ETV Bharat / state

ಬಳ್ಳಾರಿ: ಸಂಗನಕಲ್ಲು ಮ್ಯೂಸಿಯಂನಲ್ಲಿ ಗಮನ ಸೆಳೆಯುತ್ತಿದೆ ವೀನಸ್​​ ಮತ್ತು ನರಸಿಂಹ ಆಕಾರದ ಆಕೃತಿ - OBERT BRUCE FOOTE SANGANKALLU

ರಾಬರ್ಟ್ ಬ್ರೂಸ್ ಫೂಟ್ ಸಂಗನಕಲ್ಲು ಪ್ರಾಕ್ತನ ವಸ್ತು ಸಂಗ್ರಹಾಲಯದಲ್ಲಿ ವಿಶೇಷ ಪ್ರಾಗೈತಿಹಾಸದ ಆಕೃತಿ, ಉಪಕರಣಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ.

lion man and venus sculpture  in Robert Bruce Foote Sangankallu Archaeological Museum
ಸಂಗನಕಲ್ಲು ಪ್ರಾಕ್ತನ ವಸ್ತು ಸಂಗ್ರಹಾಲಯ (ETV Bharat)
author img

By ETV Bharat Karnataka Team

Published : Oct 10, 2024, 5:23 PM IST

ಬಳ್ಳಾರಿ: ಪೂರ್ವ ಇತಿಹಾಸದ ಕಥೆ ಸಾರುವ ಇರುವ ಐತಿಹಾಸಿಕ ವಸ್ತು ಸಂಗ್ರಹಾಲಯದಲ್ಲಿ ಒಂದು ರಾಬರ್ಟ್ ಬ್ರೂಸ್ ಫೂಟ್ ವಸ್ತು ಸಂಗ್ರಹಾಲಯವಾಗಿದೆ. ಈ ಸಂಗ್ರಹಾಲಯಕ್ಕೆ ಇದೀಗ ಮತ್ತೊಂದು ಗರಿ ಸಿಕ್ಕಿದೆ. ಇದಕ್ಕೆ ಕಾರಣ ಇಲ್ಲಿ ಪ್ರದರ್ಶನಕ್ಕೆ ಇಟ್ಟಿರುವ ಅಪರೂಪದ ಆಕೃತಿಗಳು.

ನಗರದ ಡಾ.ರಾಜ್‌ಕುಮಾರ್ ರಸ್ತೆಯ ರಾಬರ್ಟ್ ಬ್ರೂಸ್ ಫೂಟ್ ಸಂಗನಕಲ್ಲು ಪ್ರಾಕ್ತನ ವಸ್ತು ಸಂಗ್ರಹಾಲಯದಲ್ಲಿ ಜರ್ಮನಿ ದೇಶದಲ್ಲಿ ಸಿಕ್ಕ 3ಡಿ ಆಕೃತಿ ನರಸಿಂಹ ಆಕಾರದ ಸಿಂಹ ಮಾನವ ಮತ್ತು ಮಾತೃ ದೇವತೆ ವೀನಸ್​ ಅಕೃತಿಯನ್ನು ಪ್ರದರ್ಶನಕ್ಕೆ ಇಡಲಾಗಿದೆ. 50 ಸಾವಿರ ವರ್ಷದ ಹಿಂದಿನ ಪ್ರಾಗೈತಿಹಾಸದ ಆಕೃತಿಗಳಾಗಿವೆ ಎಂದು ಪ್ರಾಕ್ತನಶಾಸ್ತ್ರಜ್ಞರು ತಿಳಿಸಿದ್ದು, ಇವುಗಳನ್ನು ಇದೀಗ ಸಂಗ್ರಹಾಲಯದಲ್ಲಿ ಕಾಣಬಹುದಾಗಿದೆ ಎಂದು ವಸ್ತು ಸಂಗ್ರಹಾಲಯ ಸಮಿತಿಯ ಅಧ್ಯಕ್ಷರೂ ಆದ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ತಿಳಿಸಿದ್ದಾರೆ.

lion man and venus sculpture  in Robert Bruce Foote Sangankallu Archaeological Museum
ಪ್ರಗೈತಿಹಾಸದ ಆಕೃತಿಗಳು (ETV Bharat)

