ETV Bharat / state

ನ್ಯಾ.ಪ್ರಸನ್ನ ಬಾಲಚಂದ್ರ ವರಾಳೆ, ನ್ಯಾ. ಪಿ.ಎಸ್​. ದಿನೇಶ್​ ಕುಮಾರ್​ಗೆ ಆತ್ಮೀಯ ಬೀಳ್ಕೊಡುಗೆ

ಸುಪ್ರೀಂ ಕೋರ್ಟ್​ಗೆ ಪದೋನ್ನತಿ ಪಡೆದ ಪ್ರಸನ್ನ ಬಾಲಚಂದ್ರ ವರಾಳೆ, ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ನಿವೃತ್ತರಾದ ಪಿ.ಎಸ್. ದಿನೇಶ್​ ಕುಮಾರ್​ ಅವರಿಗೆ ವಕೀಲರ ಸಂಘ ಬೀಳ್ಕೊಡುಗೆ ನೀಡಿತು.

ಬೀಳ್ಕೊಡುಗೆ
ಬೀಳ್ಕೊಡುಗೆ
author img

By ETV Bharat Karnataka Team

Published : Feb 24, 2024, 10:13 PM IST

ಬೆಂಗಳೂರು: ಕರ್ನಾಟಕ ಹೈಕೋರ್ಟ್​​ನ ಮುಖ್ಯನ್ಯಾಯಮೂರ್ತಿ ಸುಪ್ರೀಂ ಕೋರ್ಟ್​ಗೆ ಪದೋನ್ನತಿ ಪಡೆದ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ನಿವೃತ್ತರಾದ ಕನ್ನಡಿಗರೇ ಆದ ಪಿ.ಎಸ್. ದಿನೇಶ್​ ಕುಮಾರ್​ ಅವರಿಗೆ ಬೆಂಗಳೂರು ವಕೀಲರ ಸಂಘ ಆತ್ಮೀಯವಾಗಿ ಬೀಳ್ಕೊಡುಗೆ ನೀಡಿತು. ವಿಧಾನಸೌಧದ ಬ್ಯಾಂಕ್ವೆಟ್​ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಇಬ್ಬರೂ ನ್ಯಾಯಮೂರ್ತಿಗಳನ್ನು ವಕೀಲರ ಸಮೂಹದಿಂದ ಸನ್ಮಾನಿಸಿ ಬೀಳ್ಕೊಡುಗೆ ನೀಡಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ, ಈವರೆಗಿನ ನನ್ನ ಜೀವನದಲ್ಲಿ ಗಳಿಸಿರುವ ಸಾಧನೆಯಿದ್ದರೆ ಅದು ಡಾ. ಬಿ.ಆರ್.ಅಂಬೇಡ್ಕರ್​ ಅವರಿಂದಲೇ ಸಿಕ್ಕಿರುವುದಾಗಿದೆ. ಕರ್ನಾಟಕ ಹೈಕೋರ್ಟ್​​ನ ಮುಖ್ಯ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿದ 1 ವರ್ಷಕ್ಕೂ ಹೆಚ್ಚಿನ ಅವಧಿಯಲ್ಲಿ ಸ್ವತಃ ಅಂಬೇಡ್ಕರ್​ ಅವರು ವಕೀಲರಾಗಿ ವಾದ ಮಂಡಿಸಿದ್ದ ನೆನಪಿಗಾಗಿ ಚಿಕ್ಕೋಡಿ ನ್ಯಾಯಾಲಯಲ್ಲಿ ಶಿಲಾನ್ಯಾಸ ನೆರವೇರಿಸಿದ್ದು, ನನ್ನ ಇಡೀ ಜೀವನದಲ್ಲಿ ಮರೆಯಲಾದ ಸಂದರ್ಭವಾಗಿದೆ ಎಂದರು.

ತಮ್ಮ ಕುಟುಂಬ ಈ ಹಿಂದೆ ಎದುರಿಸಿದ್ದ ಸಂಕಷ್ಟಗಳು, ತಂದೆಯನ್ನು ಕಳೆದುಕೊಂಡ ಸಂದರ್ಭಗಳನ್ನು ನೆನೆಯುತ್ತಾ ಗದ್ಗದಿತರಾದರು. ಇಂದು ನಡೆಯುತ್ತಿರುವ ಕಾರ್ಯಕ್ರಮ ನಮ್ಮ ಕುಟುಂಬದ ಸದಸ್ಯರಿಂದ ಬೀಳ್ಕೊಡುಗೆ ಸ್ವೀಕರಿಸಿದಂತಾಗುತ್ತಿದೆ ಎಂದು ತಿಳಿಸಿದರು.

ನ್ಯಾ.ಪ್ರಸನ್ನ ಬಾಲಚಂದ್ರ ವರಾಳೆ, ನ್ಯಾ.ಪಿ.ಎಸ್​. ದಿನೇಶ್​ ಕುಮಾರ್ ಅವರಿಗೆ ಆತ್ಮೀಯ ಬೀಳ್ಕೊಡುಗೆ

