ETV Bharat / state

ತಮಿಳುನಾಡು ಏನಾದರೂ ಮಾಡಲಿ, ನಾನು ಮೇಕೆದಾಟು ಕಟ್ಟಲೆಂದೇ ನೀರಾವರಿ ಸಚಿವನಾಗಿದ್ದೇನೆ: ಡಿಕೆಶಿ - LET TAMIL NADU DO ANYTHING - LET TAMIL NADU DO ANYTHING

ಡಿಎಂಕೆ ಚುನಾವಣಾ ಪ್ರಣಾಳಿಕೆಯಲ್ಲಿ ಮೇಕೆದಾಟು ಅಣೆಕಟ್ಟು ನಿಲ್ಲಿಸುವ ಭರವಸೆ ವಿರುದ್ಧ ಮಾತನಾಡಿರುವ ಡಿಸಿಎಂ ಡಿಕೆ ಶಿವಕುಮಾರ್​, ಅಣೆಕಟ್ಟು ಕಟ್ಟಿಯೇ ಕಟ್ಟುತ್ತೇನೆ ಎಂದು ಹೇಳಿದ್ದಾರೆ.

DCM D K Shivakumar
ಡಿಸಿಎಂ ಡಿ ಕೆ ಶಿವಕುಮಾರ್​
author img

By ETV Bharat Karnataka Team

Published : Mar 21, 2024, 5:41 PM IST

Updated : Mar 21, 2024, 5:54 PM IST

ಬೆಂಗಳೂರು: "ತಮಿಳುನಾಡು ಏನಾದರೂ ಮಾಡಿಕೊಳ್ಳಲಿ. ನಾನು ಮೇಕೆದಾಟು ಕಟ್ಟಲೆಂದೇ ಜಲ ಸಂಪನ್ಮೂಲ ಇಲಾಖೆ ಜವಾಬ್ದಾರಿ ತೆಗೆದುಕೊಂಡಿದ್ದೇನೆ" ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.

ಡಿಸಿಎಂ ಡಿ ಕೆ ಶಿವಕುಮಾರ್​

ಸದಾಶಿವನಗರ ನಿವಾಸದಲ್ಲಿ ಮಾತನಾಡಿದ ಅವರು, ಡಿಎಂಕೆ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಮೇಕೆದಾಟು ಅಣೆಕಟ್ಟು ಕಟ್ಟಲು ಬಿಡುವುದಿಲ್ಲ ಎಂದು ಹೇಳಿರುವ ಬಗ್ಗೆ ಪ್ರತಿಕ್ರಿಯಿಸಿ, "ಅವರ ಹೋರಾಟ ಅವರು ಮಾಡಲಿ. ಕಾವೇರಿ ನೀರು ನಿರ್ವಹಣಾ ಸಮಿತಿಗೆ ನೀರಿನ ಸಮಸ್ಯೆಯ ಅರಿವಿದೆ. ಅವರು ನಮಗೆ ನ್ಯಾಯ ಕೊಡಲೇಬೇಕು. ಕೋರ್ಟ್​ನಲ್ಲೂ ನಮಗೆ ನ್ಯಾಯ ಸಿಗುತ್ತದೆ.‌ ಅದು ಇಂಡಿಯಾ ಮೈತ್ರಿಕೂಟದ ಪ್ರಣಾಳಿಕೆಯಲ್ಲ. ಅದು ಅವರ ಪಕ್ಷದ ಪ್ರಣಾಳಿಕೆಯಾಗಿದೆ. ಅದು ಅವರ ರಾಜಕೀಯ ಬಯಕೆ ಅಷ್ಟೇ" ಎಂದು ಹೇಳಿದರು.

"ಮೇಕೆದಾಟು ಯೋಜನೆ ಕೇವಲ ಕರ್ನಾಟಕಕ್ಕೆ ಮಾತ್ರವಲ್ಲ. ಎರಡೂ ರಾಜ್ಯಗಳಿಗೆ ಉಪಯೋಗವಾಗುತ್ತದೆ. ಇಡೀ ದೇಶದ ಜನರು ಕರ್ನಾಟಕದಲ್ಲಿ ಇದ್ದಾರೆ. ಈ ಯೋಜನೆಯಿಂದ ಇಡೀ ದೇಶದ ಜನರಿಗೆ ಉಪಯೋಗವಾಗುತ್ತದೆ. ನಮ್ಮ ಸಹೋದರರು ಬೆಂಗಳೂರಿನಲ್ಲೂ ಇದ್ದಾರೆ. ಅವರಿಗೂ ಒಳ್ಳೆಯದು ಆಗಲಿ ಎಂದು ಮೇಕೆದಾಟು ಯೋಜನೆಯ ಪರವಾಗಿ ತಮಿಳುನಾಡು ಮಾತನಾಡುವ ಒಳ್ಳೆಯ ಕಾಲ ಬರಲಿದೆ" ಎಂದರು.

ಇಂದು ಸಂಜೆ ಅಂತಿಮ ಪಟ್ಟಿ: "ಕರ್ನಾಟಕದ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಂಡಿದ್ದು, ತಮಿಳುನಾಡು, ಉತ್ತರಪ್ರದೇಶ ರಾಜ್ಯಗಳ ಪಟ್ಟಿ ಅಂತಿಮಗೊಳ್ಳುತ್ತಿದೆ. ಗುರುವಾರ ಸಂಜೆ ಲೋಕಸಭಾ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗುತ್ತದೆ. ಇಂದು ಸಂಜೆಯೇ ಎಲ್ಲ ಅಭ್ಯರ್ಥಿಗಳು ಮತ್ತು ಮಂತ್ರಿಗಳ ಜೊತೆ ಸಭೆ ಇಟ್ಟುಕೊಂಡಿದ್ದೇವೆ" ಎಂದರು.

