ETV Bharat / state

VIDEO: ಶ್ರೀರಂಗಪಟ್ಟಣ ದಸರಾದಲ್ಲಿ 3ನೇ ಬಾರಿಗೆ ಅಂಬಾರಿ ಹೊರಲು ಸಜ್ಜಾಗುತ್ತಿರುವ ಮಹೇಂದ್ರ - Mahendra elephant

author img

By ETV Bharat Karnataka Team

Published : Sep 10, 2024, 4:49 PM IST

Updated : Sep 10, 2024, 7:06 PM IST

2022 ಮತ್ತು 2023ರ ಶ್ರೀರಂಗಪಟ್ಟಣ ದಸರಾದಲ್ಲಿ ಸತತವಾಗಿ ಎರಡು ಬಾರಿ ಅಂಬಾರಿ ಹೊತ್ತು ಸೈ ಎನಿಸಿಕೊಂಡಿದ್ದ ಮಹೇಂದ್ರ ಆನೆ, ಮೂರನೇ ಬಾರಿಗೆ ಅಂಬಾರಿ ಹೊರಲು ಭರ್ಜರಿ ತಯಾರಿಯಾಗುತ್ತಿದೆ. ಈ ಕುರಿತ ವರದಿ ಇಲ್ಲಿದೆ.

ಮಹೇಂದ್ರ ಆನೆ
ಮಹೇಂದ್ರ ಆನೆ (ETV Bharat)
ಶ್ರೀರಂಗಪಟ್ಟಣ ದಸರಾದಲ್ಲಿ 3ನೇ ಬಾರಿಗೆ ಅಂಬಾರಿ ಹೊರಲು ಸಜ್ಜಾಗುತ್ತಿರುವ ಮಹೇಂದ್ರ (ETV Bharat)

ಮೈಸೂರು: ಶ್ರೀರಂಗಪಟ್ಟಣ ದಸರಾ ಜಂಬೂಸವಾರಿಯಲ್ಲಿ ಮರದ ಅಂಬಾರಿ ಹೊರಲು ಮಹೇಂದ್ರ ಆನೆ ಮೂರನೇ ಬಾರಿಗೆ ಆಯ್ಕೆಯಾಗಿದೆ. ಹೌದು, ಮೈಸೂರು ದಸರಾದ ಮೂಲನೆಲೆ ಶ್ರೀರಂಗಪಟ್ಟಣ ದಸರಾ ಆಗಿದೆ. ನವರಾತ್ರಿ ಪ್ರಾರಂಭದ ಮರು ದಿನ ಅಂದರೆ ಅಕ್ಟೋಬರ್‌ 4 ರಂದು ಶ್ರೀರಂಗಪಟ್ಟಣದ ದಸರಾ ಜರಗಲಿದೆ. ಅಲ್ಲಿ ಸುಮಾರು 400 ಕೆ.ಜಿ. ತೂಕವುಳ್ಳ ಮರದ ಅಂಬಾರಿಯಲ್ಲಿ ನಾಡ ಅಧಿದೇವತೆ ಚಾಮುಂಡಿ ತಾಯಿಯ ಉತ್ಸವಮೂರ್ತಿಯನ್ನಿಟ್ಟು ದಸರಾ ಆಚರಿಸಲಾಗುತ್ತದೆ.

ಈ ಬಾರಿಯೂ ಶ್ರೀರಂಗಪಟ್ಟಣ ದಸರಾದ ಅಂಬಾರಿ ಹೊರುವ ಹೊಣೆಯನ್ನು ಮಹೇಂದ್ರ ಆನೆಗೆ ವಹಿಸಲಾಗಿದೆ. ಕಳೆದ ಎರಡು ಬಾರಿ ಮರದ ಅಂಬಾರಿ ಹೊತ್ತಿರುವ ಮಹೇಂದ್ರ, ಸೌಮ್ಯ ಸ್ವಭಾವದವನಾಗಿದ್ದಾನೆ ಎಂದು ಡಿಸಿಎಫ್‌ ಪ್ರಭುಗೌಡ 'ಈಟಿವಿ ಭಾರತ್'ಗೆ ತಿಳಿಸಿದ್ದಾರೆ.

ಮತ್ತಿಗೋಡು ಆನೆ ಶಿಬಿರದ ಮಹೇಂದ್ರ ಆನೆಯನ್ನು 2018ರಲ್ಲಿ ರಾಮನಗರ ಜಿಲ್ಲೆಯ ಕಬ್ಬಾಳು ಬಳಿ ಸೆರೆಹಿಡಿದು ಪಳಗಿಸಲಾಗಿತ್ತು. ಕಳೆದ ಎರಡು ವರ್ಷಗಳಿಂದ ದಸರಾ ಮಹೋತ್ಸವದಲ್ಲಿ ಭಾಗವಹಿಸುತ್ತಿರುವ ಮಹೇಂದ್ರನಿಗೆ ಇದು ಮೂರನೇ ದಸರಾ ಆಗಿದೆ. 4,910 ಕೆ.ಜಿ. ತೂಕವಿರುವ ಮಹೇಂದ್ರ ಆನೆ ಸೌಮ್ಯ ಹಾಗೂ ಬಲಿಶಾಲಿಯಾಗಿದೆ. ಅದರ ಉದ್ದನೆಯ ದಂತ, ಮೈಕಟ್ಟು, ಆಕರ್ಷಕ ಹಣೆ ಹೊಂದಿರುವ 42 ವರ್ಷದ ಮಹೇಂದ್ರ ಭವಿಷ್ಯದಲ್ಲಿ ಅಭಿಮನ್ಯು ನಂತರ ಚಿನ್ನದ ಅಂಬಾರಿ ಹೊರುವ ಎಲ್ಲ ಲಕ್ಷಣಗಳನ್ನು ಹೊಂದಿದ್ದಾನೆ ಎಂದು ಹೇಳಲಾಗುತ್ತಿದೆ. ಇನ್ನು ಮಹೇಂದ್ರ ಆನೆಗೆ ಮಾವುತ ಮತ್ತು ಕಾವಾಡಿ ಸ್ನಾನ ಮಾಡಿಸಿದರು.

ಇದನ್ನೂ ಓದಿ: ಅರಮನೆ ನಗರಿಯಲ್ಲಿ ದಸರಾ ಗಜಪಡೆಯ‌ ತಾಲೀಮು: ಪೋಟೋ ಝಲಕ್ - Dasara Elephant Training Photos

Last Updated : Sep 10, 2024, 7:06 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.