ಮುಖ್ಯ ನ್ಯಾಯಮೂರ್ತಿ ಪಿ.ಎಸ್​. ದಿನೇಶ್​ ಕುಮಾರ್​ ಮಾತನಾಡಿ, ಯುವ ವಕೀಲರು ಯಾವುದೇ ಪ್ರಕರಣ ತಮ್ಮಲ್ಲಿ ಬಂದ ಬಳಿಕ ಅದರ ವಾಸ್ತವಾಂಶಗಳನ್ನು ತಿಳಿದುಕೊಳ್ಳಬೇಕು. ಆ ಅಂಶಗಳನ್ನು ಆಧರಿಸಿ ನ್ಯಾಯಮೂರ್ತಿಗಳಿಗೆ ನೇರವಾಗಿ ತಿಳಿಸುವಂತಾಗಬೇಕು. ಇವುಗಳನ್ನು ಅನುಸರಿಸಿದಲ್ಲಿ ವೃತ್ತಿಯಲ್ಲಿ ಬೆಳೆಯಲು ಮತ್ತು ತಮ್ಮ ಕಕ್ಷಿದಾರರಿಗೆ ನ್ಯಾಯ ಕೊಡಿಸಿದಂತಾಗಲಿದೆ ಎಂದು ಸಲಹೆ ನೀಡಿದರು.

ವಕೀಲರ ಸಂಘದ ಅಧ್ಯಕ್ಷ ವಿವೇಕ್​ ಸುಬ್ಬಾರೆಡ್ಡಿ ಮಾತನಾಡಿ, ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಅವರು ಹೈಕೋರ್ಟ್​​ಲ್ಲಿದ್ದ ಸಂದರ್ಭದಲ್ಲಿ ಯುವ ವಕೀಲರಿಗೆ ನ್ಯಾಯಾಲಯದಲ್ಲಿ ವಾದ ಮಂಡಿಸಲು ಪ್ರೋತ್ಸಾಹಿಸುತ್ತಿದ್ದರು. ಚಿಕ್ಕಮಗಳೂರಿನಲ್ಲಿ ವಕೀಲರ ಮೇಲೆ ಪೊಲೀಸರಿಂದ ಹಲ್ಲೆ ನಡೆದ ಸಂದರ್ಭದಲ್ಲಿ ಸಾವಧಾನವಾಗಿ ನಮ್ಮೆಲ್ಲರೊಂದಿಗೆ ಚರ್ಚೆ ನಡೆಸಿ ಪರಿಹಾರವನ್ನು ಕಂಡುಕೊಂಡಿದ್ದರು ಎಂದು ಹೇಳಿದರು.

ಜೊತೆಗೆ, ತುರ್ತು ಪ್ರಕರಣಗಳಲ್ಲಿ ಭಾನುವಾರವೂ ವಿಚಾರಣೆ ನಡೆಸಿ ಪರಿಹಾರಗಳನ್ನು ಕಂಡುಕೊಳ್ಳುವ ಮನಸ್ಥಿತಿ ಹೊಂದಿದ್ದರು. ಇದರಿಂದ ವಕೀಲರು ಹಾಗೂ ಕಕ್ಷಿದಾರರಿಗೆ ನೆರವಾಗುತ್ತಿತ್ತು. ಅಲ್ಲದೆ, ದಕ್ಷಿಣ ಭಾರತದಲ್ಲಿ ಸುಪ್ರೀಂಕೋರ್ಟ್ ಪೀಠ ಪ್ರಾರಂಭವಾಗುವ ಕುರಿತಂತೆ ಕೇಂದ್ರ ಸರ್ಕಾರ ನಿರ್ಧಾರ ತೆಗೆದುಕೊಂಡಿದ್ದು, ಈ ಪೀಠಕ್ಕೆ ವರಾಳೆ ಅವರು ನ್ಯಾಯಮೂರ್ತಿಯಾಗಿ ಮತ್ತೆ ದಕ್ಷಿಣ ಭಾರತಕ್ಕೆ ಬರಬೇಕು ಎಂದು ಆಶಯ ವ್ಯಕ್ತಪಡಿಸಿದರು.

ಮುಖ್ಯ ನ್ಯಾಯಮೂರ್ತಿ ಪಿ.ಎಸ್​. ದಿನೇಶ್​ ಕುಮಾರ್​ ಅವರು ರಾಜ್ಯ ಹೈಕೋರ್ಟ್​​ನಲ್ಲಿ ಡಿಜಿಟಲ್​ ತಂತ್ರಜ್ಞಾನಕ್ಕೆ ಮತ್ತಷ್ಟು ಚುರುಕು ನೀಡಿ ವಕೀಲರ ಸಮುದಾಯಕ್ಕೆ ನೆರವಾಗುವಂತೆ ಮಾಡಿದ್ದರು ಎಂದು ವಿವೇಕ್​ ಸುಬ್ಬಾರೆಡ್ಡಿ ಹೇಳಿದರು.

ಕಾರ್ಯಕ್ರಮದಲ್ಲಿ ನ್ಯಾಯಮೂರ್ತಿ ಕೆ.‌ ಸೋಮಶೇಖರ್, ಹೈಕೋರ್ಟ್ ನ್ಯಾಯಮೂರ್ತಿಗಳು ವಕೀಲರ ಪರಿಷತ್​ ಅಧ್ಯಕ್ಷ ವಿಶಾಲ್​ ರಘು, ಅಡ್ವೋಕೇಟ್​ ಜನರಲ್​ ಕೆ. ಶಶಿಕಿರಣ್​ ಶೆಟ್ಟಿ ಸೇರಿದಂತೆ ಹಲವು ಹಿರಿಯ ವಕೀಲರು ಭಾಗಿಯಾಗಿದ್ದರು.

ಇದನ್ನೂ ಓದಿ: ರಾಜ್ಯದಲ್ಲಿ ನೂತನ 33 ಸಿವಿಲ್​ ನ್ಯಾಯಾಧೀಶರ ನೇಮಕ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.