ನಾಲ್ಕು ಕ್ಷೇತ್ರಗಳಲ್ಲಿ ಗೊಂದಲ ಉಂಟಾಗಿದೆ ಎನ್ನುವ ಪ್ರಶ್ನೆಗೆ "ನಾಲ್ಕು ಕ್ಷೇತ್ರಗಳ ಬಗ್ಗೆ ಒಂದು ಸುತ್ತಿನ ಮಾತುಕತೆ ನಡೆಸಲಾಗಿದೆ. ಜೂಮ್ ಮೂಲಕ ಚರ್ಚೆ ಮಾಡುತ್ತೇವೆ" ಎಂದು ತಿಳಿಸಿದರು.

"ನನ್ನ 40 ವರ್ಷಗಳ ರಾಜಕೀಯ ಇತಿಹಾಸದಲ್ಲೇ ಅತೀ ಹೆಚ್ಚು ಯುವ, ಮಹಿಳಾ, ವಿದ್ಯಾವಂತ, ಪ್ರಜ್ಞಾವಂತರಿಗೆ, ಹೊಸ ಮುಖಗಳಿಗೆ ಅವಕಾಶ ಮಾಡಿಕೊಟ್ಟಿದ್ದೇವೆ. ಇವರೆಲ್ಲಾ ಈ ಬಾರಿ ಗೆದ್ದು ಭವಿಷ್ಯದಲ್ಲಿ ಪಕ್ಷದ ದೊಡ್ಡ ನಾಯಕರಾಗಿ ಬೆಳೆಯುತ್ತಾರೆ" ಎಂದರು.

ಕೇವಲ ಸಚಿವರ ಮಕ್ಕಳಿಗೆ ಟಿಕೆಟ್ ನೀಡಿದ್ದು, ಕಾರ್ಯಕರ್ತರಿಗೆ ನೀಡಿಲ್ಲ ಎನ್ನುವ ಪ್ರಶ್ನೆಗೆ "ಕಾರ್ಯಕರ್ತರಿಗೂ ಟಿಕೆಟ್ ನೀಡಿದ್ದೇವೆ. ಯಾರು ಟಿಕೆಟ್ ಕೇಳಿದ್ದಾರೋ ಅವರಿಗೆ ನೀಡಿದ್ದೇವೆ. ಯಾರು ಕೇಳುವುದಿಲ್ಲವೋ ಅವರಿಗೆ ನೀಡಲು ಆಗುವುದಿಲ್ಲ. ಮೊದಲು ಆಸಕ್ತಿ, ಛಲ ಇರಬೇಕು" ಎಂದರು.

ಅನುಭವ ಮನುಷ್ಯನನ್ನು ಮಾಗಿಸುತ್ತದೆ: ಬಿಜೆಪಿ ಸ್ವಚ್ಛಗೊಳಿಸುತ್ತೇನೆ ಎನ್ನುವ ಸದಾನಂದಗೌಡರ ಹೇಳಿಕೆಗೆ ಪ್ರತಿಕ್ರಿಯಿಸಿ "ಅವರು ಅನುಭವದಿಂದ ಈ ಮಾತನ್ನು ಹೇಳಿದ್ದಾರೆ. ಅನುಭವ ಮನುಷ್ಯನನ್ನು ಮಾಗಿಸುತ್ತದೆ" ಎಂದರು.

ಧಾರ್ಮಿಕ ಸಂಸ್ಥೆಗಳ ಮಸೂದೆಯನ್ನು ರಾಜ್ಯಪಾಲರು ಹಿಂತಿರುಗಿಸಿರುವ ಕುರಿತು ಪ್ರತಿಕ್ರಿಯಿಸಿ, "ಈ ವಿಚಾರದಲ್ಲಿ ಬಿಜೆಪಿಯದ್ದು ಇಬ್ಬಗೆಯ ನೀತಿ. ಸಣ್ಣ, ಸಣ್ಣ ದೇವಾಲಯಗಳ, ಅರ್ಚಕರ ಅಭಿವೃದ್ಧಿಗೆ ಪೂರಕವಾಗಿದ್ದ ಈ ಮಸೂದೆಯನ್ನು ಬಿಜೆಪಿ ವಿರೋಧಿಸಿ ತನ್ನ ನಿಜ ಬಣ್ಣ ಬಯಲು ಮಾಡಿಕೊಂಡಿದೆ. ಮುಂದಿನ ಜೂನ್ ತಿಂಗಳ ಅಧಿವೇಶನದಲ್ಲಿ ಬಹುಮತ ಸಿಗಲಿದೆ" ಎಂದು ಉತ್ತರಿಸಿದರು.

ಇದನ್ನೂ ಓದಿ: ವಿರೋಧ ಪಕ್ಷದ ಆರೋಪಗಳಿಗೆ ತಲೆಕೆಡಿಸಿಕೊಳ್ಳದೇ ಅಭಿವೃದ್ಧಿ ಮೇಲೆ ಚುನಾವಣೆ ಎದುರಿಸುವೆ: ಬಿ ವೈ ರಾಘವೇಂದ್ರ - B Y RAGHAVENDRA

Last Updated : Mar 21, 2024, 5:54 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.