ETV Bharat / state

ಪರಿಷತ್ ಚುನಾವಣೆ: ಕಾಂಗ್ರೆಸ್‌ ಆಕಾಂಕ್ಷಿಗಳ ಪೈಪೋಟಿ - Council Election - COUNCIL ELECTION

ಎಂಎಲ್ಸಿ ಚುನಾವಣೆಯಲ್ಲಿ ಸದ್ಯದ ಸಂಖ್ಯಾಬಲದ ಆಧಾರದಲ್ಲಿ ಕಾಂಗ್ರೆಸ್​​ಗೆ 7 ಸ್ಥಾನ ಸಿಗಲಿದೆ. ಈ ಏಳು ಸ್ಥಾನಕ್ಕಾಗಿ ಪಕ್ಷದಲ್ಲಿ ತೀವ್ರ ಪೈಪೋಟಿ ನಡೆಯುತ್ತಿದೆ.

legislative-council-election-congress-aspirants-doing-lobby-for-ticket
ಸಂಗ್ರಹ ಚಿತ್ರ (ETV Bharat)
author img

By ETV Bharat Karnataka Team

Published : May 24, 2024, 1:38 PM IST

ಬೆಂಗಳೂರು: ವಿಧಾನಸಭೆಯಿಂದ ಪರಿಷತ್ ಚುನಾವಣೆಗೆ ಮುಹೂರ್ತ ಫಿಕ್ಸ್ ಆಗಿದ್ದು, ಎಂಎಲ್ಸಿ ಸ್ಥಾನಕ್ಕಾಗಿ ವಲಸಿಗರು, ಮೂಲ ಕಾಂಗ್ರೆಸ್ಸಿಗರಿಂದ ಲಾಬಿ ಜೋರಾಗಿದೆ. ಸದ್ಯದ ಸಂಖ್ಯಾಬಲದ ಆಧಾರದಲ್ಲಿ ಕಾಂಗ್ರೆಸ್​​ಗೆ 7 ಸ್ಥಾನ ಸಿಗಲಿದೆ. ಈ ಸ್ಥಾನಗಳಿಗೆ ಸುಮಾರು 10 ಅಧಿಕ ಆಕಾಂಕ್ಷಿಗಳಿದ್ದು, ಜಾತಿವಾರು, ಪ್ರಾದೇಶಿಕವಾರು ಲೆಕ್ಕಾಚಾರ ನಡೆಯುತ್ತಿದೆ.

ಜಾತಿವಾರು ಲೆಕ್ಕ: 10 ಸ್ಥಾನಗಳಿಗೆ ಒಕ್ಕಲಿಗ ಕೋಟಾದಲ್ಲಿ 2, ಒಬಿಸಿಗೆ 2, ಅಲ್ಪಸಂಖ್ಯಾತರಿಗೆ 1, ದಲಿತ ಬಲಗೈಗೆ 1, ಲಂಬಾಣಿಗೆ 1, ಲಿಂಗಾಯತರಿಗೆ 1 ಸೀಟು ನೀಡುವ ಬಗ್ಗೆ ಪಕ್ಷದಲ್ಲಿ ಚರ್ಚೆ ಶುರುವಾಗಿದೆ. ಇದರ ಮಧ್ಯೆ ಹಿರಿಯರು ಮತ್ತೊಮ್ಮೆ ಆಯ್ಕೆ ಬಯಸಿದ್ದಾರೆ. ಪಕ್ಷದಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡವರಿಗೆ ಹೊಸಬರು ಕೂಡ ಟಿಕೆಟ್ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ. ಸುಮಾರು 10ಕ್ಕೂ ಅಧಿಕ ಮಂದಿ ಆಕಾಂಕ್ಷಿಗಳು ಲಾಬಿ ನಡೆಸುತ್ತಿದ್ದಾರೆ. ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿರುವುದರಿಂದ ಯಾರಿಗೆ ಕೊಡಬೇಕೆಂಬ ಗೊಂದಲ ಕೈ ನಾಯಕರಲ್ಲಿದೆ.

