ETV Bharat / state

ಮೈಸೂರು-ಕೊಡಗು ಲೋಕಸಭಾ ಕ್ಷೇತ್ರ; ಉಭಯ ಅಭ್ಯರ್ಥಿಗಳ ಅಬ್ಬರದ ಪ್ರಚಾರ, ಮತದಾರರ ತೀರ್ಪು ಬಾಕಿ - Lok Sabha Election 2024 - LOK SABHA ELECTION 2024

ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಮತದಾನಕ್ಕೆ ಎರಡು ದಿನ ಬಾಕಿಯಿದ್ದು, ಬಹಿರಂಗ ಪ್ರಚಾರಕ್ಕೆ ಕೆಲವೇ ಕ್ಷಣಗಳಲ್ಲಿ ತೆರೆಬೀಳಲಿದೆ.

LOK SABHA CONSTITUENCY  MYSORE KODAGU CONSTITUENCY  MYSORE
ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಫೈನಲ್ ಟ್ರೆಂಡ್
author img

By ETV Bharat Karnataka Team

Published : Apr 24, 2024, 4:57 PM IST

Updated : Apr 24, 2024, 5:27 PM IST

ಮೈಸೂರು: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಅಭ್ಯರ್ಥಿ ನಡುವೆ ನೇರ ಪೈಪೋಟಿ ಇರುವುದು ಗೊತ್ತೇ ಇದೆ. ಇಲ್ಲಿ ನಡೆಯುತ್ತಿರುವುದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ರಾಜಮನೆತನದ ನಡುವಿನ ಪೈಪೋಟಿ ಎಂದೇ ಬಿಂಬಿತವಾಗುತ್ತಿದ್ದು, ಕ್ಷೇತ್ರದಲ್ಲಿ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳು ಮೂರು-ಮೂರು ಬಾರಿ ಪ್ರಚಾರ ನಡೆಸಿದ್ದಾರೆ. ಈ ಮಧ್ಯೆ ಮೈತ್ರಿ ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಪರ ಪ್ರಧಾನಿ ನರೇಂದ್ರ ಮೋದಿ ಹಾಗೂ ಜೆಡಿಎಸ್ ವರಿಷ್ಠ ಹೆಚ್​.ಡಿ ದೇವೇಗೌಡ, ಸೇರಿದಂತೆ ಮುಖ್ಯಮಂತ್ರಿ ಬಿ.ಎಸ್​ ಯಡಿಯೂರಪ್ಪ ಸೇರಿದಂತೆ ಹಲವರು ಪ್ರಚಾರ ನಡೆಸಿದ್ದು, ಮೈತ್ರಿ ಅಭ್ಯರ್ಥಿಗೆ ಬಲ ಹೆಚ್ಚಿಸಿದೆ.

Lok Sabha constituency  Mysore Kodagu constituency  Mysore
ಬಿಜೆಪಿ ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಚಾಮರಾಜ್ ಒಡೆಯರ್