ಈ ಆಕೃತಿಗಳು ಯುರೋಪ್​ನ ಹಲವಾರು ಸ್ಥಳದಲ್ಲಿ ಸಿಕ್ಕಿದ್ದು, ನಮ್ಮ ಪೂರ್ವಜರಲ್ಲಿಯೇ ಫಲವತ್ತತೆಯ ಸಂತಾನೋತ್ಪತ್ತಿಯ ಸಂಸ್ಕೃತಿ ಸಾಕ್ಷಿ ನೀಡಿದೆ. ಈ ಆಕೃತಿಗಳು ಕಂಚಿನ ಯುಗದಲ್ಲಿ ಬರವಣಿಗೆ ಅಭ್ಯಾಸ ಆರಂಭದಲ್ಲಿನವಾಗಿವೆ. ಸಿಂಹ ಮುಖದ ಮನುಷ್ಯ (ನರಸಿಂಹ) ಸ್ಟಾಡೆಲ್ಜಿಲ್ ಊರಿನ ಒಂದು ಗುಹೆಯಲ್ಲಿ ಸಿಕ್ಕಿದೆ. ಇದು ಸುಮಾರು 40,000 ವರ್ಷದ ಹಿಂದಿನದು ಅಂದಾಜಿಸಲಾಗಿದೆ. ವೀನಸ್ (ಮಾತೃದೇವತೆ) ಡಾಲ್ನಿ ವೇಸ್ಟೊನೈಸ್ ಎಂಬ ಪ್ರದೇಶದಲ್ಲಿ ಸುಮಾರು 31,000 ವರ್ಷಗಳ ಹಿಂದೆ ದೊರೆತಿದೆ ಎಂದು ಅವರು ತಿಳಿಸಿದ್ದಾರೆ.

ಪ್ರಾಗೈತಿಹಾಸ ಆಕೃತಿ (ETV Bharat)

ಕಲ್ಲಿನ ಉಪಕರಣಗಳ ಸಂಗ್ರಹ: ಕೆಲ ತಿಂಗಳ ಹಿಂದೆ ಆಫ್ರಿಕಾ ದೇಶದಲ್ಲಿ ಸಿಕ್ಕ ಹಳೆ ಶಿಲಾಯುಗದ ಕಲ್ಲಿನ ಉಪಕರಣಗಳ ಮಾದರಿಗಳನ್ನು ಸಂಗ್ರಹಿಸಿ ಪ್ರದರ್ಶನಕ್ಕಿಟ್ಟ ಬೆನ್ನಲ್ಲೇ ಮತ್ತಷ್ಟು ಆಫ್ರಿಕಾದ ಓಲ್ಡಾನ್ ಹಾಗೂ ಜರ್ಮನಿ ಹಾಗೂ ಫ್ರಾನ್ಸ್ ದೇಶಗಳಲ್ಲಿ ಸಿಕ್ಕ ವಿವಿಧ ರೀತಿಯ ಕಲ್ಲಿನ ಉಪಕರಣದ 3ಡಿ ನಮೂನೆಗಳನ್ನು ಕೂಡ ಸಂಗ್ರಹಿಸಲಾಗಿದೆ. ಈ ಆಕೃತಿಗಳು ಹಾಗೂ ಉಪಕರಣಗಳನ್ನು ನ್ಯೂಯಾರ್ಕಿನ ನಮಿತಾ ಸುಗಂಧಿ ಹಾಗೂ ರವಿ ಕೋರಿಶೆಟ್ಟರ್ ಅವರು ಸಂಗ್ರಹಿಸಿದ್ದಾರೆ ಎಂದು ಅವರು ಹೇಳಿದ್ದಾರೆ.

ಮಾತೃ ದೇವತೆ ವೀನಸ್​ (ETV Bharat)

ಪುಣೆಯ ಡೆಕ್ಕನ್ ಕಾಲೇಜಿನವರು ಹುಣಸಿಗಿಯಲ್ಲಿ ಸಿಕ್ಕ 12 ಲಕ್ಷ ವರ್ಷದ ಹಿಂದಿನ ಶಿಲಾ ಉಪಕರಣಗಳನ್ನು ಈ ವಸ್ತು ಸಂಗ್ರಹಾಲಯಕ್ಕೆ ದಾನವಾಗಿ ನೀಡಿದ್ದಾರೆ. ಈ ಉಪಕರಣಗಳನ್ನು ಡಾ. ಕೆ. ಪದ್ದಯ್ಯ, ಹಿರಿಯ ಸಂಶೋಧಕರು, ಕರ್ನಾಟಕದ ಯಾದಗಿರಿ ಜಿಲ್ಲೆಯ ಇಸಾಂಪುರ ಎಂಬ ಊರಿನಲ್ಲಿ ಉತ್ಖನನ ಮಾಡಿ ಸಂಗ್ರಹಿಸಿದ್ದರು. ರವಿ ಕೋರಿಶೆಟ್ಟರ್ ಅವರು ವಿದ್ಯಾರ್ಥಿಯಾಗಿ ಈ ಉತ್ಖನನದಲ್ಲಿ ಪಾಲ್ಗೊಂಡಿದ್ದರು.

