ETV Bharat / state

ಕಾರು ಪಾರ್ಕಿಂಗ್ ವಿಚಾರಕ್ಕೆ ಗಲಾಟೆ: ವೃದ್ಧನಿಗೆ ಚಾಕುವಿನಿಂದ ಚುಚ್ಚಿದ ಆರೋಪಿ ಬಂಧನ - STABBING CASE

ಕಾರು ಪಾರ್ಕಿಂಗ್ ವಿಚಾರಕ್ಕೆ ನಡೆದ ಗಲಾಟೆಯಲ್ಲಿ ವೃದ್ಧನಿಗೆ ಚಾಕುವಿನಿಂದ ಚುಚ್ಚಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಅನ್ನಪೂರ್ಣೇಶ್ವರಿ ನಗರ ಠಾಣೆ
ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆ (ETV Bharat)
author img

By ETV Bharat Karnataka Team

Published : Nov 14, 2024, 2:07 PM IST

ಬೆಂಗಳೂರು: ಪಾರ್ಕಿಂಗ್ ವಿಚಾರಕ್ಕಾಗಿ ನಡೆದ ಜಗಳದಲ್ಲಿ ವೃದ್ಧನಿಗೆ ಚಾಕುವಿನಿಂದ ಚುಚ್ಚಿ ಪರಾರಿಯಾಗಿದ್ದ ಆರೋಪಿಯನ್ನು ಅನ್ನಪೂರ್ಣೇಶ್ವರಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ರಾಘವೇಂದ್ರ (39) ಬಂಧಿತ ಆರೋಪಿ.

ಈತ ನಾಗರಭಾವಿಯ ವಿನಾಯಕ್ ನಗರದ ನಿವಾಸ.‌ ಹಲ್ಲೆಗೊಳಗಾಗಿರುವ ವಿ.ದಳಪತಿ (70) ಎಂಬವರು ಖಾಸಗಿ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬುಧವಾರ ಮಧ್ಯಾಹ್ನ ಘಟನೆ ನಡೆದಿದೆ. ದಳಪತಿ ಮನೆಯವರು ನೀಡಿದ ದೂರು ಆಧರಿಸಿ ಆರೋಪಿಯನ್ನು ಬಂಧಿಸಲಾಗಿದೆ. ವಿಚಾರಣೆ ಮುಗಿದ ನಂತರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ದಳಪತಿ ವೃತ್ತಿಯಲ್ಲಿ ವಕೀಲ. ನಾಗರಭಾವಿಯಲ್ಲಿ ಕುಟುಂಬಸ್ಥರೊಂದಿಗೆ ವಾಸವಾಗಿದ್ದಾರೆ. ಕಾರು ಪಾರ್ಕಿಂಗ್ ವಿಚಾರಕ್ಕಾಗಿ ನಿನ್ನೆ ಮಧ್ಯಾಹ್ನ ರಾಘವೇಂದ್ರ ಇವರ ಮನೆ ಬಳಿ ಬಂದಿದ್ದ. ಮನೆಯಲ್ಲಿ ದಳಪತಿ ಸೊಸೆಯೊಂದಿಗೆ ಕ್ಯಾತೆ ತೆಗೆದಿದ್ದ. ಈ ವೇಳೆ ಕೆಲಸ ಮುಗಿಸಿ ದಳಪತಿ ಅವರು ಮನೆ ಬಳಿ ಬಂದಾಗ ಗಲಾಟೆಯಾಗುತ್ತಿರುವುದನ್ನು ಕಂಡು ಆರೋಪಿಗೆ ಪ್ರಶ್ನಿಸಿದ್ದಾರೆ. ಇಬ್ಬರ ನಡುವಿನ ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿದೆ. ಈ ವೇಳೆ ಅಲ್ಲಿದ್ದ ಚಾಕುವಿನಿಂದ ದಳಪತಿ ಅವರ ಬೆನ್ನಿಗೆ ಚುಚ್ಚಿದ್ದಾನೆ.

ಇದನ್ನೂ ಓದಿ: ಕ್ಷುಲ್ಲಕ ಕಾರಣಕ್ಕೆ ಯುವಕನಿಗೆ ಚಾಕು ಇರಿತ: ಓರ್ವನ ಬಂಧನ, ಉಳಿದವರಿಗಾಗಿ‌ ಶೋಧ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.