ತವರು ಜಿಲ್ಲೆ ಗೆಲ್ಲಲು ಮುಖ್ಯಮಂತ್ರಿ ಕಸರತ್ತು: ಕಳೆದ 10 ವರ್ಷಗಳಿಂದ ಬಿಜೆಪಿಯ ಭದ್ರಕೋಟೆಯಾದ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರವನ್ನು ಈ ಬಾರಿ ಕಾಂಗ್ರೆಸ್ ಗೆಲ್ಲಲೇಬೇಕೆಂದು ಸ್ವತಃ ಮುಖ್ಯಮಂತ್ರಿಗಳೇ ಪ್ರಚಾರ ಮಾಡಿದ್ದರು. ಮುಖ್ಯಮಂತ್ರಿಗಳು ಲೋಕಾಸಭಾ ಚುನಾವಣೆಯ ದಿನಾಂಕ ಪ್ರಕಟವಾದ ಮೇಲೆ ನಾಮಪತ್ರ ಸಲ್ಲಿಕೆಗೆ ಹಾಗೂ ಚುನಾವಣಾ ಪ್ರಚಾರಕ್ಕೆ ಮೂರು ಬಾರಿ ಮೂರು ದಿನಗಳ ಕಾಲ ಮೈಸೂರಿನಲ್ಲೇ ವಾಸ್ತವ್ಯ ಹೂಡಿದ್ದರು. ಹೇಗಾದರೂ ಮಾಡಿ ತವರು ಜಿಲ್ಲೆಯನ್ನ ಗೆಲ್ಲಲು ತಂತ್ರ ಮಾಡಿದ್ದು, ಅದರಲ್ಲಿ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆ ಮೂಲಕ ಗ್ರಾಮಾಂತರ ಪ್ರದೇಶದಲ್ಲಿ ಹೆಚ್ಚಿನ ಮತ ಪಡೆಯಲು ಭರ್ಜರಿ ಪ್ರಚಾರ ನಡೆಸಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷ್ಮಣ್

ಇನ್ನು ಸಿಎಂ ಸಿದ್ದರಾಮಯ್ಯ ತವರು ಜಿಲ್ಲೆ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಉಸ್ತುವಾರಿ ತಮ್ಮ ಮಗ ಯತೀಂದ್ರ ಸಿದ್ದರಾಮಯ್ಯ ಹಾಗೂ ಸ್ಥಳೀಯ ಕಾಂಗ್ರೆಸ್ ಶಾಸಕರಿಗೆ ವಹಿಸಲಾಗಿದೆ. ಕಾಂಗ್ರೆಸ್ ಅಭ್ಯರ್ಥಿ ಎಂ. ಲಕ್ಷ್ಮಣ್ ಒಕ್ಕಲಿಗ ಸಮುದಾಯಕ್ಕೆ ಸೇರಿದವರಾಗಿದ್ದು, ಒಕ್ಕಲಿಗ ಮತದಾರರನ್ನು ಸೆಳೆಯಲು ಒಕ್ಕಲಿಗ ಅಸ್ತ್ರ ಪ್ರಯೋಗಿಸಿದ್ದಾರೆ ಸಿಎಂ ಸಿದ್ದರಾಮಯ್ಯ. ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ನೆಪ ಮಾತ್ರ, ಸ್ಪರ್ಧೆ ಇರುವುದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪ್ರತಿಷ್ಠೆ, ಹಾಗೂ ರಾಜಮನೆತನದ ನಡುವೆ ಎಂದೇ ಬಿಂಬಿತವಾಗಿದೆ.

ಮೈತ್ರಿ ಅಭ್ಯರ್ಥಿ ಗೆಲುವಿಗೆ ರಾಜಮನೆತನ ಹಾಗೂ ಮೋದಿ ಬಲ: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಅಚ್ಚರಿಯ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿರುವ ರಾಜವಂಶಸ್ಥ ಯದುವೀರ್ ಕೃಷ್ಣ ದತ್ತ ಚಾಮರಾಜ್ ಒಡೆಯರ್​ಗೆ ತಮ್ಮ ಪೂರ್ವಜರು ಮಾಡಿರುವ ಜನಪರ ಕೆಲಸಗಳು ಹಾಗೂ ರಾಜಮನೆತನದ ಬಗ್ಗೆ ಇಲ್ಲಿಯ ಜನರಿಗೆ ಅಪಾರ ಗೌರವವಿದೆ. ಬಿಜೆಪಿ ಪಕ್ಷದ ಮತಗಳನ್ನ ಒಂದುಗೂಡಿಸುವ ನರೇಂದ್ರ ಮೋದಿ ಅವರ ಪ್ರಚಾರ ಹಾಗೂ ಒಕ್ಕಲಿಗ ಮತಗಳನ್ನ ಒಂದುಗೂಡಿಸುವ HD ಕುಮಾರಸ್ವಾಮಿ ಹಾಗೂ H.D ದೇವೇಗೌಡ ಹಾಗೂ ಲಿಂಗಾಯತ ಮತಗಳ ಕ್ರೂಢೀಕರಿಸಲು ಸಹಾಯಕವಾಗಿರುವ ಮಾಜಿ ಮುಖ್ಯಮಂತ್ರಿ B.S ಯಡಿಯೂರಪ್ಪ ಅವರ ಪ್ರಚಾರ ರಾಜವಂಶಸ್ಥ ಯದುವೀರ್ ಅವರ ಗೆಲುವಿಗೆ ಸಹಾಯಕ ಎಂಬ ಮಾತುಗಳು ಕೇಳಿಬರುತ್ತಿವೆ.