ಮೂವರು ಬಹುತೇಕ ಫಿಕ್ಸ್?: ತಂದೆಗಾಗಿ ಕ್ಷೇತ್ರ ತ್ಯಾಗ ಮಾಡಿದ ಸಿಎಂ ಪುತ್ರ ಯತೀಂದ್ರ ಅವರಿಗೆ ಮೇಲ್ಮನೆ ಪ್ರವೇಶ ಬಹುತೇಕ ಪಕ್ಕಾ ಎನ್ನಲಾಗಿದೆ. ಇನ್ನೂ ನಾಲ್ಕು‌ ವರ್ಷ ಅಧಿಕಾರದಿಂದ ಯತೀಂದ್ರ ದೂರ ಉಳಿಯುವುದನ್ನು ತಪ್ಪಿಸಲು ಅವರಿಗೆ ಎಂಎಲ್ಸಿ ಸ್ಥಾನ ಕೊಡಿಸುವ ತೀರ್ಮಾನ ನಡೆಸಲಾಗಿದೆ. ಇದಕ್ಕೆ ಎಐಸಿಸಿ ಮಲ್ಲಿಕಾರ್ಜುನ ಖರ್ಗೆ ಹಾಗೂ ಡಿಸಿಎಂ ಡಿಕೆಶಿ ಸಹಮತ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಇದರ ಜೊತೆಗೆ ಸಚಿವ ಬೋಸ್ ರಾಜು ಹಾಗೂ ಸಿಎಂ ಆಪ್ತರಾದ ಕೆ. ಗೋವಿಂದರಾಜುರನ್ನು ಮತ್ತೆ ಮುಂದುವರಿಸುವ ತೀರ್ಮಾನಕ್ಕೂ ಬರಲಾಗಿದೆ ಎಂದು ಹೇಳಲಾಗಿದೆ.

ವಲಸಿಗರು, ಹಾಲಿಗಳಿಂದ ತೀವ್ರ ಲಾಬಿ: ಇತ್ತ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿರುವ ವಲಸಿಗರೂ ಎಂಎಲ್ಸಿ ಸ್ಥಾನಕ್ಕಾಗಿ ತೀವ್ರ ಪೈಪೋಟಿ ನಡೆಸುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ಸೇರಿರುವ ತೇಜಸ್ವಿನಿ ಗೌಡ, ಕೆ.ಪಿ.ನಂಜುಂಡಿ ಪರಿಷತ್ ಟಿಕೆಟ್​ಗಾಗಿ ಲಾಬಿಗೆ ಮುಂದಾಗಿದ್ದಾರೆೆ. ಇತ್ತೀಚಿಗೆ ಪಕ್ಷಕ್ಕೆ ಸೇರಿದ ಮಾಲೀಕಯ್ಯ ಗುತ್ತೇದಾರ್, ಬಾಬುರಾವ್ ಚಿಂಚನಸೂರ್, ಮಾಜಿ ಸಂಸದ ಕರಡಿ ಸಂಗಣ್ಣ ಕೂಡ ಮೇಲ್ಮನೆ‌ ಪ್ರವೇಶಕ್ಕೆ ಪ್ರಯತ್ನಿಸುತ್ತಿದ್ದಾರೆ. ಇತ್ತ ಹಾಲಿ ಸದಸ್ಯರಲ್ಲಿ ಅರವಿಂದ ಕುಮಾರ್ ಅರಳಿ, ಕೆ.ಹರೀಶ್ ಕುಮಾರ್ ಮತ್ತೊಂದು ಅವಕಾಶಕ್ಕಾಗಿ ಪ್ರಯತ್ನಿಸುತ್ತಿದ್ದಾರೆ.

