ಬೀದರ್ : ಪತ್ನಿ ಮನೆ ಬಿಟ್ಟು ಹೋಗಿದ್ದರಿಂದ ಮನನೊಂದು ನೀರಿನ ಟ್ಯಾಂಕ್ಗೆ ಬಿದ್ದು, ಅಲೆಮಾರಿ ಜನಾಂಗದ ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೀದರ್ ತಾಲೂಕಿನ ಅಣದೂರು ಗ್ರಾಮದಲ್ಲಿ ಘಟನೆ ನಡೆದಿದೆ.
ನೀರಿನ ಟ್ಯಾಂಕಿಗೆ ಬಿದ್ದು ಅಲೆಮಾರಿ ಜನಾಂಗದ ರಾಜು (26) ಎನ್ನುವ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಳೆದ ಹತ್ತು ವರ್ಷದಿಂದ ಅಣದೂರಿನಲ್ಲಿ ಅಲೆಮಾರಿ ಜನಾಂಗ ವಾಸವಿತ್ತು. ಕಳೆದ ಐದು ಆರು ದಿನಗಳ ಹಿಂದೆ ಟ್ಯಾಂಕಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗುತ್ತಿದೆ. ಐದಾರು ದಿನಗಳಿಂದ ಗ್ರಾಮಸ್ಥರು ಕೂಡ ಅದೇ ನೀರನ್ನು ಕುಡಿಯುತ್ತಿದ್ದಾರೆ. ಕುಡಿಯುವ ನೀರು ವಾಸನೆ ಬಂದ ಹಿನ್ನೆಲೆ ಟ್ಯಾಂಕ್ ಪರಿಶೀಲನೆ ನಡೆಸಿದ್ದಾರೆ. ಟ್ಯಾಂಕ್ನಲ್ಲಿ ಶವ ಇರುವುದನ್ನು ನೋಡಿ ಹಣದೂರು ಗ್ರಾಮಸ್ಥರು ಶಾಕ್‌ಗೆ ಒಳಗಾಗಿದ್ದಾರೆ.
ಈ ಬಗ್ಗೆ ಗ್ರಾಮಸ್ಥರಾದ ರೇಷ್ಮಾ ಅವರು ಮಾತನಾಡಿ, 'ಈ ಅಲೆಮಾರಿ ಜನಾಂಗದ ಯುವಕ ರಾಜುನ ಹೆಂಡತಿ ಮನೆಬಿಟ್ಟು ಬೇರೆ ಕಡೆ ಹೋಗಿರುವ ಕಾರಣ, ಈ ಯುವಕ ಕುಡಿತದ ಚಟಕ್ಕೆ ಬಿದ್ದಿದ್ದ. ವಾರದ ಹಿಂದೆ ಕುಡಿದ ಮತ್ತಿನಲ್ಲಿ ರಾತ್ರಿ ವೇಳೆಯಲ್ಲಿ ಅಣದೂರು ಗ್ರಾಮದ ಟ್ಯಾಂಕ್ ಹತ್ತಿ ಅದರಲ್ಲಿ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
'ಯುವಕ ಮನೆಗೆ ಬಾರದ ಹಿನ್ನಲೆ ಕುಟುಂಬಸ್ಥರು ಹುಡುಕಾಡಿದ್ದಾರೆ. ಆದರೆ ಆತ ಸಿಕ್ಕಿರಲಿಲ್ಲ. ಎಲ್ಲೋ ಹೋಗಿರಬಹುದು ಬರಬಹುದು ಎಂದು ಸುಮ್ಮನಾಗಿದ್ದಾರೆ. ಆದರೆ, ಆ ಯುವಕ ಗ್ರಾಮಸ್ಥರು ಕುಡಿಯುವ ನೀರಿನ ಟ್ಯಾಂಕ್ನಲ್ಲಿ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಐದಾರು ದಿನದ ಬಳಿಕ ಯುವಕನ ಶವ ನೀರಿನ ಟ್ಯಾಂಕ್ನಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ' ಎಂದು ಅವರು ಹೇಳಿದ್ದಾರೆ.
ಈ ವಿಚಾರ ಗೊತ್ತಾಗುತ್ತಿದ್ದಂತೆ ಸ್ಥಳಕ್ಕೆ ಆರೋಗ್ಯ ಇಲಾಖೆಯ ಅಧಿಕಾರಿಗಳು, ಪೊಲೀಸರು, ಅಗ್ನಿ ಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ, ಗ್ರಾಮಸ್ಥರಿಗೆ ಧೈರ್ಯ ತುಂಬುವ ಕೆಲಸವನ್ನ ಮಾಡುತ್ತಿದ್ದಾರೆ. ಯುವಕನ ಯಡವಟ್ಟಿನ ಆತ್ಮಹತ್ಯೆಯಿಂದ ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದಾರೆ. ಇದೇ ನೀರನ್ನ ಕುಡಿದು ಕೆಲವರು ವಾಂತಿಕೂಡಾ ಮಾಡಿಕೊಳ್ಳುತ್ತಿದ್ದಾರೆ. ಈ ಟ್ಯಾಂಕರ್ನಲ್ಲಿನ ನೀರನ್ನ ನಾವು ಯಾವುದೇ ಕಾರಣಕ್ಕೂ ಕುಡಿಯೋದಿಲ್ಲ, ನಮಗೆ ಬೇರೆ ನೀರಿನ ವ್ಯವಸ್ಥೆ ಮಾಡಿ ಎಂದು ಗ್ರಾಮಸ್ಥರು ಮನವಿ ಮಾಡಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ : ಮೈಸೂರು: ಪತಿ ಅಗಲಿಕೆಯಿಂದ ಮನನೊಂದ ಪತ್ನಿ, ಮಗಳೊಂದಿಗೆ ಆತ್ಮಹತ್ಯೆ - MOTHER AND DAUGHTER SUICIDE