ಈಗಾಗಲೇ ಮಡಿಕೇರಿ ಹಾಗೂ ಮೈಸೂರು ನಗರ, ಹುಣಸೂರು, ಪಿರಿಯಾಪಟ್ಟಣ, ಗ್ರಾಮೀಣ ಪ್ರದೇಶಗಳಲ್ಲಿ ಪ್ರಚಾರ ನಡೆಸಿರುವ ಮೈತ್ರಿ ಅಭ್ಯರ್ಥಿ ಜನಗಳ ತೀರ್ಪುನ ಸ್ವಾಗತಿಸುತ್ತೇನೆ ಎಂಬ ಈ ಹೇಳಿಕೆಗಳನ್ನು ನೀಡಿದ್ದಾರೆ. ಹೀಗಾಗಿ ಅವರಲ್ಲಿ ಗೆಲುವಿನ ಆತ್ಮವಿಶ್ವಾಸವನ್ನ ಹೆಚ್ಚಿಸಿದೆ. ಇದಕ್ಕೆ ಪ್ರಮುಖ ಕಾರಣ ಪ್ರಧಾನಿ ನರೇಂದ್ರ ಮೋದಿ ಅವರು. ಮೈಸೂರಿನಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಿ ರಾಜಮನೆತನ ಅವರ ಕೊಡುಗೆ ಸ್ಮರಿಸಿ, ಗೆಲುವಿಗೆ ಕರೆ ನೀಡಿದರು. ಇದು ಮೈತ್ರಿ ಅಭ್ಯರ್ಥಿಯ ಗೆಲುವಿಗೆ ಸಹಕಾರಿ ಆಗಲಿದೆ ಎನ್ನಲಾಗ್ತಿದೆ.

ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಅಂದಾಜು ಜಾತಿ ಲೆಕ್ಕಾಚಾರ ಹೀಗಿದೆ:

  • ಒಕ್ಕಲಿಗ: 5.05 ಲಕ್ಷ
  • ದಲಿತ: 3.20 ಲಕ್ಷ
  • ಕುರುಬ: 2.30 ಲಕ್ಷ
  • ಮುಸ್ಲಿಂ: 2 ಲಕ್ಷ
  • ಲಿಂಗಾಯತ: 1.90 ಲಕ್ಷ
  • ಬ್ರಾಹ್ಮಣ: 1.40 ಲಕ್ಷ
  • ಕೊಡವ: 1.10 ಲಕ್ಷ
  • ನಾಯಕ: 2 ಲಕ್ಷ
  • ಇತರೆ ಜನಾಂಗ: 1.05 ಲಕ್ಷ ಇದೆ.

