಹೃದಯಾಘಾತವಾಗಿತ್ತು. ಅವರನ್ನು ತಕ್ಷಣ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಚಿಕಿತ್ಸೆಗೆ ಕರೆದೊಯ್ಯಲಾಗುತ್ತಿತ್ತು. ಆದರೆ ಮಾರ್ಗ ಮಧ್ಯೆ ಮೃತಪಟ್ಟಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.