ETV Bharat / state

ಎನ್‌ಒಸಿ ನೀಡಲು ವಿದ್ಯುತ್ ಗುತ್ತಿಗೆದಾರನಿಂದ ಲಂಚ: ಕುಂದಾಣ ಪಿಡಿಒ ಲೋಕಾಯುಕ್ತ ಬಲೆಗೆ - Lokayukta Traps PDO

ಲೇಔಟ್​ಗೆ ನೆಲದಡಿ ಕೇಬಲ್​ ಅಳವಡಿಸಲು ಎನ್​ಒಸಿ ನೀಡಲು ಲಂಚ ಪಡೆಯುತ್ತಿದ್ದಾಗ ಪಿಡಿಒ ಲೋಕಾಯುಕ್ತ ಪೊಲೀಸರ ಬಲೆಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.

ಕುಂದಾಣ ಪಿಡಿಓ ಲೋಕಾಯುಕ್ತ ಬಲೆಗೆ
ಕುಂದಾಣ ಪಿಡಿಒ ಪದ್ಮನಾಭ ಲೋಕಾಯುಕ್ತ ಬಲೆಗೆ (ETV Bharat)
author img

By ETV Bharat Karnataka Team

Published : Sep 4, 2024, 1:15 PM IST

ದೇವನಹಳ್ಳಿ: ಲೇಔಟ್​ಗೆ ಕೇಬಲ್ ಹಾಕುವ ವಿಚಾರಕ್ಕೆ ವಿದ್ಯುತ್​ ಗುತ್ತಿಗೆದಾರನಿಂದ ಲಂಚ ಸ್ವೀಕರಿಸುತ್ತಿದ್ದ ಕುಂದಾಣ ಗ್ರಾಮ ಪಂಚಾಯಿತಿ ಪಿಡಿಒ ಲೋಕಾಯಕ್ತರ ಬಲೆಗೆ ಬಿದ್ದಿದ್ದಾರೆ.

₹5 ಲಕ್ಷ ಬೇಡಿಕೆ: ದೇವನಹಳ್ಳಿ ತಾಲೂಕು ಕುಂದಾಣ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪದ್ಮನಾಭ, ಲೇಔಟ್​ಗೆ ನೆಲದಡಿ ಕೇಬಲ್​ ಅಳವಡಿಸಲು ಎನ್‌ಒಸಿಗೆ 5 ಲಕ್ಷ ರೂಪಾಯಿ ಬೇಡಿಕೆ ಇಟ್ಟಿದ್ದರು. ವಿದ್ಯುತ್​​ ಗುತ್ತಿಗೆದಾರ ಮಲ್ಲಿಕಾರ್ಜುನ್ ಈ ಕುರಿತು ಲೋಕಾಯುಕ್ತರಿಗೆ ದೂರು ಸಲ್ಲಿಸಿದ್ದರು.

ಇತ್ತ 3 ಲಕ್ಷ ರೂ. ಲಂಚದ ಹಣವನ್ನು ಮುಂಗಡವಾಗಿ ಪಡೆದಿದ್ದ ಪಿಡಿಒ, ಸೆಪ್ಟೆಂಬರ್​ 3ರಂದು ಬಾಕಿ 2 ಲಕ್ಷ ರೂಪಾಯಿ ಪಡೆಯುತ್ತಿದ್ದಾಗ ಲೋಕಾಯುಕ್ತ ಪೊಲೀಸ್​​ ಇನ್ಸ್​​ಪೆಕ್ಟರ್​ ರಮೇಶ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.

ಇದನ್ನೂ ಓದಿ: ರೇಣುಕಾಸ್ವಾಮಿ ಹತ್ಯೆ ಪ್ರಕರಣ; ಕೋರ್ಟ್​ಗೆ 231 ಸಾಕ್ಷ್ಯಗಳನ್ನೊಳಗೊಂಡ 3,991 ಪುಟಗಳ ಚಾರ್ಜ್‌ಶೀಟ್ ಸಲ್ಲಿಕೆ - Renukaswamy Murder Case

ETV Bharat Logo

Copyright © 2024 Ushodaya Enterprises Pvt. Ltd., All Rights Reserved.