ಈ ವಸ್ತು ಸಂಗ್ರಹಾಲಯದಲ್ಲಿ ಜಗತ್ತಿನ ವಿವಿಧ ದೇಶಗಳಲ್ಲಿ, ಭಾರತ ಸೇರಿದಂತೆ ಹಲವೆಡೆಯಲ್ಲಿ ವಿವಿಧ ಕಾಲಘಟ್ಟಗಳಲ್ಲಿ ದೊರೆತ 15 ಮಾನವನ ತಲೆಬುರುಡೆಗಳ ಮಾದರಿ ಪ್ರದರ್ಶನಕ್ಕೆ ಇಡಲಾಗಿದೆ. ಒಂದರಲ್ಲಿ ಪುರಾತನ ತಲೆ ಬುರುಡೆ ಎಂದರೆ 32 ಲಕ್ಷ ವರ್ಷದ ಹಿಂದಿನದ್ದಾಗಿದ್ದು, ಇತ್ತೀಚಿನದ್ದು ಎಂದರೆ ಇಂಡೋನೇಷ್ಯಾದ 18,000 ಪುರಾತನದ್ದಾಗಿದೆ.

lion man and venus sculpture  in Robert Bruce Foote Sangankallu Archaeological Museum
ಸಂಗನಕಲ್ಲು ಪ್ರಾಕ್ತನ ವಸ್ತು ಸಂಗ್ರಹಾಲಯ (ETV Bharat)

ಜನ ಸಾಮಾನ್ಯರಿಗೆ ಪ್ರಾಚೀನತೆ ಪಾಠ: ಜಿಲ್ಲಾಡಳಿತದ ಸಹಕಾರದೊಂದಿಗೆ ಪ್ರಾಕ್ತನ ತಜ್ಞರಾದ ಪ್ರೊ. ರವಿ ಕೋರಿಶೆಟ್ಟರ್ ಅವರ ನೇತೃತ್ವದಲ್ಲಿ ಸ್ಥಾಪಿಸಲಾದ ಈ ವಸ್ತು ಸಂಗ್ರಹಾಲಯದಲ್ಲಿ ಇರುವ ಅಪರೂಪದ ಸಂಗ್ರಹವು ಇತಿಹಾಸ ಹಾಗೂ ಪ್ರಾಕ್ತನ ವಿಭಾಗದ ವಿದ್ಯಾರ್ಥಿಗಳಿಗೆ ವಿಷಯಗಳನ್ನು ಸುಲಭವಾಗಿ ಅರಿತುಕೊಳ್ಳಲು ಸಹಕಾರಿಯಾಗಿದೆ. ಶಾಲಾ ಮಕ್ಕಳಿಗೆ ಹಾಗೂ ಸಾಮಾನ್ಯ ಜನರಿಗೂ ಇತಿಹಾಸ ತಿಳಿಯಲು ಒಂದು ಅವಕಾಶವಾಗಿದೆ.

ಹೊಸದಾಗಿ ಸೇರ್ಪಡೆಯಾದ ಆಕೃತಿಗಳು ಹಾಗೂ ಶೀಲಾ ಉಪಕರಣಗಳ ವಸ್ತು ಸಂಗ್ರಹಾಲಯದ ಮಹತ್ವ ಹಾಗೂ ಶೈಕ್ಷಣಿಕ ಮಟ್ಟವನ್ನು ಹೆಚ್ಚಿಸಿದೆ. ಈ ವಸ್ತು ಸಂಗ್ರಹಾಲಯದಲ್ಲಿ ಇರುವ ಸಂಗ್ರಹವನ್ನು ಹೆಚ್ಚಿನ ಅಧ್ಯಯನ ಹಾಗೂ ಸಂಶೋಧನೆ ಮಾಡಲು ಇಚ್ಚಿಸುವ ಸಂಶೋಧನಾ ವಿದ್ಯಾರ್ಥಿಗಳಿಗೆ ಉಪಯೋಗಿಸಿಕೊಳ್ಳಲು ಮುಕ್ತ ಅವಕಾಶ ಕಲ್ಪಿಸಲಾಗಿದೆ. ಈಗಾಗಲೇ ದೇಶ ಹಾಗೂ ವಿದೇಶಗಳಲ್ಲಿ ಸಂಶೋಧನೆ ನಡೆಸುತ್ತಿರುವ ವಿದ್ಯಾರ್ಥಿಗಳು ಇದರ ಲಾಭವನ್ನು ಪಡೆದುಕೊಂಡಿದ್ದಾರೆ ಎಂದರು.

ಇದನ್ನೂ ಓದಿ: ನವರಾತ್ರಿ ವಿಶೇಷ: ಭಕ್ತರ ಸೆಳೆಯುತ್ತಿದೆ ಮಂಗಳೂರಿನ ಅಧಿದೇವತೆ ಮಂಗಳಾದೇವಿ ದೇವಸ್ಥಾನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.