ರಾಯಚೂರು: ಚಿರತೆಯೊಂದು ರೈತರ ಮೇಲೆರಗಿ ಗಾಯಗೊಳಿಸಿರುವ ಘಟನೆ ರಾಯಚೂರಿನ ಕಂಬದಾಳ ಗ್ರಾಮದ ಗುಡ್ಡದ ಬಳಿ ನಡೆದಿದೆ. ಮಲ್ಲಣ್ಣ ಕಂಬದಾಳ, ರಂಗನಾಥ, ನಾಯಕ ಕಂಬದಾಳ ಮತ್ತು ರಮೇಶ ಕಂಬದಾಳ ಎಂಬವರು ಗಾಯಗೊಂಡಿದ್ದಾರೆ.
ಗ್ರಾಮದ ಹೊರವಲಯದ ಜಮೀನಿನಲ್ಲಿ ರೈತರು ಎಂದಿನಂತೆ ಕೆಲಸ ಮಾಡುತ್ತಿದ್ದರು. ಈ ವೇಳೆ, ಚಿರತೆ ದಾಳಿ ಮಾಡಿದೆ. ಗಾಯಗೊಂಡವರನ್ನು ದೇವದುರ್ಗ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನಾ ಸ್ಥಳಕ್ಕೆ ದೇವದುರ್ಗ ಪೊಲೀಸರು ಭೇಟಿ ನೀಡಿದರು. ಅರಣ್ಯ ಇಲಾಖೆ ಚಿರತೆ ಸೆರೆಗೆ ಕ್ರಮ ಕೈಗೊಳ್ಳುತ್ತಿದೆ.
ತುಮಕೂರಿನಲ್ಲೂ ಚಿರತೆ ದಾಳಿ ಭೀತಿ: ಕುಣಿಗಲ್ ತಾಲ್ಲೂಕಿನ ವಗರಗೆರೆ ಗ್ರಾಮದಲ್ಲೂ ಚಿರತೆ ಆಗಾಗ್ಗೆ ಕಾಣಿಸಿಕೊಂಡು ಆತಂಕ ಸೃಷ್ಟಿಸಿದೆ. ಶನಿವಾರ ಮಧ್ಯಾಹ್ನ ಮೇಕೆ, ರಾತ್ರಿ ಸಾಕು ನಾಯಿಯನ್ನು ಹೊತ್ತೊಯ್ದಿದ್ದು, ಸಂಜೆಯಾಗುತ್ತಿದ್ದಂತೆ ಗ್ರಾಮದಲ್ಲಿ ಸಂಚಾರ ನಡೆಸಿದೆ. ಹೀಗಾಗಿ, ಸಾರ್ವಜನಿಕರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.
ರಾಜಣ್ಣ ಎಂಬವರಿಗೆ ಸೇರಿದ ಮೇಕೆ ಚಿರತೆಗೆ ಆಹಾರವಾಗಿದೆ. ಒಂದೇ ದಿನ ಎರಡು ಬಾರಿ ದಾಳಿ ನಡೆಸಿದೆ. ಇದರಿಂದ ಗ್ರಾಮಸ್ಥರು ಆತಂಕ್ಕೊಳಗಾಗಿದ್ದಾರೆ. ಚಿರತೆ ಸೆರೆ ಹಿಡಿಯುವಂತೆ ಅರಣ್ಯಾಧಿಕಾರಿಗಳಿಗೆ ಒತ್ತಾಯಿಸಲಾಗಿದೆ.
ಇದನ್ನೂ ಓದಿ: ಪ್ರತ್ಯೇಕ ಪ್ರಕರಣ: ಒಂದೇ ದಿನ ಎರಡು ಚಿರತೆ ಸೆರೆ - leopard captured