ಈ ಕ್ಷೇತ್ರ ವ್ಯಾಪ್ತಿಯಲ್ಲಿ ಕೃಷ್ಣರಾಜ, ಹುಣಸೂರು, ಚಾಮುಂಡೇಶ್ವರಿ, ಪಿರಿಯಾಪಟ್ಟಣ, ಚಾಮರಾಜ, ನರಸಿಂಹರಾಜ, ಮಡಿಕೇರಿ, ವಿರಾಜಪೇಟೆಯ, 8 ವಿಧಾನಸಭಾ ಕ್ಷೇತ್ರಗಳು ಬರಲಿದ್ದು, ಈ ಕ್ಷೇತ್ರದಲ್ಲಿ ಐದು ಜನ ಕಾಂಗ್ರೆಸ್ ಶಾಸಕರು, ಇಬ್ಬರು ಜೆಡಿಎಸ್ ಶಾಸಕರು ಹಾಗೂ ಒಬ್ಬ ಬಿಜೆಪಿ ಶಾಸಕ ಇದ್ದಾರೆ. ಕ್ಷೇತ್ರದಲ್ಲಿ ಒಟ್ಟು 20,92,222 ಮತದಾರರು ಇದ್ದಾರೆ. ಈ ಪೈಕಿ ಪುರುಷ ಮತದಾರರು 10,26,324 ಇದ್ರೆ, ಮಹಿಳಾ ಮತದಾರರು 10,65,714 ಜನ, ಇತರೆ ಮತದಾರರು 184 ಜನರಿದ್ದಾರೆ.

ಮತದಾನಕ್ಕೆ ಕೆಲವೇ ಗಂಟೆಗಳು ಮಾತ್ರ ಬಾಕಿಯಿದೆ. ಈಗಾಗಲೇ ಈ ಕ್ಷೇತ್ರದ ಚುನಾವಣೆ ಸಿದ್ದರಾಮಯ್ಯ ಹಾಗೂ ರಾಜಮನೆತನದ ನಡುವಿನ ಸ್ಪರ್ಧೆ ಎಂದೇ ಬಿಂಬಿತವಾಗಿದೆ. ಮೈತ್ರಿ ಅಭ್ಯರ್ಥಿ ಯದುವೀರ್ ಒಡೆಯರ್ ಮಡಿಕೇರಿ ಹಾಗೂ ಮೈಸೂರು ನಗರದ ಜೊತೆಗೆ ಚಾಮುಂಡೇಶ್ವರಿ, ಹುಣಸೂರು ಜೊತೆಗೆ ಪಿರಿಯಾಪಟ್ಟಣದ ಹಳ್ಳಿ-ಹಳ್ಳಿಗಳಲ್ಲೂ ಪ್ರಚಾರ ನಡೆಸಿದ್ದು, ಮತ್ತೊಮ್ಮೆ ದೇಶಕ್ಕೆ ಮೋದಿ ಪ್ರಧಾನಿ ಎಂಬ ಘೋಷಣೆ ಮೊಳಗಿಸಿದ್ದಾರೆ.

ಇನ್ನು ಸಿದ್ದರಾಮಯ್ಯ ಅವರ ಗ್ಯಾರಂಟಿ ಹಾಗೂ ಅಹಿಂದ ಮತಗಳನ್ನು ಕಾಂಗ್ರೆಸ್ ಅಭ್ಯರ್ಥಿ ನಂಬಿಕೊಂಡಿದ್ದಾರೆ. ಇದರ ಜೊತೆಗೆ 47 ವರ್ಷಗಳ ನಂತರ ಒಕ್ಕಲಿಗ ಅಭ್ಯರ್ಥಿಗೆ ಲೋಕಾಸಭಾ ಟಿಕೆಟ್ ಸಿಕ್ಕಿದ್ದು, ಒಕ್ಕಲಿಗ ಅಸ್ತ್ರವನ್ನಾಗಿ ಸಹ ಕಾಂಗ್ರೆಸ್ ಪ್ರಯೋಗ ಮಾಡಿದೆ. ಇದು ಎಷ್ಟರ ಮಟ್ಟಿಗೆ ಪ್ರಯೋಜನ ಆಗಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಓದಿ: ಮೋದಿ ಅಲೆ, ಗ್ಯಾರಂಟಿ ವಿಶ್ವಾಸ: ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಗ್ರೌಂಡ್ ರಿಪೋರ್ಟ್ - Ground Report

Last Updated : Apr 24, 2024, 5:27 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.