ಹೆಚ್ಚಾಗಿರುವ ಆಕಾಂಕ್ಷಿಗಳ ದಂಡು: ಬಿ.ಎಲ್.ಶಂಕರ್, ಮಾಜಿ ಸಭಾಪತಿ(ಒಕ್ಕಲಿಗ), ವಿ.ಆರ್.ಸುದರ್ಶನ್, ಮಾಜಿ ಸಭಾಪತಿ(ಗಾಣಿಗ), ರಫಿಕ್ ಅಹ್ಮದ್, ಕೈ ಅಲ್ಪಸಂಖ್ಯಾತ ಘಟಕದ ಉಪಾಧ್ಯಕ್ಷ, ವಿನಯ್ ಕಾರ್ತಿಕ್, ಕೆಪಿಸಿಸಿ ಕಜಾಂಚಿ(ಒಕ್ಕಲಿಗ), ನಟರಾಜ್ ಗೌಡ, ಕಾಂಗ್ರೆಸ್ ವಕ್ತಾರ(ಒಕ್ಕಲಿಗ), ರಾಮಚಂದ್ರಪ್ಪ,ಬಿಬಿಎಂಪಿ ಮಾಜಿ ಮೇಯರ್(ಕುರುಬ), ಮುದ್ದುಗಂಗಾಧರ್, ಖರ್ಗೆ ಆಪ್ತ (ಬಲಗೈ), ಸೂರಜ್ ಹೆಗ್ಡೆ, ಅರಸು ಮೊಮ್ಮಗ, ಪೂರ್ಣಿಮಾ ಶ್ರೀನಿವಾಸ್,ಮಾಜಿ ಶಾಸಕಿ(ಯಾದವ), ಸಂದೀಪ್,ಎಐಸಿಸಿ ಕಾರ್ಯದರ್ಶಿ(ಒಕ್ಕಲಿಗ), ಮುಂಡರಗಿ ನಾಗರಾಜ್,(ದಲಿತ), ರಮೇಶ್ ಬಾಬು(ಬಲಿಜಿಗ) ಕೈ ಪಾಳಯದ ಆಕಾಂಕ್ಷಿಗಳಾಗಿದ್ದಾರೆ.

ಚುನಾವಣೆ ಕುರಿತು ಮಾತನಾಡಿರುವ ಸಚಿವ ಸತೀಶ್ ಜಾರಕಿಹೊಳಿ, ಎಂಎಲ್‌ಸಿ ಸ್ಥಾನವನ್ನು ಬೆಂಗಳೂರು ಅಷ್ಟೇ ಅಲ್ಲ, ಉತ್ತರ ಕರ್ನಾಟಕ ಭಾಗಕ್ಕೆ ಕೊಟ್ರೆ ಪಕ್ಷಕ್ಕೆ, ಸಮುದಾಯಕ್ಕೆ ಅನುಕೂಲ ಆಗಲಿದೆ. ಬೆಂಗಳೂರಿನಲ್ಲಿರುವವರಿಗೆ ನೀಡಿದರೆ ಪಕ್ಷಕ್ಕೆ ಅನುಕೂಲವಿಲ್ಲ. ಕನಿಷ್ಠ ನಮಗೆ ಎರಡು ಪರಿಷತ್ ಸ್ಥಾನ ಉತ್ತರ ಕರ್ನಾಟಕ ಭಾಗ, ಹೆಚ್ಚು ಗ್ರಾಮೀಣ ಪ್ರದೇಶಕ್ಕೆ ಕೊಡಬೇಕು ಎಂದು ಒತ್ತಾಯಿಸಿದ್ದಾರೆ.

ಮೂರು ಶಿಕ್ಷಕರು ಹಾಗೂ ಮೂರು ಪದವೀಧರ ಕ್ಷೇತ್ರಗಳಿಗೆ ಜೂನ್ 3ರಂದು ಚುನಾವಣೆ ನಡೆಯಲಿದೆ. ವಿಧಾನಸಭೆಯಿಂದ ಪರಿಷತ್ ಆಯ್ಕೆಯಾಗುವ 11 ಸ್ಥಾನಕ್ಕೆ ಜೂ.13ಕ್ಕೆ ಚುನಾವಣೆ ನಿಗದಿಯಾಗಿದೆ.

ಇದನ್ನೂ ಓದಿ: ಪರಿಷತ್ ಚುನಾವಣೆ: ಕಣಕ್ಕಿಳಿದ ಬಂಡಾಯ ಅಭ್ಯರ್ಥಿಗಳನ್ನು ಉಚ್ಚಾಟಿಸಿದ ಕಾಂಗ್ರೆಸ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.